ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಇನ್ನಿಲ್ಲದ ಮಹತ್ವವಿದೆ. ಆಸ್ತಿಕರ ಮನೆ ಮುಂದೆ ತುಳಸಿ ಕಟ್ಟೆಯೊಂದು ಕಡ್ಡಾಯವಾಗಿ ಇರಲೇಬೇಕು. ಇನ್ನು ಆರ್ಯುವೇದದಲ್ಲೂ ತುಳಸಿಗೆ ಸಾಕಷ್ಟು ಮಹತ್ವವಿದೆ. ಹಲವು ರೋಗಗಳನ್ನು ನಿವಾರಿಸುವ ಶಕ್ತಿ ಪುಟ್ಟ ಗಿಡಕ್ಕಿದೆ. ಇನ್ನು ವಿಷ್ಣು, ಕೃಷ್ಣ ಹೀಗೆ ವಿವಿಧ ದೇವರ ಅರ್ಚನೆ ಸಂದರ್ಭದಲ್ಲೂ ತುಳಸಿ ಬೇಕೇ ಬೇಕು
ಆದರೆ ಇದೇ ತುಳಸಿ ಗಣಪತಿಗೆ ನಿಷೇಧ. ಅದ್ಯಾವ ಕಾರಣಕ್ಕೂ ಗಣೇಶನಿಗೆ ತುಳಸಿ ಅರ್ಪಿಸುವಂತಿಲ್ಲ. ಬದಲಾಗಿ ಈತನಿಗೆ ಗರಿಯನ್ನು ಅರ್ಪಿಸಲಾಗುತ್ತದೆ. ಹಾಗಾದ್ರೆ ವಿನಾಯಕನಿಗೆ ತುಳಸಿ ಅರ್ಪಿಸದಿರಲು ಕಾರಣವೇನು? ಈ ಬಗ್ಗೆ ಪುರಾಣಗಳಲ್ಲಿ ಹಲವು ಕಥೆಗಳಿದೆ.
ಅದೊಂದು ದಿನ ಗಣಪತಿ ನದಿ ದಂಡೆಯೊಂದರಲ್ಲಿ ತಪಸ್ಸನ್ನು ಆಚರಿಸುತ್ತಿದ್ದ, ಈ ವೇಳೆ ಅದೇ ಹಾದಿಯಲ್ಲಿ ಸಾಗುತ್ತಿದ್ದ ತುಳಸಿ ಅನ್ನುವ ಹೆಸರಿನ ಹುಡುಗಿ ಗಣಪತಿಯನ್ನು ನೋಡಿ ಮೋಹಿತಳಾಗುತ್ತಾಳೆ. ಅವನನ್ನು ಒಲಿಸಿಕೊಳ್ಳಲು ಪ್ರಯತ್ನ ಮಾಡುತ್ತಾಳೆ. ಗಾಯನ, ನೃತ್ಯ ಹೀಗೆ ತಪಸ್ಸು ಭಂಗ ಮಾಡಲು ಹೇಗೆಲ್ಲಾ ಸಾಧ್ಯವೋ ಅವೆಲ್ಲವನ್ನೂ ಮಾಡುತ್ತಾಳೆ ಆದರೆ ಗಣಪತಿ ಒಂದಿಷ್ಟು ವಿಚಲಿತನಾಗುವುದಿಲ್ಲ.
ಈ ವೇಳೆ ಮನ್ಮಥನ ಸಹಾಯ ಕೇಳಿದ ತುಳಸಿ, ಗಣಪತಿಯ ತಪಸ್ಸು ಭಂಗ ಮಾಡುವಂತೆ ಮನವಿ ಮಾಡುತ್ತಾಳೆ. ಅದೇ ಪ್ರಕಾರ ಮನ್ಮಥನು ಗಣಪತಿಯ ತಪಸ್ಸು ಕೆಡಿಸಲು ಪಂಚ ಬಾಣಗಳನ್ನು ಅವನ ಮೇಲೆ ಪ್ರಯೋಗಿಸುತ್ತಾನೆ. ಆ ಪ್ರಯತ್ನವೂ ವಿಫಲವಾಗುತ್ತದೆ. ಇದರಿಂದ ಸಿಟ್ಟಾದ ತುಳಸಿಯು ಗಣಪತಿಯನ್ನು ಶಪಿಸುತ್ತಾಳೆ. ನಿನ್ನ ಸುಂದರ ರೂಪವೇ ನಿನ್ನ ಅಹಂಕಾರಕ್ಕೆ ಕಾರಣ, ನಿನ್ನ ಸೌಂದರ್ಯಕ್ಕೆ ಕಾರಣವಾದ ಈ ದಂತಗಳಲ್ಲಿ ಒಂದು ದಂತ ಪರಶುರಾಮನೊಡನೆ ನಡೆಯುವ ಯುದ್ಧದಲ್ಲಿ ಮುರಿಯಲಿ ಅನ್ನುತ್ತಾಳೆ. ಮತ್ತೊಂದು ಕಥೆಯ ಪ್ರಕಾರ ತುಳಸಿ ಗಣೇಶನಿಗೆ ಎರಡೆರಡು ಬಾರಿ ಮದುವೆಯಾಗುವಂತೆ ಶಪಿಸಿದಳು ಅಂದಿದೆ.
ಈ ವೇಳೆ ತಪಸ್ಸಿನಿಂದ ಎಚ್ಚರಗೊಂಡ ಗಣಪತಿ, ತುಳಸಿ ಶಾಪದಿಂದ ಸಿಟ್ಟಾಗಿ ಪ್ರತಿ ಶಾಪವಾಗಿ ನೀನು ರಾಕ್ಷಸನನ್ನು ಮದುವೆಯಾಗುವಂತೆ ಆಗಲಿ ಎಂದು ಹೇಳಿಬಿಡುತ್ತಾನೆ ಎಂದು ಕಥೆ ಹೇಳಿದರೆ ಮತ್ತೊಂದು ಕಥೆಯಲ್ಲಿ ಗಿಡವಾಗಿ ಹುಟ್ಟು ಎಂದು ಶಪಿಸಿದ ಅಂದಿದೆ. ಇದಾದ ಬಳಿಕ ತುಳಸಿಯು ಗಣಪತಿಯಲ್ಲಿ ಕ್ಷಮೆ ಕೇಳುತ್ತಾಳೆ, ಅನುಗ್ರಹಕ್ಕಾಗಿ ಪ್ರಾರ್ಥಿಸುತ್ತಾಳೆ. ಆಗ ಗಣಪತಿಯು ನೀನು ಗಿಡವಾಗಿ ಹುಟ್ಟಿದರೂ ವಿಷ್ಣುವಿಗೆ ಅತ್ಯಂತ ಪ್ರಿಯಳಾಗುತ್ತೀ. ಹಾಗಂತ ನಾನು ಎಂದೆಂದಿಗೂ ನಿನ್ನ ಸ್ವೀಕರಿಸುವುದಿಲ್ಲ ಅನ್ನುತ್ತಾನಂತೆ. ಹೀಗಾಗಿ ಗಣಪತಿಗೆ ತುಳಸಿ ನಿಷಿದ್ದ ಅನ್ನಲಾಗಿದೆ.
ಇನ್ನು ರಾಕ್ಷಸನನ್ನು ಮದುವೆಯಾಗುವಂತೆ ಶಪಿಸಿದ ಕಾರಣ ಮುಂದೆ ತುಳಸಿ ಶಂಖಚೂಢ ಅನ್ನುವ ರಾಕ್ಷಸನನ್ನು ಮದುವೆಯಾಗುತ್ತಾಳೆ, ಈ ಶಂಖಚೂಢ ಡಂಬ ಅನ್ನುವ ರಾಕ್ಷಸನ ಪುತ್ರನಾಗಿದ್ದು, ವಿಷ್ಣುವಿನ ವರದಿಂದ ಜನಿಸಿದವನಾಗಿರುತ್ತಾನೆ. ಮುಂದೆ ಶಂಖಚೂಢನನ್ನು ವಧಿಸಲು ವಿಷ್ಣುವೇ ಬರುತ್ತಾನೆ ಎಂದು ಕಥೆ ಸಾಗುತ್ತದೆ.
Tulsi is the daughter of Dharmaraja (God of righteousness) in her youthful days was a great devotee of Narayana (Lord Vishnu). Once she was walking along the banks of ganges, she came across beautiful Ganesha sitting in deep meditation to Lord Krishna
Discussion about this post