ಜ್ಯೊತಿಷ್ಯದ ಪ್ರಕಾರ, ಪ್ರತಿಯೊಬ್ಬ ಮನುಷ್ಯನ ಜಾತಕದಲ್ಲಿ ನವಗ್ರಹಗಳ ಪ್ರಭಾವ ಮಹತ್ವದಾಗಿರುತ್ತದೆ. ವ್ಯಕ್ತಿ ಏಳು ಬೀಳುಗಳನ್ನು ನಿರ್ಧರಿಸುವುದು ಕೂಡಾ ಇದೇ ಗ್ರಹಗಳು. ನವಗ್ರಹಗಳು ತಮ್ಮದೆ ರೀತಿಯಲ್ಲಿ ಪ್ರಭಾವವನ್ನು ಬೀರುವುದರಿಂದ ಯಶಸ್ಸು ಹಾಗು ಸೋಲುಗಳನ್ನು ಮನುಷ್ಯ ಕಾಣುತ್ತಿರುತ್ತಾನೆ. ಇದೊಂದು ರೀತಿಯಲ್ಲಿ ಚಕ್ರದಂತೆ.
ಹೀಗಾಗಿಯೇ ಜೀವನದ ಸಂಕಷ್ಟದಿಂದ ಪಾರಾಗಲು ನವಗ್ರಹ ಶಾಂತಿ, ನವಗ್ರಹ ಪೂಜೆ, ನವಗ್ರಹ ಮಂತ್ರ ಪಠಣ, ನವಗ್ರಹಗಳಿಗೆ ಸಂಬಂಧಿಸಿದ ಧಾನ್ಯದ ದಾನ ಹೀಗೆ ಹಲವು ಕ್ರಮಗಳನ್ನು ಮಾಡುತ್ತಾರೆ. ಮಾತ್ರವಲ್ಲದೆ ಪ್ರತಿಯೊಂದು ದೇವಾಲಯದಲ್ಲಿರುವ ನವಗ್ರಹ ಗುಡಿಯನ್ನು ಸುತ್ತಿದರೂ ಕೂಡಾ ಫಲ ಸಿಗುತ್ತದೆ ಅನ್ನುವ ನಂಬಿಕೆ ಆಸ್ತಿಕರದ್ದು, ಅದು ಹೌದು ಕೂಡಾ. ವಿಶೇಷ ಅಂದ್ರೆ ರಾಜ್ಯ ಬಹುತೇಕ ದೇವಸ್ಥಾನಗಳಲ್ಲಿ ನವಗ್ರಹಗಳು ಜೊತೆಗಿರುವ ಗುಡಿಯಿದೆ. ಆದರೆ ಪ್ರತಿಯೊಂದು ಗ್ರಹಕ್ಕೂ ಪ್ರತ್ಯೇಕವಾಗಿ ಮೀಸಲಾದ, ನವಗ್ರಹ ದೇವಾಲಯಗಳನ್ನು ತಮಿಳುನಾಡಿನಲ್ಲಿ ಕಾಣಬಹುದಾಗಿದೆ.
ಅವು ಯಾವುದೆಲ್ಲ ಅಂದರೆ ತಿಂಗಳೂರು (ಚಂದ್ರ), ಅಲಂಗುಡಿ (ಗುರು), ತಿರುನಾಗೇಶ್ವರಂ (ರಾಹು), ಸೂರಿಯಾನರ್ ಕೋವಿಲ್ (ಸೂರ್ಯ), ಕಂಜನೂರ್ (ಶುಕ್ರ), ವೈತೀಶ್ವರನ್ ಕೋವಿಲ್ (ಮಂಗಳ), ತಿರುವೆಂಕಾಡು (ಬುಧ), ಕೀಳ್ಪೆರುಂಪಳ್ಳಂ (ಕೇತು), ತಿರುನಳ್ಳಾರ್ (ಶನಿ).
ಈ ನವಗ್ರಹ ದೇವಸ್ಥಾನಗಳನ್ನು ಕ್ರಮಬದ್ಧವಾಗಿ ತೆರಳಿ ದರ್ಶನ ಪಡೆಯುವುದರಿಂದ ಫಲ ಹೆಚ್ಚು ಎಂದು ಹೇಳಲಾಗಿದೆ. ಆದರೆ ತಮಿಳುನಾಡಿನ ಕುಂಭಕೋಣಂ ಪಟ್ಟಣಕ್ಕೆ ಸಮೀಪದಲ್ಲೇ ನವಗ್ರಹ ದೇವಸ್ಥಾನಗಳ ಪೈಕಿ ನಾಲ್ಕು ದೇವಸ್ಥಾನಗಳಿವೆ. ಹೀಗಾಗಿ ಇಲ್ಲೇ ದರ್ಶನ ಮುಗಿಸಿ ಮುಂದುವರಿದರೆ ಸಮಯ ಉಳಿಸಬಹುದಾಗಿದೆ.
Discussion about this post