ಸಂಕಷ್ಟದಲ್ಲಿರುವವರ ಸಹಾಯಕ್ಕೆ ಧಾವಿಸಿದ ಗ್ರೆಗ್ ಚಾಪೆಲ್ Greg Chappell ಸಂಕಷ್ಟಕ್ಕೆ ಸಿಲುಕಿದ್ದಾರೆ
ಗ್ರೆಗ್ ಚಾಪೆಲ್, ಹೆಸರು ಕೇಳಿದ್ರೆ ಭಾರತೀಯ ಕ್ರಿಕೆಟ್ ಪ್ರೇಮಿಗಳ ಮೈ ಉರಿಯುತ್ತದೆ. ಹೌದು 2005-2007ರ ಅವಧಿಯಲ್ಲಿ ಭಾರತ ಕ್ರಿಕೆಟ್ ( Team India ) ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಗ್ರೆಗ್ ಚಾಪೆಲ್ ವಿವಾದಗಳಿಂದ ಸದಾ ಸುದ್ದಿಯಲ್ಲಿದ್ದರು. ಒಂದು ನಿಟ್ಟಿನಲ್ಲಿ ಹೇಳುವುದಾದ್ರೆ ಭಾರತೀಯ ಕ್ರಿಕೆಟ್ ತಂಡವನ್ನೇ ಹಾದಿ ತಪ್ಪಿಸಿದ್ರು ಅಂದ್ರೆ ತಪ್ಪಿಲ್ಲ.
ಅದೇ ಗ್ರೆಗ್ ಚಾಪೆಲ್. ಕ್ರಿಕೆಟ್ ದಂತಕಥೆ ಗ್ರೆಗ್ ಚಾಪೆಲ್ ( Cricket legend Greg Chappell ) ಅವರು ಈಗ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆರ್ಥಿಕವಾಗಿ ತೀರಾ ಕುಸಿದು ಹೋಗಿರುವ ಗ್ರೆಗ್ ಚಾಪೆಲ್ ( Greg Chappell ) ಸಹಾಯಕ್ಕೆ ಇದೀಗ ಅವರ ಸ್ನೇಹಿತರು ಧಾವಿಸಿದ್ದು , ಆನ್ ಲೈನ್ ಮೂಲಕ ನಿಧಿ ಸಂಗ್ರಹ ಕಾರ್ಯ ಪ್ರಾರಂಭಿಸಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದರ ಜೊತೆಗೆ ಮಾತನಾಡಿರುವ ಗ್ರೆಗ್ ಚಾಪೆಲ್, ತಾವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದನ್ನು ಒಪ್ಪಿಕೊಂಡಿದ್ದಾರೆ. ನಾನು ಚೆನ್ನಾಗಿದ್ದೇನೆ, ಹಾಗಂತ ಐಷಾರಾಮಿ ಜೀವನವನ್ನು ನಡೆಸುತ್ತಿಲ್ಲ ಅಂದಿದ್ದಾರೆ. ಮುಂದುವರಿದು ಮಾತನಾಡಿರು ಅವರು “I’m not on the bones of my a**e,” ಅಂದಿದ್ದಾರೆ.
ಇದನ್ನೂ ಓದಿ : Koffee With Karan Season 8 : ಭರಪೂರ ಮನರಂಜನೆಗೆ ಮತ್ತೊಂದು ವೇದಿಕೆ
“ನಾನು ಹತಾಶೆಯಲ್ಲಿದ್ದೇನೆ, ಸಂಕಷ್ಟದಲ್ಲಿದ್ದೇನೆ ಎಂದು ಹೇಳಲು ಇಚ್ಚಿಸೋದಿಲ್ಲ. ಆದರೆ ನಾನಂತು ಐಷಾರಾಮಿಯಾಗಿ ಬದುಕುತ್ತಿಲ್ಲ. ನಾನು ಸುದೀರ್ಘ ಕಾಲ ಕ್ರಿಕೆಟ್ ಆಡಿದ್ದೇನೆ, ಕ್ರಿಕೆಟ್ ಕುರಿತ ಹಲವು ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದೇನೆ. ಸಾಕಷ್ಟು ಅವಧಿಯನ್ನು ಕ್ರಿಕೆಟ್ ಕ್ಷೇತ್ರದಲ್ಲೇ ಕಳೆದ ಕಾರಣ, ನಾನು ಲಕ್ಸುರಿಯಾಗಿ ಬದುಕುತ್ತಿದ್ದೇನೆ ಎಂದು ಜನ ಭಾವಿಸಿದ್ದಾರೆ. ( I think most people assume that, because we played cricket, that we are all living in the lap of luxury. While I’m certainly not crying poor) ಆದರೆ ಅದು ಸುಳ್ಳು. ಖಂಡಿತವಾಗಿಯೂ ನಾನು ಬಡವ ಎಂದು ಅಳುತ್ತಿಲ್ಲವಾದರೂ, ಇಂದಿನ ಆಟಗಾರರ ಲಾಭವನ್ನು ನಾನು ಪಡೆದುಕೊಳ್ಳುತ್ತಿಲ್ಲ” ಎಂದು ಅವರು ಹೇಳಿದ್ದಾರೆ
ವರದಿಗಳ ಪ್ರಕಾರ, ಚಾಪೆಲ್ ಕಳೆದ ವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತನಗಾಗಿ GoFundMe ಪುಟವನ್ನು ಸ್ಥಾಪಿಸಲು “ಇಷ್ಟವಿಲ್ಲದೆ” ಒಪ್ಪಿಕೊಂಡರು ಅನ್ನಲಾಗಿದೆ,
ಹಾಗಾದ್ರೆ ಚಾಪೆಲ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಲು ಕಾರಣವೇನು, ಮಾಹಿತಿಯ ಪ್ರಕಾರ ಗ್ರೆಗ್ ಚಾಪೆಲ್ ಅವರು ತನಗಾಗಿ ಎಂದು ಯಾವುದೇ ಉಳಿತಾಯವನ್ನು ಮಾಡಿಕೊಂಡಿಲ್ಲವಂತೆ. ದುಡಿದ ಹಣವನ್ನು ಚಾಪೆಲ್ ಫೌಂಡೇಷನ್ ಗೆ ಸುರಿದಿರುವ ಅವರು ಆಸ್ಟ್ರೇಲಿಯಾದಲ್ಲಿ ಸೂರಿಲ್ಲದವರ ಸಹಾಯಕ್ಕೆ ನಿಂತಿದ್ದಾರೆ. ಸಂಕಷ್ಟದಲ್ಲಿರುವವರ ಸಹಾಯಕ್ಕೆ ಧಾವಿಸಿದ ಗ್ರೆಗ್ ಚಾಪೆಲ್ ಸಂಕಷ್ಟಕ್ಕೆ ಸಿಲುಕಿದ್ದಾರೆ ಅನ್ನಲಾಗಿದೆ.
Greg Chappell, former Australia player, going through financial crunch as friends set up fund-raising campaign
Discussion about this post