Friday, March 5, 2021

ನಾನು ತಾಯಿಯಾಗಲು ಅವನಿಗೆ ಅರ್ಜೆಂಟ್ ಇಲ್ಲ…ನಿಮಗ್ಯಾಕೆ…?

Must read

- Advertisement -
- Advertisement -

ಇತ್ತೀಚೆಗೆ ನಟಿ ಪ್ರಿಯಾಂಕಾ ಗರ್ಭಿಣಿ ಎಂಬ ವದಂತಿ ಎಲ್ಲೆಡೆ ಪ್ರಚಾರವಾಗಿತ್ತು. ಪ್ರಿಯಾಂಕಾ ತಾಯಿ ಮಧು ಚೋಪ್ರಾ ಈ ವಿಚಾರವನ್ನು ತಳ್ಳಿ ಹಾಕಿದ್ದರು.

ಇದರ ಬೆನ್ನಲ್ಲೇ ನಿಕ್ ಜೊನಾಸ್‌ ಮತ್ತು ಪ್ರಿಯಾಂಕ ಸಂಬಂಧ ಹಳಸಿದೆ, ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದೆ ಎಂದು ಸುದ್ದಿಯಾಗಿತ್ತು. ಆದರೆ ಅವೆರೆಡೂ ಕೂಡಾ ಸುಳ್ಳು ಸುದ್ದಿ ಎಂದು ಪ್ರಿಯಾಂಕ ಅವರೇ ಸ್ಪಷ್ಟಪಡಿಸಿದ್ದಾರೆ.

ನಾನು ‘ತಾಯಿ’ಯಾಗಲು ನಿಕ್ ಜೊನಾಸ್‌ಗೂ ಅವಸರವಿಲ್ಲ ಅಂದಿರುವ ಪ್ರಿಯಾಂಕ “ಸದ್ಯಕ್ಕೆ ನಾನು ತಾಯಿಯಾಗುತ್ತಿಲ್ಲ. ನನಗೆ ತಾಯಿಯಾಗಲು ಅವಸರವೂ ಇಲ್ಲ”

ಪ್ರಿಯಾಂಕ ಚೋಪ್ರಾ ಗರ್ಭಿಣಿಯಂತೆ.. ಟ್ರೋಲಿಗರಿಗೆ ಶುರುವಾಗಿದೆ ಚಿಂತೆ

” ನಾವಿಬ್ಬರೂ ಸರಿಯಾಗಿ ಯೋಚನೆ ಮಾಡಿ ಇದರ ಬಗ್ಗೆ ನಿರ್ಧಾರ ಮಾಡುತ್ತೇವೆ. ಈಗಲೇ ಫ್ಯಾಮಿಲಿ ಬೆಳೆಸುವ ಆಲೋಚನೆಯನ್ನು ನಾವು ಮಾಡಿಲ್ಲ. ಹಾಗೇನಾದರೂ ದಿಢೀರ್ ನಿರ್ಧಾರ ಕೈಗೊಂಡರೆ ನಾನೇ ಮೊದಲು ಹೇಳುತ್ತೇನೆ. ನನ್ನದೇ ಸೋಷಿಯಲ್ ಮೀಡಿಯಾ ಇದೆ ತಾನೇ” ಅಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.

ನಿಕ್ ಜೊತೆ ಪ್ರಿಯಾಂಕ ಬೆಡ್ ರೂಂ ನಲ್ಲಿದ್ದಾಗ ಫೋಟೋಗ್ರಾಫರ್ ಎಲ್ಲಿದ್ದ…?

ಪತ್ನಿಯ ಮಾತಿಗೆ ದನಿಗೂಡಿಸಿರುವ ನಿಕ್ , “ಸದ್ಯಕ್ಕೆ ನಾವಿಬ್ಬರೂ ಹಾಯಾಗಿದ್ದೇವೆ. ನಮ್ಮ ಫ್ಯಾಮಿಲಿಗೆ ಮತ್ತೊಬ್ಬರು ಸೇರಿಕೊಳ್ಳುವ ಬಗ್ಗೆ ಇನ್ನೂ ನಾವು ನಿರ್ಧಾರ ಮಾಡಿಲ್ಲ. ಈಗ ತಾನೇ ಮದುವೆಯಾಗಿದ್ದೇವೆ. ನಮಗೇನೂ ಅವಸರವಿಲ್ಲ” ಅಂದಿದ್ದಾರೆ.

ಅಲ್ಲಿಗೆ ಸೀಮಂತ ಕಾರ್ಯಕ್ರಮದ ಸಿಹಿ ತಿನ್ನಬಹುದು ಎಂದು ಕಾದಿದ್ದ ಮಂದಿಗೆ ನಿರಾಸೆ ಸುದ್ದಿಯನ್ನು ಕೊಡಲಾಗಿದೆ.

- Advertisement -
- Advertisement -
- Advertisement -

Latest article