ನವದೆಹಲಿ : ಉಪಚುನಾವಣೆ, ಸಾಲು ಸಾಲು ಹಬ್ಬ, ಪುನೀತ್ ಸಾವು ಹೀಗೆ ಕರ್ನಾಟಕದಲ್ಲಿ ನಡೆದ ಘಟನೆಗಳಿಂದ ಕೊರೋನಾ ಸೋಂಕಿನ ಮೂರನೇ ಅಲೆ ಯಾವಾಗಬೇಕಾದರೂ ಅಪ್ಪಳಿಸಬಹುದು ಅನ್ನುವ ಆತಂಕವನ್ನು ತಜ್ಞರು ಹೊರ ಹಾಕಿದ್ದಾರೆ. ಹೀಗಾಗಿ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ. ಇನ್ನು 15 ದಿನಗಳ ಕಾಲ ಜನ ಕೊರೋನಾ ಸೋಂಕಿನ ಲಕ್ಷಣಗಳಿಗೆ ತುತ್ತಾಗದಿದ್ರೆ ಕರ್ನಾಟಕ ದೊಡ್ಡದೊಂದು ಗಂಡಾಂತರದಿಂದ ಪಾರಾಗಿದೆ ಎಂದೇ ಅರ್ಥ.
ಈ ನಡುವೆ ಭಾರತದಲ್ಲಿ ಮೂರನೇ ಅಲೆ ಬರುವ ಸಾಧ್ಯತೆಗಳು ಕ್ಷೀಣಿಸಿದೆ ಅನ್ನುವ ಗುಡ್ ನ್ಯೂಸ್ ಒಂದನ್ನು ಏಮ್ಸ್ ಸಂಸ್ಥೆಯ ಹಿರಿಯ ಸಾಂಕ್ರಾಮಿಕ ರೋಗ ತಜ್ಞ ಡಾ. ಸಂಜಯ್.ಕೆ. ರಾಯ್ ಹೇಳಿದ್ದಾರೆ. ಎರಡನೇ ಅಲೆಯ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಸಹಜ ಅನ್ನುವಂತೆ ರೋಗ ನಿರೋಧಕ ಶಕ್ತಿಗಳು ಹೆಚ್ಚಾಗಿದೆ. ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಲಸಿಕೆಯನ್ನು ಕೂಡಾ ನೀಡಲಾಗಿದೆ. ಹೀಗಾಗಿ ಅಲೆಯ ಅಪಾಯ ತೀರಾ ಕಡಿಮೆ ಎನ್ನಲಾಗಿದೆ.
ಇದನ್ನೂ ಓದಿ : ಪುನೀತ್ ಅಂತಿಮ ದರ್ಶನಕ್ಕೆ 20 ಲಕ್ಷ ಜನ : ಬೆಂಗಳೂರಿನಲ್ಲಿ ಹೆಚ್ಚಾಯ್ತು ಮೂರನೇ ಅಲೆಯ ಆತಂಕ
ಇದೇ ವೇಳೆ ಯುರೋಪ್ ರಾಷ್ಟ್ರಗಳ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಡಾ. ಸಂಜಯ್.ಕೆ. ರಾಯ್ ಹೆಚ್ಚು ಜನ ಸೋಂಕಿಗೆ ತುತ್ತಾದರೆ ಮತ್ತೊಂದು ಅಲೆಯ ಸಂಭವನೀಯತೆ ಕಡಿಮೆಯಾಗುತ್ತದೆ. ಯೂರೋಪ್ ಮತ್ತು ಮಧ್ಯ ಏಷ್ಯಾದಲ್ಲಿ ಈ ಹಿಂದೆ ಸೋಂಕಿನ ಅಬ್ಬರ ಕಡಿಮೆ ಇತ್ತು. ಆದರೆ ಭಾರತದಲ್ಲಿ ಈ ಹಿಂದೆ ಸೋಂಕಿನ ಅಬ್ಬರ ತೀವ್ರವಾಗಿತ್ತು ಅಂದಿದ್ದಾರೆ. ಹೆಚ್ಚು ಜನರು ಸೋಂಕಿಗೆ ಒಳಗಾದ ಕೂಡಲೇ ಸೋಂಕಿನ ಪ್ರಮಾಣ ಸಹಜವಾಗಿಯೇ ಕಡಿಮೆಯಾಗುತ್ತದೆ ಅನ್ನುವುದು ರಾಯ್ ವಾದ.
ಇದನ್ನೂ ಓದಿ : ಡೆಲ್ಟಾ ತಳಿಯ ಮೊಮ್ಮಗನಿಂದ ಆತಂಕವಿಲ್ಲ :: ಮೂರನೇ ಅಲೆಯ ಆತಂಕ ನಿವಾರಿಸಿದ ತಜ್ಞರು
Discussion about this post