ಬೆಂಗಳೂರು : ಕೆಲ ದಿನಗಳ ಹಿಂದೆ ಪಬ್ಲಿಕ್ ಟಿವಿ ವಿರುದ್ಧ ಗುಡುಗಿದ್ದ ರಕ್ಷಿತ್ ಶೆಟ್ಟಿ ಜುಲೈ 11 ರಂದು ಕಾದು ನೋಡಿ ಅಂದಿದ್ದರು. ಈ ನಡುವೆ ರಕ್ಷಿತ್ ಶೆಟ್ಟಿ ಪಬ್ಲಿಕ್ ಟಿವಿ ವಿರುದ್ಧ ಆಕ್ರೋಶ ಹೊರ ಹಾಕಿದ್ದ ಬೆನ್ನಲ್ಲೇ ಕೆಂಡಾಮಂಡಲರಾಗಿದ್ದ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಪಬ್ಲಿಕ್ ಟಿವಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ಈ ನಡುವೆ ಜುಲೈ 11 ರಂದು ಏನಾಗಲಿದೆ ಎಂದು ನೋಡಿದರೆ, ರಕ್ಷಿತ್ ಶೆಟ್ಟಿ ಹೊಸ ಸಿನಿಮಾ ಘೋಷಿಸಿ ಸುಮ್ಮನಾಗಿದ್ದಾರು. ಇಲ್ಲಿಗೆ ಎಲ್ಲಾ ಮುಗಿಯಿತು ಅಂದುಕೊಂಡ್ರೆ ಸೋಮವಾರ ಪತ್ರಿಕಾಗೋಷ್ಟಿ ನಡೆಸಿದ ರಕ್ಷಿತ್ ಶೆಟ್ಟಿ ಎಲ್ಲಾ ಆರೋಪಗಳಿಗೆ ಉತ್ತರ ಕೊಟ್ಟಿದ್ದಾರೆ. ಜೊತೆಗೆ ಪಬ್ಲಿಕ್ ಟಿವಿ ವಿರುದ್ಧ ನಾನ್ಯಾಕೆ ಆಕ್ರೋಶಗೊಂಡಿದ್ದೇನೆ ಅನ್ನುವುದನ್ನೂ ವಿವರಿಸಿದ್ದಾರೆ.
ರಕ್ಷಿತ್ ಶೆಟ್ಟಿಯವರಿಗೆ ಪಬ್ಲಿಕ್ ಟಿವಿಗಿಂತಲೂ, ವಾಹಿನಿಯ ಫಿಲ್ಮಂ ಬ್ಯೂರೋ ಹೆಡ್, ಮಹೇಶ್ ದೇವಶೆಟ್ಟಿ ವಿರುದ್ದ ಆಕ್ರೋಶವಿದೆ.ಹಳೆಯ ಘಟನೆಯೊಂದರ ದ್ವೇಷ ಸಾಧನೆ ಸಲುವಾಗಿ ವಾಹಿನಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನುವುದು ರಕ್ಷಿತ್ ಆರೋಪ.
ಈ ಬಗ್ಗೆ ಮಾತನಾಡಿರುವ ರಕ್ಷಿತ್ ಶೆಟ್ಟಿ ನಾನು ಮಹೇಶ್ ದೇವಶೆಟ್ಟಿಯವರನ್ನು ಮೊದಲ ಸಲ ಭೇಟಿಯಾಗಿದ್ದು ನನ್ನ ಮೊದಲ ಸಿನಿಮಾ ತುಘಲಕ್ ಅವಧಿಯಲ್ಲಿ. ಆಗ ಒಳ್ಳೆಯ ರಿವ್ಯೂ ಬರೆಯಲು ಅವರು ಕಾಸು ತೆಗೆದುಕೊಳ್ಳುತ್ತಾರೆ ಅನ್ನುವ ಮಾತು ಕೇಳಿದ್ದೆ. ಹೀಗೆ ಕಾಸು ಪಡೆದು ಒಳ್ಳೆಯ ರಿವ್ಯೂ ಬರೆಯುವ ತಂಡಕ್ಕೆ ಹಂಚುತ್ತಾರೆ ಅನ್ನುವುದು ಗೊತ್ತಾಗಿತ್ತು. ಜೊತೆಗೆ ಆಗ ಅವರು ಪ್ರಿಂಟ್ ಮೀಡಿಯಾದಲ್ಲಿ ಕೆಲಸ ಮಾಡುತ್ತಿದ್ದರು.
ಹೀಗೆ ಒಂದು ದಿನ ನಮ್ಮನ್ನು ಭೇಟಿಯಾಗಲ ಬಯಸಿದ್ದ ದೇವಶೆಟ್ಟಿ, ನಮ್ಮ ಹೋಟೆಲ್ ಒಂದಕ್ಕೆ ಆಹ್ವಾನಿಸಿದ್ದರು. ಈ ವೇಳೆ ಅರವಿಂದ್ ಕೌಶಿಕ್ ಹಾಗೂ ನಾನು ಹೋಗಿ ಭೇಟಿಯಾಗಿದ್ದೆ. ಆಗ್ಲೂ ಒಳ್ಳೆಯ ರಿವ್ಯೂ ಡೀಲ್ ಬಗ್ಗೆ ಮಾತನಾಡಿದ್ದರು. ಆಗ ಆ ಎಲ್ಲಾ ಮಾತುಕತೆಗಳನ್ನು ಕೌಶಿಕ್ ರೆಕಾರ್ಡ್ ಮಾಡಿಕೊಂಡಿದ್ದರು. ಮತ್ತು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಸಲಿ ಮುಖವನ್ನು ಬಯಲು ಮಾಡಿದ್ದರು. ಇದನ್ನು ಪೇಪರ್ ಮುಖ್ಯಸ್ಥರಿಗೆ ತಲುಪಿ ಅಲ್ಲಿ ಕೆಲಸದಿಂದ ತೆಗೆದು ಹಾಕಿದ್ರು.
ಎರಡನೇ ಘಟನೆ ಅಂದ್ರೆ ಅದು ನನ್ನ ಬ್ರೇಕಪ್ ಟೈಮ್. ಆಗ ವಿವಿಧ ಚಾನೆಲ್ ಗಳಲ್ಲಿ ತುಂಬಾ ಕಾರ್ಯಕ್ರಮ ಬಂದಿತ್ತು.ನಾನು ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.ಸಿನಿಮಾ ಕ್ಷೇತ್ರಕ್ಕೆ ಬಂದ ಮೇಲೆ ಅವೆಲ್ಲವನ್ನೂ ನಾವು ಎದುರಿಸಲೇಬೇಕಾಗುತ್ತದೆ. ಆಗ್ಲೂ ಪಬ್ಲಿಕ್ ಟಿವಿ ಮಾಡಿದ್ದ ಕಾರ್ಯಕ್ರಮ ನನಗೆ ತುಂಬಾ ಬೇಸರ ಉಂಟು ಮಾಡಿತ್ತು. ಈ ಬಗ್ಗೆ ನಾನು ಪುಷ್ಕರ್ ಮಲ್ಲಿಕಾರ್ಜುನ್ ಬಳಿ ಹೇಳಿಕೊಂಡಿದ್ದೆ. ಜೊತೆಗೆ ಪುಷ್ಕರ್ ಹಾಗೂ ಮಹೇಶ್ ದೇವಶೆಟ್ಟಿ ಒಳ್ಳೆಯ ಸ್ನೇಹಿತರು.
ಹೀಗಾಗಿ ನಾವು ಚಾನೆಲ್ ಹತ್ತಿರ ಹೋಗಿಯೇ ಮಾತನಾಡುವುದು ಎಂದು ತೀರ್ಮಾನಿಸಲಾಗಿತ್ತು. ಆದರೆ ಪುಷ್ಕರ್ ಒಂದ್ಸಲ ಫೋನ್ ನಲ್ಲಿ ಮಾತನಾಡೋಣ ಎಂದು ದೇವಶೆಟ್ಟಿಗೆ ಫೋನ್ ಮಾಡಿದ್ದರು. ಆಗ ಅದನ್ನು ಕೇಳಲು ನೀನು ಯಾರು ಎಂದು ಪುಷ್ಕರ್ ಬಗ್ಗೆ ದೇವಶೆಟ್ಟಿ ಕೀಳಾಗಿ ಮಾತನಾಡಿದ್ದರು. ಈಗ ಆಕ್ರೋಶಗೊಂಡ ನಾನು ಫೋನ್ ಕಸಿದುಕೊಂಡು ಮಹೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದೆ.
ಅದಾದ ಬಳಿಕ ನಾನು ಘಟನೆಯನ್ನು ಮರೆತಿದ್ದೆ. ನನ್ನ ಕೆಲಸದಲ್ಲಿ ನಾನು ಮುಳುಗಿ ಹೋಗಿದ್ದೆ. ಇದೀಗ ಪಬ್ಲಿಕ್ ಟಿವಿ ಮಾಡಿದ ಕಾರ್ಯಕ್ರಮಗಳನ್ನು ನೋಡಿದರೆ, ಇದೇ ಕಾರಣಕ್ಕಾಗಿ ನನ್ನ ಟಾರ್ಗೇಟ್ ಮಾಡುತ್ತಿದ್ದಾರೆ ಅನ್ನುವುದು ಸ್ಪಷ್ಟವಾಗುತ್ತಿದೆ. ಅವರು ಪರ್ಸನಲ್ ಆಗಿ ತೆಗೆದುಕೊಂಡು ವಾಹಿನಿಯಲ್ಲಿ ನನ್ನ ವಿರುದ್ಧ ಕಾರ್ಯಕ್ರಮ ಮಾಡುತ್ತಿದ್ದಾರೆ ಅನ್ನುವುದು ರಕ್ಷಿತ್ ಶೆಟ್ಟಿ ಆರೋಪ.
Discussion about this post