ಯುಪಿಎ ಸರ್ಕಾರದಲ್ಲಿ ಈ Pakistan journalist ಘಟನೆ ನಡೆದಿದ್ದು, ಯಾವುದೆಲ್ಲಾ ಮಾಹಿತಿಗಳು ಪಾಕ್ ಐಎಸ್ಐ ಕೈ ಸೇರಿದೆ ಅನ್ನುವುದು ಗೊತ್ತಿಲ್ಲ
ನವದೆಹಲಿ : ಭಾರತಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನ ಪತ್ರಕರ್ತನೊಬ್ಬ ( Pakistan journalist ) ಬೆಂಗಳೂರಿನಲ್ಲಿ ಪತ್ತೆದಾರಿ ಕೆಲಸ ಮಾಡಿ, ಮಾಹಿತಿಯನ್ನು ಪಾಕಿಸ್ತಾನ ಐಎಸ್ಐ ಸಂಘಟನೆಗೆ ಕೊಟ್ಟ ಅಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ವಿಷಯವನ್ನು ಬೆಂಗಳೂರಿನಲ್ಲಿ ಪತ್ತೆದಾರಿಕೆ ನಡೆಸಿದ್ದ ಪಾಕಿಸ್ತಾನ ಹಿರಿಯ ಅಂಕಣಕಾರ ನುಸ್ರತ್ ಮಿರ್ಜಾ ( Pakistani columnist Nusrat Mirza ) ಅವರೇ ಬಹಿರಂಗಪಡಿಸಿದ್ದಾರೆ. ಶಕೀಲ್ ಚೌಧರಿಯವರ ಯೂ ಟ್ಯೂಬ್ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ ಈ ಸ್ಫೋಟಕ ಹೇಳಿಕೆಯನ್ನು ನುಸ್ರತ್ ಮಿರ್ಜಾ ಬಹಿರಂಗಪಡಿಸಿದ್ದು, ಯಾವೆಲ್ಲಾ ಮಾಹಿತಿಗಳನ್ನು ಅವರು ಸಂಗ್ರಹಿಸಿದ್ದಾರೆ.ಯಾವೆಲ್ಲಾ ಮಾಹಿತಿಗಳು ಪಾಕಿಸ್ತಾನದ ಐಎಸ್ಐ ಕೈ ಸೇರಿದೆ ಅನ್ನುವುದು ಮಾತ್ರ ಗೊತ್ತಾಗಿಲ್ಲ.
( ಮನಮೋಹನ್ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ) ಅಂದ್ರೆ 2005 ರಿಂದ 2011 ರ ವೇಳೆಯಲ್ಲಿ ನಾನು ಭಾರತಕ್ಕೆ ಹೋಗಿದ್ದೆ. ಆಗ ಖುರ್ಷಿದ್ ಮೆಹಮೂದ್ ಪಾಕ್ ವಿದೇಶಾಂಗ ಸಚಿವರಾಗಿದ್ದರು. ಪಾಕಿಸ್ತಾನದಿಂದ ಭಾರತಕ್ಕೆ ಹೋಗುವವರಿಗೆ ಮೂರು ಊರುಗಳಿಗೆ ತೆರಳಲು ಅನುಮತಿ ನೀಡಲಾಗುತ್ತದೆ. ಆದರೆ ಖುರ್ಷಿದ್ ಮೆಹಮೂದ್ ಕಾರಣದಿಂದ ನಾನು 7 ನಗರಗಳಿಗೆ ಭೇಟಿ ನೀಡುವ ಅವಕಾಶ ಗಿಟ್ಟಿಸಿಕೊಂಡೆ. ಹೀಗಾಗಿ ನಾನು ಬೆಂಗಳೂರು, ಚೆನೈ, ಕೋಲ್ಕತಾ ಸೇರಿದಂತೆ ಅನೇಕ ಸ್ಥಳಗಳಿಗೆ ಭೇಟಿ ಕೊಟ್ಟೆ.
ಇದನ್ನೂ ಓದಿ : Karnataka news : ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳುವಲ್ಲಿ ತಾರಾ ಸರ್ಕಸ್ ಸಕ್ಸಸ್ : ಅರಣ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷೆಯಾಗಿ ಮುಂದುವರಿಕೆ
ಒಮ್ಮೆ ಭಾರತದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಆಹ್ವಾನದ ಮೇರೆಗೆ ಉಗ್ರವಾದ ಕುರಿತು ಉಪನ್ಯಾಸ ನೀಡಲು ಭಾರತಕ್ಕೆ ಭೇಟಿ ಕೊಟ್ಟೆ ಅಂದಿರುವ ಮಿರ್ಜಾ ಈ ವೇಳೆ ಅನೇಕ ಮುಸ್ಲಿಂ ಸಂಘಟನೆಗಳು, ಮುಸ್ಲಿಂ ಪತ್ರಕರ್ತರನ್ನು ಭೇಟಿ ಮಾಡಿ ಸಂದರ್ಶನ ನೀಡಿದ್ದೇನೆ ಅಂದಿದ್ದಾರೆ.
ಇದನ್ನೂ ಓದಿ : Rohit sharma : ರೋಹಿತ್ ಶರ್ಮಾ ಭರ್ಜರಿ ಸಿಕ್ಸರ್ : ಚೆಂಡು ತಗುಲಿ ಗಾಯಗೊಂಡ ಬಾಲಕಿ
ಭಾರತ್ ಜೋಡೋ ಯಾತ್ರೆಯ ಸಭೆಯ ನಡುವೆಯೇ ಯುರೋಪ್ ಗೆ ಹಾರಿದ ರಾಹುಲ್
ರಾಹುಲ್ ಗಾಂಧಿಯನ್ನು ಸೀರಿಯಸ್ ನಾಯಕ ಎಂದು ಬಹುತೇಕರು ಪರಿಗಣಿಸಿಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಬಲಿಷ್ಟಗೊಳಿಸಲು ಅವಕಾಶಗಳು ಮುಕ್ತವಾಗಿದೆ. ಆದರೆ ಅದನ್ನು ಅವರು ಬಳಸಿಕೊಳ್ಳುತ್ತಿಲ್ಲ
ನವದೆಹಲಿ : ಕಾಂಗ್ರೆಸ್ ಪಕ್ಷದ ಅಧ್ಯಕೀಯ ಚುನಾವಣೆ, ಭಾರತ ಜೋಡೋ ಯಾತ್ರೆಯ ಪೂರ್ವಭಾವಿ ಸಭೆ ಗುರುವಾರ ನಿಗದಿಯಾಗಿದ್ದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ( rahul Gandhi ) ಇವೆಲ್ಲವನ್ನೂ ಪಕ್ಕಕ್ಕಿಟ್ಟು5 ದಿನಗಳ ಪ್ರವಾಸಕ್ಕಾಗಿ ಯುರೋಪ್ ಗೆ ಹಾರಿದ್ದಾರೆ.
ಒಂದು ಕಡೆ ಗೋವಾದಲ್ಲಿ ಕಾಂಗ್ರೆಸ್ ಪಕ್ಷ ಸಂಕಷ್ಟಲ್ಲಿದೆ. ಅಲ್ಲಿ ಕೈ ಶಾಸಕರನ್ನು ಸೆಳೆಯಲು ಬಿಜೆಪಿ ಸರ್ಕಸ್ ನಡೆಸುತ್ತಿದೆ. ಗುರುವಾರ ಅಂದರೆ ನಾಳೆ ಪಕ್ಷದ ಅಧ್ಯಕ್ಷೀಯ ಚುನಾವಣೆ ಮತ್ತು ಭಾರತ್ ಜೋಡೋ ಯಾತ್ರೆ ಕುರಿತಂತೆ ಮಹತ್ವದ ಸಭೆಯನ್ನು ಕರೆಯಲಾಗಿದೆ ಹಾಗಿದ್ದರೂ ರಾಹುಲ್ ಗಾಂಧಿ ವಿದೇಶಕ್ಕೆ ಹಾರಿರುವುದು ಚರ್ಚೆಗೆ ಕಾರಣವಾಗಿದೆ.
ಪಕ್ಷದ ಕಾರ್ಯಕ್ಕಿಂತ ಅಗತ್ಯವಾದ ಮತ್ಯಾವ ಕಾರ್ಯಕ್ಕಾಗಿ ರಾಹುಲ್ ಗಾಂಧಿ ವಿದೇಶಕ್ಕೆ ಹಾರಿದರು ಅನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಇದನ್ನೂ ಓದಿ : Car theft : ವೇಶ್ಯಯರ ಸಂಗಕ್ಕಾಗಿ ಕಾರು ಕದಿಯುತ್ತಿದ್ದ ಖದೀಮನ ಬಂಧನ
Discussion about this post