ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮೀರಾ ಬಾಯ್ ಚಾನು ಶನಿವಾರ ವೆಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಬೆನ್ನಲ್ಲೇ, ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಕುಸ್ತಿ ಪಟು ಪ್ರಿಯಾ ಮಲಿಕ್ ಬಂಗಾರದ ಪದಕ ಗೆದ್ದಿದ್ದಾರೆ.
73 ಕೆಜಿ ವಿಭಾಗದಲ್ಲಿ ಪ್ರಿಯಾ ಮಲಿಕ್ ಈ ಸಾಧನೆ ಮಾಡಿದ್ದು, ಪ್ರಿಯಾ ಮಲಿಕ್ ಸಾಧನೆಗೆ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.
ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಿಯಾ ಮಲಿಕ್ ಉತ್ತಮ ಪ್ರದರ್ಶನ ತೋರುತ್ತಿದ್ದು, ಸ್ವರ್ಣ ಪದಕಗಳ ಬೇಟೆಯಾಡುತ್ತಲೇ ಬಂದಿದ್ದಾರೆ. 2019ರ ಖೇಲೋ ಇಂಡಿಯಾ ಕ್ರೀಡಾ ಕೂಟದಲ್ಲೂ ಚಿನ್ನ ಗೆದ್ದಿದ್ದ ಪ್ರಿಯಾ ದಿಲ್ಲಿಯಲ್ಲಿ ನಡೆ 17ನೇ ಶಾಲಾ ಕ್ರೀಡಾಕೂಟದಲ್ಲೂ ಸ್ವರ್ಣ ಜಯಿಸಿದ್ದರು.
2020ರಲ್ಲಿ ನಡೆದ ಹಲವು ಕೂಟಗಳಲ್ಲೂ ಪದಕ ಬಾಚಿದ್ದ ಪ್ರಿಯಾ ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್ಷಿಪ್ ಕೂಟದಲ್ಲಿ ಸ್ವರ್ಣ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಅನ್ನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಮಹಿಳಾ 65 ಕೆಜಿ ವಿಭಾಗದಲ್ಲಿ ಭಾರತದ ವರ್ಷಾ ಟರ್ಕಿಯ ಡ್ಯುಗು ಜೆನ್ ಎದುರು ಜಯ ದಾಖಲಿಸುವ ಮೂಲಕ ಕಂಚಿನ ಪದಕ ಗೆದ್ದಿದ್ದರು.
Discussion about this post