Rudy kurtzen : ಗಾಲ್ಫ್ ಆಟ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ರಿವರ್ಸ್ ಡೇಲ್ನ್ ಎಂಬಲ್ಲಿ ಕಾರು ಅಪಘಾತ
ಮಾಜಿ ಅಂತಾರಾಷ್ಟ್ರೀಯ ಅಂಪೈರ್ , 73 ವರ್ಷದ ರೂಡಿ ಕೊರ್ಟ್ಜೆನ್ ( Rudy kurtzen) ನಿಧನರಾಗಿದ್ದಾರೆ. ಮಂಗಳವಾರ ಬೆಳಗ್ಗೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಎಂದಿನಂತೆ ಗಾಲ್ಫ್ ಆಟ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ರಿವರ್ಸ್ ಡೇಲ್ನ್ ಎಂಬಲ್ಲಿ ರೂಡಿ ಕರ್ಟ್ಜೆನ್ ಕಾರು ಅಪಘಾತವಾಗಿದೆ.
ಇದನ್ನೂ ಓದಿ : lovers suicide : ಪ್ರೀತಿಗೆ ಮನೆಯವರ ವಿರೋಧ : ಆತ್ಮಹತ್ಯೆಯಲ್ಲಿ ಅಂತ್ಯವಾದ ಲವ್ ಸ್ಟೋರಿ
1949 ಮಾರ್ಚ್ 26 ರಂದು ವೆಸ್ಟರ್ನ್ ಕೇಪ್ ಪ್ರಾಂತ್ಯದಲ್ಲಿ ಜನಿಸಿದ ರೂಡಿ ಪೋರ್ಟ್ ಎಲಿಜಬೆತ್ ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಣ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂಲಕ 1992ರಲ್ಲಿ ಚೊಚ್ಚಲ ಬಾರಿಗೆ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದರು.
18 ವರ್ಷಗಳ ವೃತ್ತಿ ಜೀವನದಲ್ಲಿ 108 ಟೆಸ್ಟ್ ಪಂದ್ಯಗಳು, ದಾಖಲೆಯ 209 ಏಕದಿನ ಪಂದ್ಯಗಳು ಹಾಗೂ 14 ಟಿ-20 ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದು, ಐಸಿಸಿಯ ಎಮಿರೈಟ್ಸ್ ಎಲೈಟ್ ಸಮಿತಿ ಅಂಪೈರ್ ಸ್ಥಾನಮಾನ ಪಡೆದಿದ್ದರು. 2010 ಜೂನ್ 4 ರಂದು ಅಂಪೈರ್ ವೃತ್ತಿಯಿಂದ ನಿವೃತ್ತಿಯಾಗಿದ್ದ ರೂಡಿ ಕೊರ್ಟ್ಜೆನ್ ನಿಧನಕ್ಕೆ ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Discussion about this post