ಕೊರೋನಾ ಆತಂಕದ ನಡುವೆ ಟೋಕಿಯೋ ಒಲಿಂಪಿಕ್ಸ್ ನಡೆಸಬೇಕಾ ಬೇಡ್ವ ಅನ್ನುವ ವಾದ ವಿವಾದಗಳ ನಡುವೆಯೇ, ಪ್ರತಿಷ್ಟೆಗೆ ಬಿದ್ದ ಜಪಾನ್ ಸರ್ಕಾರ ಒಲಿಂಪಿಕ್ಸ್ ನಡೆಸಲು ಗಟ್ಟಿ ನಿರ್ಧಾರ ಮಾಡಿದೆ. ಮುಂದೆ ಅಲ್ಲಿ ಜನರಲ್ ಎಲೆಕ್ಷನ್ ನಡೆಯಲಿದೆ. ಹೀಗಾಗಿ ವರ್ಚಸ್ಸು ಹೆಚ್ಚಿಸಿಕೊಳ್ಳುವ ಸಲುವಾಗಿಯೇ ಟೋಕಿಯೋ ಒಲಿಂಪಿಕ್ಸ್ ನಡೆಸಲಾಗುತ್ತಿದೆ ಅನ್ನುವ ಆರೋಪವೂ ಕೇಳಿ ಬಂದಿದೆ.
ಈ ನಡುವೆ ಟೋಕಿಯೋ ಒಲಿಂಪಿಕ್ಸ್ ಆರಂಭವಾಗಲು ಕೆಲವೇ ದಿನಗಳು ಇರುವಂತೆ ಕ್ರೀಡಾ ಗ್ರಾಮದಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದು ಆತಂಕಕ್ಕೆ ಕಾರಣವಾಗಿದ್ದು, ಕ್ರೀಡಾ ಗ್ರಾಮದಲ್ಲಿ ಮುಂದೇನು ಅನ್ನುವ ಪ್ರಶ್ನೆ ಎದ್ದಿದೆ. ಕ್ರೀಡಾ ಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ವಿದೇಶಿ ವ್ಯಕ್ತಿಯೊಬ್ಬರಿಗೆ ವುಹಾನ್ ವೈರಸ್ ತಗುಲಿದ್ದು ಇವರು ಆಟಗಾರರಲ್ಲ ಎಂದು ಗೊತ್ತಾಗಿದೆ.
2020ರಲ್ಲಿಯೇ ಟೋಕಿಯೋ ಒಲಿಂಪಿಕ್ಸ್ ನಡೆಯಬೇಕಾಗಿತ್ತು. ವಿಶ್ವದಾದ್ಯಂತ ವುಹಾನ್ ವೈರಸ್ ಹರಡಿದ್ದ ಕಾರಣ ಕ್ರೀಡಾಕೂಟವನ್ನು 2021ಕ್ಕೆ ಮುಂದೂಡಲಾಗಿತ್ತು. ಟೋಕಿಯೋ ಒಲಿಂಪಿಕ್ಸ್ ಜುಲೈ 23 ರಿಂದ ಆರಂಭಗೊಂಡು ಆಗಸ್ಟ್ 8ರಂದು ಅಂತ್ಯವಾಗಲಿದೆ.
Discussion about this post