ಬೆಂಗಳೂರು : ನಟ ರಕ್ಷಿತ್ ಶೆಟ್ಟಿ ಪಬ್ಲಿಕ್ ಟಿವಿ ವಿರುದ್ಧ ಎತ್ತಿದ ಪ್ರಶ್ನೆಗಳಿಗೆ ವಾಹಿನಿ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ಆದರೆ ರಕ್ಷಿತ್ ಶೆಟ್ಟಿ ವಾಹಿನಿಯ ಬಗ್ಗೆ ಏನೆಲ್ಲಾ ಆಕ್ರೋಶಗಳಿತ್ತೋ ಎಲ್ಲವನ್ನೂ ಹೊರ ಹಾಕಿದ್ದಾರೆ. ಜೊತೆಗೆ ಇನ್ನು ಮುಂದೆ ನಾನು ಈ ವಿಚಾರದ ಬಗ್ಗೆ ಮಾತನಾಡುವುದಿಲ್ಲ ಅಂದಿದ್ದಾರೆ.
ತನ್ನ ವಿರುದ್ದ ಪಬ್ಲಿಕ್ ಟಿವಿಯಲ್ಲಿ ವರದಿಗಳು ಪ್ರಸಾರವಾಗುವುದಕ್ಕೆ ಮಹೇಶ್ ದೇವಶೆಟ್ಟಿಯೇ ನೇರ ಕಾರಣ ಎಂದು ದೂರಿರುವ ರಕ್ಷಿತ್ ಶೆಟ್ಟಿ, ಒಬ್ಬ ಪತ್ರಕರ್ತ ಹೇಗಿರಬಾರದು ಅನ್ನುವುದನ್ನು ವಿವರಿಸಿದ್ದಾರೆ ಜೊತೆಗೆ ಸಿನಿಮಾಗಳ ಬಗ್ಗೆ ಕಾಸು ಪಡೆದು ಹೇಗೆಲ್ಲಾ ಬಿಲ್ಡಪ್ ಕೊಡಲಾಗುತ್ತಿದೆ ಅನ್ನುವ ರಹಸ್ಯವನ್ನೂ ಬಯಲು ಮಾಡಿದ್ದಾರೆ. ಅಲ್ಲಿಗೆ ಮಾಧ್ಯಮಗಳ ವಿಮರ್ಶೆ ನೋಡಿ ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕರು ಬಕ್ರ ಆಗೋದು ಹೇಗೆ ಅನ್ನುವುದನ್ನೂ ತೆರೆದಿಟ್ಟಿದ್ದಾರೆ.
ಈ ನಡುವೆ ಮಹೇಶ್ ವಿರುದ್ಧ ಕೆಂಡ ಕಾರಿರುವ ರಕ್ಷಿತ್ ತುಘಲಕ್ ನಿಂದ ನನ್ನ ಜರ್ನಿ ಶುರುವಾಯ್ತು. ಇದೀಗ ಹೊಂಬಾಳೆಯಂತಹ ದೊಡ್ಡ ಸಂಸ್ಥೆಯ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಈ ವ್ಯಕ್ತಿ ತುಘಲಕ್ ನಿಂದ ಈವರೆಗೆ ಎಷ್ಟು ಬೆಳೆದಿದ್ದಾನೆ. ಅವನು ಎಷ್ಟು ಬೆಳೆದಿದ್ದಾನೆ ಅಂದ್ರೆ ಈಗ್ಲೂ ಕೆಲಸ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾನೆ. ನಾನು ಮನಸ್ಸು ಮಾಡಿದರೆ ಕೆಲಸದಿಂದ ತೆಗೆಸಬಹುದು, ಆದರೆ ನನಗೆ ದ್ವೇಷದ ಮನೋಭಾವನೆ ಇಲ್ಲ. ಹಾಗಾಗಿ ಆ ಕೆಲಸ ಮಾಡುವುದಿಲ್ಲ.
ಆ ಯಪ್ಪನ ಕೆಲಸ ನಿಷ್ಟೆ ಆಗ ಹೇಗಿತ್ತು, ಈಗ್ಲೂ ಹಾಗೇ ಇದೆ.ಅವನಿಗೆ ಕೆಲಸದ ಮೇಲೆ ನಿಷ್ಠೆಯೇ ಇಲ್ಲ ಎಂದು ಭಾವುಕರಾಗಿರಾಗಿರುವ ರಕ್ಷಿತ್ ಶೆಟ್ಟಿ, ವಾಹಿನಿ ಮುಖ್ಯಸ್ಥ ರಂಗನಾಥ್ ಹೆಸರನ್ನೂ ಪ್ರಸ್ತಾಪಿಸಿದ್ದಾರೆ.
ನಿಮಗೂ ಎಲ್ಲಾ ವಿಷಯಗಳ ಕಡೆ ಕೊಡಲು ಸಾಧ್ಯವಾಗಲ್ಲ. ಆದರೆ ಪಬ್ಲಿಕ್ ಟಿವಿಯಲ್ಲಿ ಬಂದ ಕಾರ್ಯಕ್ರಮಕ್ಕೆ ನಿಮ್ಮ ಬಾಯಿಯಿಂದ ಬಂದ ಮಾತಿನಷ್ಟೇ ಮಹತ್ವವಿದೆ. ಹೀಗಾಗಿ ಒಬ್ಬನಿಗೆ ಜವಾಬ್ದಾರಿ ಕೊಡುವಾಗ ಅವನು ಜವಾಬ್ದಾರಿ ಕೊಡಲು ಆರ್ಹನೇ ಅನ್ನುವುದನ್ನು ನೋಡಿಕೊಡಬೇಕು. ಇಲ್ಲವಾದರೆ ನೀವು ಕೈ ಸುಟ್ಟುಕೊಳ್ಳುವುದು ಗ್ಯಾರಂಟಿ. ನಾನು ಕೂಡಾ ಹೀಗೆ ಅರ್ಹತೆ ಇಲ್ಲದವರಿಗೆ ಜವಾಬ್ದಾರಿ ಕೊಟ್ಟು ಕೈ ಸುಟ್ಟುಕೊಂಡಿದ್ದೇನೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
Discussion about this post