ಆಗಸ್ಟ್ 7 ರಂದು ರಾಕೇಶ್ ಜುಂಜುನ್ವಾಲಾ ( rakesh jhunjhunwala) ಆಕಾಶ್ ಏರ್ ( akasa air) ಅನ್ನುವ ಸಂಸ್ಥೆಗೆ ಅಧಿಕೃತ ಚಾಲನೆ ನೀಡಿದ್ದರು
ಮುಂಬೈ : 5000 ರೂಪಾಯಿಗಳೊಂದಿಗೆ ಅವರು ಷೇರು ಮಾರುಕಟ್ಟೆಗೆ ಪ್ರವೇಶಿಸಿ ಬಿಲಿಯನೇರ್ ಆಗಿ ಬೆಳೆದಿದ್ದ ರಾಕೇಶ್ ಜುಂಜುನ್ವಾಲಾ (62) ( rakesh jhunjhunwala) ಅವರು ಹೃದಯಾಘಾತದಿಂದ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ( akasa air)
ಇದನ್ನೂ ಓದಿ : Bigg Boss Kannada Ott : ಆರ್ಯವರ್ಧನ್ ಚಳಿ ಬಿಡಿಸಿದ ಪತ್ರಕರ್ತ ಸೋಮಣ್ಣ ಮಾಚಿಮಡ
ಬಿಲಿಯನೇರ್ ಉದ್ಯಮಿ, ಷೇರು ವ್ಯಾಪಾರಿ ಮತ್ತು ಹೂಡಿಕೆದಾರರಾಗಿ ಗುರುತಿಸಿಕೊಂಡಿದ್ದ ರಾಕೇಶ್ ಜುಂಜುನ್ವಾಲಾ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬೆಳಗ್ಗೆ 6.45ರ ಸುಮಾರಿಗೆ ವಿಧಿವಶರಾಗಿದ್ದಾರೆ.

ರಾಕೇಶ್ ಜುಂಜುನ್ವಾಲಾ ಅವರು ಇತ್ತೀಚೆಗೆ ಆಗಸ್ಟ್ 7 ರಂದು ಆಕಾಶ ಏರ್ ಅನ್ನುವ ಸಂಸ್ಥೆ ಮೂಲಕ ವಾಯುಯಾನ ಉದ್ಯಮಕ್ಕೆ ಕಾಲಿಟ್ಟಿದ್ದರು.
1985ರಲ್ಲಿ ಕೇವಲ 5000 ರೂಪಾಯಿಗಳೊಂದಿಗೆ ರಾಕೇಶ್ ಅವರು ಷೇರು ಮಾರುಕಟ್ಟೆಗೆ ಪ್ರವೇಶಿಸಿ ಬಳಿಕ ಕಮಾಲ್ ಮಾಡಿದ್ದರು.
Discussion about this post