ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಗೆ (Joe Biden) ಕ್ಯಾನ್ಸರ್. ಈ ಸುದ್ದಿ ವಿಶ್ವದೆಲ್ಲೆಡೆ ಸಂಚಲನ ಮೂಡಿಸಿದೆ. ಇದೀಗ ಶ್ವೇತಭವನವೇ ಈ ಬಗ್ಗೆ ಸ್ಪಷ್ಟನೆಯನ್ನೂ ಕೊಟ್ಟಿದೆ
ನಮ್ಮ ತಾಯಿ ನಮ್ಮನ್ನು ನಡೆಸುವುದಕ್ಕಿಂತ ಹೆಚ್ಚು ಓಡಿಸುತ್ತಿದ್ದರು. ಯಾಕಂದ್ರೆ ಹಾನಿಕಾರಕ ಹೊಗೆಯ ಪರಿಣಾಮ ಹಾಗಿತ್ತು. ಕಿಟಿಕಿಯಲ್ಲಿ ಅಂಟಿಕೊಂಡಿದ್ದ ಕೊಳೆ ತೆಗೆಯಲು ವಿಂಡ್ ಶೀಲ್ಡ್ ವೈಪರ್ ಬಳಸಬೇಕಿತ್ತು. ಹಾಗಾಗಿಯೇ ನಾನು ಮತ್ತು ನಾನು ಬೆಳೆದ ಏರಿಯಾದ ಅನೇಕ ಮಂದಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಡೆಲವೇರ್ ರಾಜ್ಯ ದೇಶದಲ್ಲೇ ಅತ್ಯಂತ ಹೆಚ್ಚು ಕ್ಯಾನ್ಸರ್ ಪೀಡಿತರನ್ನು ಹೊಂದಿತ್ತು, ಅನ್ನುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ( Joe Biden) ಭಾಷಣ ಇಜೀಗ ವೈರಲ್ ಆಗಿದೆ.
ಅಮೆರಿಕಾ ಅಧ್ಯಕ್ಷರೇ (Joe Biden) ತಮಗೆ ಕ್ಯಾನ್ಸರ್ ಇದೆ ಎಂದು ಹೇಳಿದ್ದಾರೆ ಅಂದ ಮೇಲೆ ಸಹಜವಾಗಿಯೇ ವಿಶ್ವದೆಲ್ಲೆಡೆ ಅದು ಸುದ್ದಿಯಾಗಿದೆ. ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿರುವಂತೆ ಇದೀಗ ಶ್ವೇತ ಭವನವೇ ಸ್ಪಷ್ಟನೆ ಕೊಟ್ಟಿದ್ದು, 2020ರ ಜನವರಿ ಮೊದಲು ಅವರು ತಾವು ಚಿಕಿತ್ಸೆ ಪಡೆದಿದ್ದ ಚರ್ಮ ಕ್ಯಾನ್ಸರ್ ಬಗ್ಗೆ ಮಾತನಾಡಿದ್ದಾರೆ ಎಂದು ಸ್ಪಷ್ಟನೆ ನೀಡಲಾಗಿದೆ. ಈ ಮೂಲಕ ಅಮೆರಿಕಾದ ನಾಗರಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ : veerendra heggade : ಪ್ರಧಾನಿ ನರೇಂದ್ರ ಮೋದಿಗೆ ಧರ್ಮಸ್ಥಳದ ಪ್ರಸಾದ ಕೊಟ್ಟ ವೀರೇಂದ್ರ ಹೆಗ್ಗಡೆ
ಈ ನಡುವೆ ಕ್ಯಾನ್ಸರ್ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ, ಅಮೆರಿಕಾ ಅಧ್ಯಕ್ಷ ಬೈಡನ್ ಗೆ ಕೊರೋನಾ ಪಾಸಿಟಿವ್ ಅನ್ನುವ ಸುದ್ದಿ ಬಂದಿದೆ. ಈ ಬಗ್ಗೆ ಶ್ವೇತ ಭವನ ಪ್ರಕಟಣೆ ಹೊರಡಿಸಿದ್ದು, ಕೊರೋನಾದ ಗುಣಲಕ್ಷಣಗಳು ಕಾಣಿಸಿಕೊಂಡಿದೆ. ಜೊತೆಗೆ ಕೋವಿಡ್ ಪರೀಕ್ಷೆಯಲ್ಲೂ ಪಾಸಿಟಿವ್ ಬಂದಿದೆ. ಹೀಗಾಗಿ ಅಧ್ಯಕ್ಷಕರು ಐಸೋಲೇಶನ್ ಗೆ ಒಳಗಾಗಿದ್ದಾರೆ ಅಂದಿದೆ.
Joe Biden leaves crowd STUNNED and wondering whether he’s just battling with the teleprompter AGAIN when he announces he has CANCER:
— Benny Johnson (@bennyjohnson) July 20, 2022
“That’s why I, and so damn many other people I grew up with, have cancer.”
pic.twitter.com/RuN2hquQtc
ಇನ್ನು ಅಮೆರಿಕಾ ಅಧ್ಯಕ್ಷರ ಆರೋಗ್ಯ ಸುಧಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಹಾರೈಸಿದ್ದಾರೆ.
Discussion about this post