ಈ ಬಾರಿ ಭಕ್ತರಿಗೆ ತುಂಗಭದ್ರಾ ನೀರಿನ ಪುಣ್ಯಸ್ನಾನಕ್ಕಾಗಿ ಅವಕಾಶವಿಲ್ಲ… ಹಾಗಂತ ಬದಲಿ ವ್ಯವಸ್ಥೆಯೂ ಇದೆ ( Raghavendra Swamy Aradhana)
ತುಂಗಭದ್ರಾ ನದಿ ತೀರದ ಮಂತ್ರಾಲಯದ ಗುರು ರಾಯರ ಸನ್ನಿಧಾನದಲ್ಲಿ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 351ನೇ ಆರಾಧನಾ ಮಹೋತ್ಸವಕ್ಕೆ ( Raghavendra Swamy Aradhana) ಚಾಲನೆ ಸಿಕ್ಕಿದೆ. ಕೊರೋನಾ ಕಾರಣದಿಂದ ಕಳೆದು ಎರಡು ವರ್ಷ ಆರಾಧನಾ ಮಹೋತ್ಸವ ಕಳೆಗಟ್ಟಿರಲಿಲ್ಲ. ಈ ಬಾರಿ ಕೊರೋನಾ ಕಾರ್ಮೋಡ ಕರಗಿರುವ ಹಿನ್ನಲೆಯಲ್ಲಿ ಸಂಭ್ರಮ ಮನೆ ಮಾಡಿದೆ.
351ನೇ ಆರಾಧನಾ ಮಹೋತ್ಸವದ ಸಲುವಾಗಿ ಶ್ರೀಮಠವೂ ಸಿದ್ಧತೆ ಮಾಡಿಕೊಂಡಿದೆ. ರಾಯರ ಮಠದ ಮುಂಭಾಗದ ವಿಶಾಲ ರಸ್ತೆಯ ಎರಡೂ ಬದಿ ಚಿತ್ತಾಕರ್ಷಕ ಮಂಟಪ ಮಾದರಿ ನಿರ್ಮಿಸಲಾಗಿದೆ.
ಆರಾಧನಾ ಮಹೋತ್ಸವದ ವಿವರ
ಆ.12 ರಂದು ರಾಯರ ಪೂರ್ವಾರಾಧನೆ ನಿಮಿತ್ತ ಸಂಪ್ರದಾಯದಂತೆ ತಿರುಪತಿ ದೇವಸ್ಥಾನದಿಂದ ಬರುವ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಿಸಲಾಗುತ್ತದೆ. ಮೊದಲ ದಿನ ಸಂಜೆ 7ಕ್ಕೆ ಯೋಗೀಂದ್ರ ಸಭಾ ಮಂಟಪದಲ್ಲಿ ‘ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಲಿದೆ. ಅನೇಕ ಗ್ರಂಥಗಳ ಬಿಡುಗಡೆ ನಡೆಯಲಿದೆ.
Read More : Langya Henipavirus: ಕೊರೋನಾ ಹರಡಿದ ಚೀನಾದಲ್ಲಿ ಹೆನಿಪಾವೈರಸ್ ಪತ್ತೆ
ಆ.13 ರಂದು ರಾಯರ ಮಧ್ಯಾರಾಧನೆ ಹಿನ್ನೆಲೆಯಲ್ಲಿ ಚಿನ್ನದ ರಥೋತ್ಸವ, ಬೆಳಗ್ಗೆ ರಾಯರಿಗೆ ವಸಂತೋತ್ಸವ, ಮಹಾರಥೋತ್ಸವ ನಡೆಯಲಿದೆ ಆ.14 ರಂದು ಉತ್ತರಾರಾಧನೆಯ ಭಾಗವಾಗಿ ಮಹಾರಥೋತ್ಸವ ನಡೆಯಲಿದೆ. 3ದಿನ ಶ್ರೀಮಠದ ಪ್ರಾಕಾರ ಮತ್ತು ಯೋಗಿಂದ್ರ ಸಭಾ ಮಂಟಪದಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪಾಠ ಪ್ರವಚನ ಕಾರ್ಯಕ್ರಮಗಳು ಜರುಗಲಿದೆ.
ತುಂಗಭದ್ರಾ ಡ್ಯಾಂನಿಂದ ನದಿಗೆ 1 ಲಕ್ಷ 82 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತ ಸೂಚಿಸಿದೆ. ಜೊತೆಗೆ ತುಂಗಭದ್ರಾ ನದಿ ಸ್ನಾನಕ್ಕೆ ಮಠದ ಆಡಳಿತ ಅವಕಾಶ ನೀಡಿಲ್ಲ. ಜಿಲ್ಲಾಡಳಿತ ವತಿಯಿಂದ ನದಿಗೆ ಭಕ್ತರು ಇಳಿಯದಂತೆ ಬ್ಯಾರಿಕೇಡ್ ಹಾಕಿ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ತುಂಗಭದ್ರಾ ನೀರಿನ ಪುಣ್ಯಸ್ನಾನಕ್ಕಾಗಿ ಶ್ರೀಮಠ ಸಕಲ ವ್ಯವಸ್ಥೆ ಮಾಡಿದೆ. ನದಿ ಪಕ್ಕದಲ್ಲೇ ಭಕ್ತರಿಗಾಗಿ ವ್ಯವಸ್ಥೆ ಮಾಡಿದೆ. ಜೊತೆಗೆ ಸ್ನಾನ ಮಾಡಿ ಡ್ರೆಸ್ ಬದಲಾಯಿಸಿಕೊಳ್ಳಲು ಶೆಡ್ ನಿರ್ಮಿಸಲಾಗಿದೆ.
Discussion about this post