ಚಿಲ್ಲರೆ ಇಲ್ಲ ಅನ್ನೋ ವರಿ ಇಲ್ಲ, ಚಿಲ್ಲರೆ ಎಣಿಸಬೇಕಲ್ವ ಅನ್ನುವ ತಲೆನೋವು ಕೂಡಾ ಇಲ್ಲ ( Nimishamba E Hundi)
ಮಂಡ್ಯ : ಪ್ರಧಾನಿ ನರೇಂದ್ರ ಮೋದಿಯವರು ಉತ್ತೇಜಿಸಿದ ಡಿಜಿಟಲ್ ಪೇಮೆಂಟ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪೆಟ್ಟಿಗೆ ಅಂಗಡಿ ಮಂದಿಯೂ ಪೇಟಿಎಂ ಮಾಡಿ ಅನ್ನುವಂತಾಗಿದೆ. ಇದರಿಂದ ಸಾಕಷ್ಟು ಅನುಕೂಲಗಳಾಗಿದ್ದು, ಕೈಯಲ್ಲಿ ಕರೆನ್ಸಿ ಹಿಡಿದುಕೊಂಡು ಓಡಾಡುವ ತಲೆ ನೋವು ತಪ್ಪಿದೆ. ( Nimishamba E Hundi)
ಮುಂದುವರಿದ ಭಾಗವಾಗಿ ಇದೀಗ ದೇವಸ್ಥಾನದ ಕಾಣಿಕೆ ಡಬ್ಬಿಯೂ ಡಿಜಿಟಲ್ ಸ್ವರೂಪಕ್ಕೆ ತಿರುಗಿದೆ. ಇನ್ಮುಂದೆ ತಂಟೆಗೆ ಹಾಕಿದ ಕಾಸು ಅರ್ಚಕರಿಗೆ ಹುಂಡಿಗೆ ಹಾಕಿದ ಕಾಸು ದೇವರಿಗೆ ಅನ್ನುವಂತಿಲ್ಲ. ಸ್ಕ್ಯಾನ್ ಮಾಡಿದ ಕಾಸು ದೇವರಿಗೆ ಅನ್ನಬೇಕು.
ಇದನ್ನು ಓದಿ : Akasa air ಏರ್ ಲೈನ್ಸ್ ಉದ್ಯಮಕ್ಕೆ ಕಾಲಿಟ್ಟ 7ನೇ ದಿನಕ್ಕೆ ಇಹಲೋಕ ತ್ಯಜಿಸಿದ ಉದ್ಯಮಿ
ಇದೇ ಮೊದಲ ಬಾರಿಗೆ ಮಂಡ್ಯದ ನಿಮಿಷಾಂಭ ದೇವಸ್ಥಾನದಲ್ಲಿ ಇ ಹುಂಡಿಯನ್ನು ಪರಿಚಯಿಸಲಾಗಿದ್ದು, ದೇವರಿಗೆ ಜನ ಹಾಕಬೇಕು ಅಂದುಕೊಂಡಿರುವ ನಗದು ಕಾಣಿಕೆಯನ್ನು ಹುಂಡಿಗೆ ಹಾಕಬೇಕಾಗಿಲ್ಲ. ಬದಲಾಗಿ Scan ಮಾಡಿದ್ರೆ ನೇರವಾಗಿ ದೇವಸ್ಥಾನದ ಬ್ಯಾಂಕ್ ಖಾತೆ ಹಣ ಜಮಾವಣೆಯಾಗುತ್ತದೆ.
ಭಕ್ತರಿಂದ ಕೂಡಾ ಇ ಹುಂಡಿ ವ್ಯವಸ್ಥೆಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಚಿಲ್ಲರೆ ಇಲ್ಲದ ಸಂದರ್ಭದಲ್ಲಿ ಇದೊಂದು ಬೆಸ್ಟ್ ಆಯ್ಕೆ ಅನ್ನುವುದು ಭಕ್ತರ ಅಭಿಪ್ರಾಯ. ಇನ್ನು ಹುಂಡಿಯಲ್ಲಿ ಕಾಸು ತುಂಬಿದಷ್ಟು ದೇವಸ್ಥಾನದ ಆಡಳಿತ ಮಂಡಳಿಗೆ ಆತಂಕ ಹೆಚ್ಚುತ್ತದೆ. ಎಲ್ಲಿ ಕಳ್ಳರು ಕದಿಯುತ್ತಾರೋ ಅನ್ನುವ ಭಯ. ಎಲ್ಲವೂ ಸುಸೂತ್ರವಾಗಿದೆ ಅಂದುಕೊಂಡ್ರೆ ಭಕ್ತರು ಹಾಕಿದ ಚಿಲ್ಲರ ಎಣಿಸುವುದು ಮತ್ತೊಂದು ತಲೆನೋವು.
ಇದೀಗ ಇ ಹುಂಡಿ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಹಾಡಿದ್ದು, Scan ಮಾಡಿ ಕಾಣಿಕೆ ಕೊಟ್ಟು ದೇವರೇ ಕಾಪಾಡು ಎಂದು ಬರಬಹುದಾಗಿದೆ.
Discussion about this post