ಭೋಪಾಲ್ : ಮುಖ್ಯಮಂತ್ರಿಗಳಿಗೆ ಕಳಪೆ ಗುಣಮಟ್ಟದ ಮತ್ತು ತಣ್ಣಗಾದ ಚಹಾ ಕೊಟ್ಟ ಅಧಿಕಾರಿಯೊಬ್ಬರಿಗೆ ಶೋಕಾಸ್ ನೋಟಿಸ್ ಕೊಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ( poor quality tea to CM )
ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಸೋಮವಾರ ಖಜುರಾಹೋ ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ಮುಖ್ಯಮಂತ್ರಿ ಹಾಗೂ ಇತರ ಅತಿಥಿಗಳಿಗೆ ಲಘು ಉಪಹಾರ ಮತ್ತು ಚಹಾ ನೀಡಲಾಗಿತ್ತು. ಆದರೆ ಚಹಾ ತಣ್ಣಗಾಗಿತ್ತು ಮತ್ತು ಬಿಸಿ ಇರಲಿಲ್ಲ ( poor quality tea to CM ) ಅನ್ನುವ ಆರೋಪ ಕೇಳಿ ಬಂದಿದೆ.
ಹೀಗಾಗಿ ಇದೀಗ ಕಳಪೆ ಚಹಾ ಕೊಟ್ಟ ಅಧಿಕಾರಿಗೆ ಜಿಲ್ಲಾಡಳಿತದಿಂದ ಶೋಕಾಸ್ ನೋಟಿಸ್ ಕೊಡಲಾಗಿದ್ದು, ಮೂರು ದಿನಗಳಲ್ಲಿ ಉತ್ತರಿಸುವಂತೆ ಹೇಳಿದೆ. ಒಂದು ವೇಳೆ ವಿವರಣೆ ಕೊಡದಿದ್ರೆ ಏಕಪಕ್ಷೀಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ : Car theft : ವೇಶ್ಯಯರ ಸಂಗಕ್ಕಾಗಿ ಕಾರು ಕದಿಯುತ್ತಿದ್ದ ಖದೀಮನ ಬಂಧನ
ಚತ್ತರ್ ಪುರ ರಾಜನಗರ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಡಿಪಿ ದ್ವಿವೇದಿ ನೋಟಿಸ್ ಕೊಟ್ಟಿದ್ದು, ವಿಐಪಿ ಶಿಷ್ಟಚಾರ ವಿಭಾಗದ ರಾಕೇಶ್ ಕನ್ಹಾ ವಿವರಣೆ ಕೊಡಬೇಕಾಗಿದೆ.
ರಾಜಧಾನಿಯಲ್ಲಿ ಮತ್ತೆ ಸ್ಟಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ : ಪೊಲೀಸ್ ಠಾಣೆಯ ನಿರ್ಲಕ್ಷ್ಯಕ್ಕೆ ಸಾಕ್ಷಿ ಬೇಕಾ
ಬೆಂಗಳೂರು : ರಾಜಧಾನಿಯಲ್ಲಿ ಮತ್ತೆ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ಪ್ರಾರಂಭವಾಗಿದೆ. ಅಕ್ರಮವಾಗಿ ತಲೆ ಎತ್ತುವ ಈ ಸ್ಫಾಗಳಿಗೆ ಸ್ಥಳೀಯ ಪೊಲೀಸ್ ಠಾಣೆಯ ಕೃಪಾಕಟಾಕ್ಷವಿರುತ್ತದೆ. ಠಾಣಾ ವ್ಯಾಪ್ತಿಯಲ್ಲಿ ಏನಿದೆ ಏನಿಲ್ಲ ಎಂದು ಅರಿಯದಷ್ಟು ದಡ್ಡರಲ್ಲ ಠಾಣೆಯ ಇನ್ಸ್ ಪೆಕ್ಟರ್ ಗಳು. ಗೃಹ ಸಚಿವರು ಇಚ್ಛಾ ಶಕ್ತಿ ತೋರಿದ್ರೆ ಖಂಡಿತಾ ಈ ದಂಧೆಗೆ ಬ್ರೇಕ್ ಹಾಕಲು ಸಾಧ್ಯವಿದೆ.
ಹೀಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸ್ಪಾ ಮತ್ತು ಸಲೂನ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಗಿರಾಕಿ ಕೇಂದ್ರಗಳಿಗೆ ಸಿಸಿಬಿ ಪೊಲೀಸರು ದಾಳಿ ಮಾಡಿ 4 ಮಂದಿಯನ್ನು ಬಂಧಿಸಿದ್ದಾರೆ. ಇದೇ ವೇಳೆ 8 ಮಂದಿ ಯುವತಿಯರನ್ನು ರಕ್ಷಿಸಲಾಗಿದೆ.
ಇಂದಿರಾನಗರದ 100 ಅಡಿ ರಸ್ತೆಯ ನೆಸ್ಟ್ ಟು ಗ್ಲೇನ್ ಬೇಕ್ ಹೌಸ್ ಬಳಿ ಇರುವ ಐರಾ ಸ್ಪಾ ಅಂಡ್ ವೆಲ್ ನೆಸ್ ಸೆಂಟರ್ ತೆರೆದು ಹೊರ ರಾಜ್ಯದ ಯುವತಿಯರನ್ನು ಅಕ್ರಮವಾಗಿ ಇರಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಜಾಲವನ್ನು ಬೇಧಿಸಿರುವ ಪೊಲೀಸರು ಆರೋಪಿಗಳಾದ ರೂಬಿ ಮತ್ತು ನಿರಂಜನ್ ಎಂಬವರನ್ನು ಬಂಧಿಸಿದ್ದಾರೆ. ಇಲ್ಲಿ ನಾಲ್ವರು ಯುವತಿಯರನ್ನು ರಕ್ಷಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಜೆಪಿ ನಗರದ 5ನೇ ಹಂತದಲ್ಲಿ ರೂಹಿ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಆರೋಪಿಗಳಾದ ಶರೀಫ್ ಹಾಗೂ ರಾಜಶೇಖರ್ ಅನ್ನುವವರನ್ನು ಬಂಧಿಸಿದ್ದಾರೆ. ಇಲ್ಲೂ ರಾಜ್ಯ ಹಾಗೂ ವಿದೇಶದ 4 ಮಂದಿ ಯುವತಿಯರನ್ನು ರಕ್ಷಿಸಲಾಗಿದೆ.
ಈ ಎರಡೂ ಪ್ರಕರಣಗಳನ್ನು ಗಮನಿಸಿದರೆ ಸಿಸಿಬಿ ದಾಳಿ ಮಾಡಿದ ಬಳಿಕ ದಂಧೆ ಬೆಳಕಿಗೆ ಬಂದಿದೆ. ಸ್ಥಳೀಯ ಪೊಲೀಸ್ ಠಾಣೆಗಳಿಗೆ ಹಾಗಾದ್ರೆ ಈ ದಂಧೆಯ ಬಗ್ಗೆ ಮಾಹಿತಿ ಇರಲಿಲ್ವ. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ, ಕಾನೂನು ಬಾಹಿರ ಕೃತ್ಯ ನಡೆಯುತ್ತಿರುವುದು ಸ್ಥಳೀಯ ಪೊಲೀಸ್ ಇನ್ಸ್ ಪೆಕ್ಟರ್ ಗೆ ಗೊತ್ತಿಲ್ಲ ಅಂದ್ರೆ ಅದು ಕರ್ತವ್ಯಲೋಪವಾಗೋದಿಲ್ವ ಗೃಹ ಸಚಿವರೇ ಇದಕ್ಕೆ ಉತ್ತರಿಸಬೇಕು.
Discussion about this post