ವೀಣಾ ಕಾಶಪ್ಪನವರ್ ಜೊತೆ ಸಂಬಂಧ ಹದಗೆಟ್ಟಿದೆ. ವಿಜಯಾನಂದ ಕಾಶಪ್ಪನವರ್ (vijayanand kashappanavar) ಎರಡನೇ ಮದುವೆಯಾಗಿದ್ದಾರೆ ಅನ್ನುವ ಸುದ್ದಿ ಹಿಂದೆ ಹರಡಿತ್ತು, ಇದೀಗ ಮತ್ತೆ ಅದಕ್ಕೆ ರೆಕ್ಕೆ ಪುಕ್ಕ ಬಂದಿದೆ
ಬಾಗಲಕೋಟೆ : ಮೊದಲ ಪತ್ನಿ ವೀಣಾ ಕಾಶಪ್ಪನವರ್ ಅವರಿಗೆ ಡಿವೋರ್ಸ್ ಕೊಡುವ ಮುನ್ನವೇ ಹುನಗುಂದ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ (vijayanand kashappanavar) ಎರಡನೇ ಮದುವೆಯಾಗಿದ್ರೆ ಅನ್ನುವ ಸುದ್ದಿ ಹಿಂದೊಮ್ಮೆ ಹರಡಿತ್ತು. ಆದರೆ ಅದಕ್ಕೆ ಯಾವುದೇ ಸಾಕ್ಷಿಗಳು ಇರಲಿಲ್ಲ.
ಆದರೆ ಇದೀಗ ಮಗುವೊಂದರ ಜನನ ಪ್ರಮಾಣ ಪತ್ರ ವೈರಲ್ ಆಗಿದ್ದು, ತಂದೆ ಕಾಲಂನಲ್ಲಿ ವಿಜಯಾನಂದ ಕಾಶಪ್ಪನವರ (vijayanand kashappanavar) ಎಂದು ಉಲ್ಲೇಖಿಸಲಾಗಿದೆ. ತಾಯಿಯ ಹೆಸರು ಪೂಜಾಶ್ರೀ ಎಂದು ನಮೂದಾಗಿದೆ. ಈ ಮೂಲಕ ಈ ಹಿಂದೆ ಹರಡಿದ್ದ ನಟಿ ಪೂಜಾಶ್ರೀ ಮತ್ತು ವಿಜಯಾನಂದ ಮದುವೆ ಸುದ್ದಿಗೆ ಜೀವ ಬಂದಿದೆ. ಅಷ್ಟು ಮಾತ್ರವಲ್ಲದೆ ವಿಜಯಾನಂದ ಕಾಶಪ್ಪನವರ ಎರಡನೇ ಮದುವೆಯಾಗಿದ್ದು ಹೌದು ಅನ್ನುತ್ತಿದೆ ಮೂಲಗಳು.
ಇದನ್ನು ಓದಿ : Robert Vadra : ಸಕ್ರಿಯ ರಾಜಕಾರಣ ಪ್ರವೇಶದ ಸುಳಿವು ಕೊಟ್ಟ ಸೋನಿಯಾ ಗಾಂಧಿ ಅಳಿಯ
ಇನ್ನು ವರ್ಷದ ಹಿಂದೆಯೇ ವಿಜಯಾನಂದ ಕಾಶಪ್ಪನವರ ಹಾಗೂ ವೀಣಾ ಕಾಶಪ್ಪನವರ್ (veena kashappanavar) ಸಂಬಂಧ ಹದಗೆಟ್ಟಿದೆ ಅನ್ನಲಾಗಿದೆ. ಆದರೆ ಈ ಬಗ್ಗೆ ವೀಣಾ ಅವರಾಗಲಿ ಪೂಜಾಶ್ರೀಯವರಾಗಲಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯಾನಂದ ಕಾಶಪ್ಪನವರ, ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ. ಮಾಹಿತಿ ಇಲ್ಲದೆ ಏನು ಮಾತನಾಡಲಿ, ಫೋಟೋ ವೈರಲ್ ಬಗ್ಗೆ ನನಗೆ ಗೊತ್ತಿಲ್ಲ. ದಾಖಲೆ ಕೊಡಿ, ದಾಖಲೆ ಕೊಟ್ಟರೆ ಮಾತನಾಡುತ್ತೇನೆ ಅಂದಿದ್ದಾರೆ. ವೈಯುಕ್ತಿಕ ಜೀವನವೇ ಬೇರೆ, ರಾಜಕೀಯವೇ ಬೇರೆ, ವಿರೋಧಿಗಳೇ ಹೀಗೆ ಮಾಡುತ್ತಿದ್ದಾರೆ ಅಂದಿದ್ದಾರೆ.
ಬೊಮ್ಮಾಯಿ ಸರ್ಕಾರಕ್ಕೆ ಕುತ್ತು ತರುತ್ತಾ ನವ್ಯಶ್ರೀ ವಿಡಿಯೋ
ಈ ಹಿಂದೆ ಕೆಲ ಘಟಾನುಘಟಿ ನಾಯಕರು ಸಿಡಿ ವಿಚಾರದಲ್ಲಿ ತಡೆಯಾಜ್ಞೆ ತಂದಿರುವುದಕ್ಕೂ ನವ್ಯಶ್ರೀ ಆಡುತ್ತಿರುವ ಮಾತಿಗೂ ಲಿಂಕ್ ಮಾಡಿ ನೋಡಿ
ಬೆಂಗಳೂರು : ಈಗಾಗಲೇ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ಬೇಸರ ಮೂಡಲಾರಂಭಿಸಿದೆ. ನರೇಂದ್ರ ಮೋದಿಗಾಗಿ ನಾವೆಲ್ಲಾ ಇವರನ್ನು ಸಹಿಸಿಕೊಂಡಿದ್ದೇವೆ ಅನ್ನುವುದು ತಳಮಟ್ಟದ ಕಾರ್ಯಕರ್ತರ ಮಾತು. ಅಷ್ಟು ಮಾತ್ರವಲ್ಲದೆ 2023 ಚುನಾವಣೆಯಲ್ಲಿ ಕಾರ್ಯಕರ್ತರು ಮನಸ್ಸಿಟ್ಟು ದುಡಿಯುವ ಲಕ್ಷಣ ಕಾಣಿಸುತ್ತಿಲ್ಲ. ಹೀಗಾಗಿಯೇ ಬೊಮ್ಮಾಯಿ ಸರ್ಕಾರ ಆಡಳಿತ ವಿರೋಧಿ ಅಲೆಗೆ ಸಿಲುಕಿದೆ.
ಈ ನಡುವೆ ತೋಟಗಾರಿಕಾ ಇಲಾಖೆಯ ಅಧಿಕಾರಿಯೊಂದಿಗಿನ ಸಂಬಂಧ ಕಾರಣಕ್ಕೆ ಸುದ್ದಿಯಾಗಿರುವ ನವ್ಯಶ್ರೀ ರಾಮಚಂದ್ರ ರಾವ್ ಅವರ ಆಶ್ಲೀಲ ವಿಡಿಯೋ ವೈರಲ್ ಆಗಿತ್ತು. ಇದೀಗ ಇಡೀ ವಿಡಿಯೋ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ನವ್ಯಶ್ರೀ ಕೊಟ್ಟಿರುವ ಹೇಳಿಕೆಗಳು ರಾಜಕೀಯದಲ್ಲಿ ತಲ್ಲಣ ಮೂಡಿಸಿದ್ದು, ಬೊಮ್ಮಾಯಿ ಸರ್ಕಾರಕ್ಕೆ ಕುತ್ತು ತರಲಿದೆ ಅನ್ನಲಾಗಿದೆ.
ನವ್ಯಶ್ರೀ ಪ್ರಸ್ತಾಪಿಸಿರುವ ಚನ್ನಪಟ್ಟಣ ಮತ್ತು ಬೆಳಗಾವಿಯ ಮಹಾನಾಯಕರ ಹೆಸರು ಹಲವು ತಿಂಗಳ ಹಿಂದೆ ಸುದ್ದಿಯಾಗಿತ್ತು. ಹೀಗಾಗಿ ಈ ಅವಧಿಯಲ್ಲಿ ಸರ್ಕಾರ ಅಧಿಕಾರ ಪೂರ್ಣಗೊಳಿಸಿದರೂ, ಚುನಾವಣೆ ಹೊತ್ತಿನಲ್ಲಿ ಹಲವು ಸಿಡಿಗಳು ಸಿಡಿದರೂ ಅಚ್ಚರಿ ಇಲ್ಲ ಅನ್ನಲಾಗಿದೆ. ವಿಧಾನಸೌಧದ ಮೂರನೇ ಮಹಡಿಯ ಮೇಲೆ ಅನೇಕ ಮಹಾನಾಯಕರು ಕಣ್ಣಿಟ್ಟಿರುವ ಕಾರಣ ಈ ಸಿಡಿ ಸದ್ದು ಮಾಡುವುದನ್ನು ನಿರೀಕ್ಷಿಸಬಹುದಾಗಿದೆ.
ಮಾತ್ರವಲ್ಲದೆ ಈಗಾಗಲೇ ಅನೇಕ ನಾಯಕರು ಅವರ ಸಿಡಿ ನನ್ನ ಬಳಿ ಇದೆ, ಇವರ ಸಿಡಿ ನನ್ನ ಬಳಿ ಇದೆ, 19 ಮಂದಿಯೂ ಸಿಡಿಯೂ ಇದೆಯಂತೆ ಎಂದು ಬಹಿರಂಗ ಹೇಳಿಕೆ ಕೊಟ್ಟಿದ್ದರು. ಯಾವತ್ತೊ ಕೊಟ್ಟ ಹೇಳಿಕೆಗಳನ್ನು ನವ್ಯಾಶ್ರೀ ಕೊಟ್ಟಿರುವ ಹೇಳಿಕೆಗಳನ್ನು ಜೋಡಿಸಿದರೆ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ಸಿಡಿ ರಾಜಕಾರಣ ಪ್ರಾರಂಭವಾಗುವ ಎಲ್ಲಾ ಲಕ್ಷಣಗಳಿದೆ.
Discussion about this post