ಟೋಕಿಯೋ : ಈ ಬಾರಿಯ ಒಲಿಂಪಿಕ್ಸ್ ನ ಪ್ರಾರಂಭದಲ್ಲೇ ಭಾರತಕ್ಕೆ ಶುಭ ಸುದ್ದಿಗಳು ಬರಲಾರಂಭಿಸಿದೆ. ಹಾಕಿ ತಂಡ ನ್ಯೂಜಿಲೆಂಡ್ ಅನ್ನು ಮಣಿಸಿದ ಬೆನ್ನಲ್ಲೇ ಭಾರತ ಅರ್ಚರಿ ಪಟುಗಳಾದ ದೀಪಿಕಾ ಹಾಗೂ ಪ್ರವೀಣ್ ಜಾಧವ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಭಾರತದ ದೀಪಿಕಾ ಕುಮಾರಿ ಹಾಗೂ ಪ್ರವೀಣ್ ಜಾಧವ್ ಚೈನಾ ತೈಫೆಯ ಟಾಂಗ್ ಚಿನ್ ಚುನ್ ಮತ್ತು ಲಿನ್ ಚಿಯಾ ಇನ್ ಜೋಡಿಯನ್ನು ಮಣಿಸುವ ಮೂಲಕ ಶನಿವಾರ ಮುಂಜಾನೆಯ ಹೊತ್ತಿಗೆ ಭಾರತಕ್ಕೆ ಗುಡ್ ನ್ಯೂಸ್ ಕೊಟ್ಚಿದ್ದಾರೆ.
4 ಸೆಟ್ ಗಳ ಪಂದ್ಯ ಇದಾಗಿದ್ದು, ಮೊದಲ ಸೆಟ್ ನಲ್ಲಿ ಚೈನೀಸ್ ತೈಪೆ 36 ಸ್ಕೋರ್ ಸಂಪಾದಿಸಿದರೆ, ಭಾರತ 35 ಸ್ಟೋರ್ ಗೆ ತೃಪ್ತಿ ಪಟ್ಟಿತ್ತು. ಎರಡನೇ ಸೆಟ್ ವಲ್ಲಿ ಎರಡೂ ತಂಡಗಳು 38 ಸ್ಕೋರ್ ಗಳಿಸಿತು. ಮೂರನೇ ಸೆಟ್ ನಲ್ಲಿ ಭಾರತ ತಂಡ 40 ಅಂಕ ಗಳಿಸಿದರೆ ತೈಪೆ ತಂಡ 35 ಅಂಕ ಪಡೆದಿತ್ತು. ಈ ಮೂಲಕ ಪಂದ್ಯ 3- 3 ರ ಸಮಬಲದಲ್ಲಿತ್ತು.
ಕೊನೆಯ ಸೆಟ್ ಎರಡೂ ತಂಡಗಳಿಗೂ ಸಾಕಷ್ಟು ಮಹತ್ವದಾಗಿತ್ತು. ಈ ವೇಳೆ ಮೊದಲು ಬಾಣ ಪ್ರಯೋಗಿಸಿದ ಚೈನೀಸ್ ತೈಪೆಯ ಆಟಗಾರರು 36 ಸ್ಕೋರ್ ಸಂಪಾದಿಸಿದರು. ಈ ವೇಳೆ ಲಯ ಕಳೆದುಕೊಳ್ಳದೆ ಆಟವಾಡಿದ ಭಾರತದ ಪ್ರವೀಣ್ ಜಾಧವ್ ಮತ್ತು ದೀಪಿಕಾ ಕುಮಾರ್ 37 ಅಂಕ ಗಳಿಸುವ ಮೂಲಕ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟರು.
Discussion about this post