ಟೋಕಿಯೊ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್ನಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿದ್ದಾರೆ. ಪದಕ ಗೆಲ್ಲುವಲ್ಲಿ ಚಾನು ಶ್ರಮವೆಷ್ಟಿತ್ತು ಅನ್ನುವುದು ಎಲ್ಲರಿಗೂ ಗೊತ್ತು. ಈ ನಡುವೆ ಮೀರಾಬಾಯಿ ಚಾನು ಪದಕಗೆ ಮುತ್ತಿಕ್ಕುವ ವೇಳೆ ಜನರ ಗಮನ ಸೆಳೆದದ್ದು ಅವರ ಕಿವಿಯಲ್ಲಿದ್ದ ಒಲಿಂಪಿಕ್ಸ್ ಉಂಗುರಗಳ ಮಾದರಿಯ ಚಿನ್ನದ ಓಲೆಗಳು.
ಈ ಓಲೆಗಳ ಹಿಂದೆ ಅದ್ಭುತ ಕಥೆಯಿದೆ.ಇದು ತಾಯಿ ಕೊಟ್ಟ ಉಡುಗೊರೆ ಹಾಗಂತ ಅದು ಒಲಿಂಪಿಕ್ಸ್ ಗೆ ಹೊರಡುವ ಸಂದರ್ಭದಲ್ಲಿ ಅಲ್ಲ. ಬದಲಾಗಿ ಐದು ವರ್ಷಗಳ ಹಿಂದೆ ತಾಯಿ ಈ ಉಡುಗೊರೆಯನ್ನು ಕೊಟ್ಟಿದ್ದರು.
ಅದು ಕೂಡಾ ತಾಯಿ ತನ್ನ ಸ್ವಂತ ಆಭರಣಗಳನ್ನು ಮಾರಾಟ ಮಾಡಿ ಒಲಿಂಪಿಕ್ಸ್ನಲ್ಲಿ ಮಗಳು ಪದಕ ಗೆಲ್ಲಲಿ, ಓಲೆಗಳು ಅವಳಿಗೆ ಅದೃಷ್ಟ ತಂದು ಕೊಡಲಿ ಎಂದು ಉಡುಗೊರೆ ಮಾಡಿಸಿ ಕೊಟ್ಟಿದ್ದರು.
ಇನ್ನು ಮಗಳು ಪದಕ ಗೆದ್ದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮೀರಾಬಾಯಿ ಚಾನು ತಾಯಿ, ಸೈಖೋಮ್ ಒಂಗ್ಬಿ ಟೋಂಬಿ ಲೀಮಾ ಒಮ್ಮೆಲೆ “ಓಲೆಗಳು ಅವಳಿಗೆ ಅದೃಷ್ಟ ತರುತ್ತದೆ ಅನ್ನೋ ಭರವಸೆ ಇತ್ತು. ಆದರೆ 2016 ರಿಯೋ ಒಲಿಂಪಿಕ್ಸ್ನಲ್ಲಿ ಅದು ಸಾಧ್ಯವಾಗಲಿಲ್ಲ. ಆದರೆ ಟೋಕಿಯೋ ಅದೃಷ್ಟದ ಬಾಗಿಲು ತೆರೆದಿದೆ ಅಂದಿದ್ದಾರೆ.
ಈ ಕಿವಿಯೋಲೆ ಬಗ್ಗೆ ಮಾತನಾಡಿರುವ ಮೀರಾಬಾಯಿ ಚಾನು ತಾಯಿ ರಿಯೊ ಒಲಿಂಪಿಕ್ಸ್ಗೆ ಮುಂಚಿತವಾಗಿ ಅವಳಿಗೆ ಕೊಟ್ಟಿದ್ದೆ. ನನ್ನ ಬಳಿ ಇದ್ದ ಒಡವೆ ಹಾಗೂ ಉಳಿತಾಯದಿಂದ ನಾನು ಅವುಗಳನ್ನು ಮಾಡಿಸಿದ್ದೆ ಅಂದಿದ್ದಾರೆ.
Discussion about this post