ಊರ ಮಂದಿಗೆಲ್ಲಾ ವಾಸ್ತು ಹೇಳಿದ್ರು, ಸಂಕಷ್ಟ ಎಂದು ಬಂದವರ ಭವಿಷ್ಯ ಹೇಳಿದ್ರು. ಆದರೆ ತನ್ನ ಉಸಿರು ಆಪ್ತನಿಂದಲೇ ನಿಲ್ಲಲಿದೆ ಅನ್ನುವುದು ಅವರಿಗೆ ಗೊತ್ತಾಗಲಿಲ್ಲ. ಇದೀಗ Guruji Murder Accused Arrest ಆಗಿದ್ದಾರೆ. ಪೊಲೀಸರ ವಿಚಾರಣೆಯ ಬಳಿಕ ಮತ್ತಷ್ಟು ಮಾಹಿತಿ ಹೊರ ಬರುವ ಸಾಧ್ಯತೆಗಳಿದೆ
ಹುಬ್ಬಳ್ಳಿ : ಚಂದ್ರಶೇಖರ ಗುರೂಜಿಯನ್ನು ( guruji murder case ) ಕೊಲೆಗೈದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ( Guruji Murder Accused Arrest).ದುರಂತ ಅಂದ್ರೆ ಈ ಆರೋಪಿಗಳು ಒಂದು ಕಾಲದಲ್ಲಿ ಚಂದ್ರಶೇಖ್ ಗುರೂಜಿ ಆಪ್ತರಾಗಿದ್ದರು. ಅವರದ್ದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಗುರೂಜಿ ಕೊಟ್ಟ ಸಂಬಳದಿಂದ ಜೀವನ ಕಟ್ಟಿಕೊಂಡಿದ್ದರು. ಆದರೆ ಆ ಉಪಕಾರವನ್ನೇ ಮರೆತು ಕೊಲೆ ಮಾಡಿದ್ದಾರೆ ಅಂದ್ರೆ ಕೊಲೆಯ ಹಿಂದೆ ಮಹಾರಹಸ್ಯವೊಂದು ಅಡಗಿರಲೇಬೇಕು.
ಇನ್ನು ಪೊಲೀಸರು ವಶಕ್ಕೆ ಪಡೆದಿರುವ ಮಹಾಂತೇಶ ಶಿರೂರ್ ಚಂದ್ರಶೇಖರ್ ಗುರೂಜಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದನಂತೆ. ಗುರೂಜಿಯ ಬಲಗೈಯಂತೆ ಕೆಲಸ ಮಾಡಿಕೊಂಡಿದ್ದ ಅನ್ನಲಾಗಿದೆ. ಚಂದ್ರಶೇಖರ್ ಗುರೂಜಿಯ ( Chandrashekhar Guruji ) ಖಾಸಗಿ ವ್ಯವಹಾರಗಳನ್ನು ಇದೇ ಮಹಾಂತೇಶ್ ನೋಡಿಕೊಳ್ಳುತ್ತಿದ್ದ ಅನ್ನಲಾಗಿದೆ. ಹೀಗಾಗಿ ಗುರೂಜಿಯ ರಹಸ್ಯಗಳು ಇವನಿಗೆ ಗೊತ್ತಿತ್ತು ಅನ್ನಲಾಗಿದೆ.
ಇದನ್ನೂ ಓದಿ : ಪೊಲೀಸರ ಎನ್ ಕೌಂಟರ್ ಗೆ ಭಯಪಟ್ಟ ಕೊಲೆಗಾರರು ಮಾಡಿದ್ದೇನು..?

ಗುರೂಜಿ ಮತ್ತು ಮಹಾಂತೇಶ್ ಅದೆಷ್ಟು ಆತ್ಮೀಯರು ಅಂದ್ರೆ ಮಹಾಂತೇಶ್ ಗೆ ವನಜಾಕ್ಷಿಯನ್ನು ಮದುವೆ ಮಾಡಿಸಿದ್ದೇ ಚಂದ್ರಶೇಖರ್ ಗುರೂಜಿಯಂತೆ. ಇನ್ನು ವನಜಾಕ್ಷಿ ಕೂಡಾ ಸರಳ ವಾಸ್ತು ಸಂಸ್ಥೆಯಲ್ಲೇ ಕೆಲಸ ಮಾಡುತ್ತಿದ್ದರು. ಆದರೆ ಸಾವಿರ ಕೋಟಿಗೂ ಅಧಿಕ ವ್ಯವಹಾರದ ಸರಳ ವಾಸ್ತು ಸಾಮ್ರಾಜ್ಯದ ಒಡೆಯ ಚಂದ್ರಶೇಖರ್ ಗುರೂಜಿ ಜೊತೆಗೆ ಮಹಾಂತೇಶ್ ಸಂಬಂಧ ಯಾಕೆ ಹಾಳಾಯ್ತು ಅನ್ನುವುದು ಈಗಿರುವ ಯಕ್ಷ ಪ್ರಶ್ನೆ.

ಇನ್ನು ಇತ್ತೀಚೆಗೆ ಸರಳ ವಾಸ್ತು ಸಂಸ್ಥೆಯಿಂದ ಒಂದಿಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿತ್ತು. ಇವರ ಪರವಾಗಿ ಇದೇ ಮಹಾಂತೇಶ್ ಕಾನೂನು ಹೋರಾಟಕ್ಕೆ ಮುಂದಾಗಿದ್ದ ಅನ್ನುವ ಸುದ್ದಿಗಳು ಕೂಡಾ ಬಂದಿದೆ. ಆದರೆ ಇವೆಲ್ಲವೂ ಕೊಲೆಯಾದ ಬೆನ್ನಲ್ಲೇ ಹರಿದಾಡುತ್ತಿರುವ ಸುದ್ದಿ. ಆದರೆ ನಿಜಕ್ಕೂ ಕೊಲೆಗೆ ಕಾರಣವೇನು ಅನ್ನುವುದು ಪೊಲೀಸರ ವಿಚಾರಣೆ ಬಳಿಕವೇ ಗೊತ್ತಾಗಲಿದೆ.
Discussion about this post