ಕ್ರೇಜಿ ಸ್ಟಾರ್ ರವಿಚಂದ್ರನ್ ಮಗಳ ಮದುವೆ ಮುಗಿಸಿದ ನಂತ್ರ ಒಂದಿಷ್ಟು ರಿಲ್ಯಾಕ್ಸ್ ಆಗಿದ್ದರು. ಇದೀಗ ಪುತ್ರ ಮನೋರಂಜನ್ ( Manoranjan Ravichandran marriage ) ಮದುವೆ ಕಾರ್ಯಕ್ಕೆ ಮುಂದಾಗಿದ್ದಾರೆ
ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ( Manoranjan Ravichandran marriage ) ಗೃಹಸ್ಥಾಶ್ರಮಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಾಹಿತಿಗಳ ಪ್ರಕಾರ ಆಗಸ್ಚ್ 21 ಮತ್ತು 22 ರಂದು ವಿವಾಹ ಕಾರ್ಯಕ್ರಮ ನಡೆಯಲಿದೆ. ಹೌದು ನಟ ರವಿಚಂದ್ರನ್ ಇದೀಗ ಮನೆಗೆ ಸೊಸೆ ತುಂಬಿಸಿಕೊಳ್ಳಲು ಮುಂದಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹುಡುಗಿ ಜೊತೆಗೆ ಮನೋರಂಜನ್ ವಿವಾಹ ನೆರವೇರಲಿದೆಯಂತೆ.
ಮನೋರಂಜನ್ 2017ರಲ್ಲಿ ಸಾಹೇಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಂತರ ಬೃಹಸ್ಪತಿ ಅನ್ನುವ ಸಿನಿಮಾದಲ್ಲಿ ನಟಿಸಿದರು. 2021ರಲ್ಲಿ ಮುಗಿಲ್ ಪೇಟೆ ಸಿನಿಮಾ ತೆರೆಗೆ ಬಂತು. 2022ರಲ್ಲಿ ಪ್ರಾರಂಭ ಅನ್ನುವ ಸಿನಿಮಾ ಮೂಲಕ ತಮ್ಮ ಅದೃಷ್ಟ ಪರೀಕ್ಷೆಯನ್ನು ಮನೋರಂಜನ್ ನಡೆಸಿದ್ದಾರೆ. ಆದರೆ ರವಿಚಂದ್ರನ್ ಪುತ್ರನ ಸಿನಿಮಾ ಅಂದ ಮೇಲೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ ಅನ್ನುವ ನಿರೀಕ್ಷೆ ಇತ್ತು. ಆದರೆ ಹಾಗಾಗಿಲ್ಲ.
ಇದನ್ನೂ ಓದಿ : Pakistan journalist : ಪತ್ತೆದಾರಿಕೆ ಸಲುವಾಗಿಯೇ ಬೆಂಗಳೂರಿಗೆ ಬಂದಿದ್ದ ಪಾಕ್ ಪತ್ರಕರ್ತ
ಇನ್ನು ರವಿಚಂದ್ರನ್ ಕಿರಿಯ ಮಗ ಕೂಡಾ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಇತ್ತೀಚೆಗೆ ತ್ರಿವಿಕ್ರಮ ಅನ್ನುವ ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಈ ಸಿನಿಮಾ ಕೂಡಾ ನಿರೀಕ್ಷೆಯ ಮಟ್ಟಕ್ಕೆ ಗೆಲುವು ಕಾಣಲಿಲ್ಲ.
ಇನ್ನು ರವಿಚಂದ್ರನ್ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಕಿರುತೆರೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅದರೊಂದಿಗೆ ಹೊಸಬರ ಸಿನಿಮಾಗಳಿಗೆ ಪ್ರೋತ್ಸಾಹಿಸುತ್ತಿರುವ ಅವರು ಚಂದನವನ ನಿಂತ ನೀರಾಗಬಾರದೆಂದು ಹೊಸ ಪ್ರತಿಭೆಗಳ ಬೆನ್ನು ತಟ್ಟುವ ಕೆಲಸ ಮಾಡುತ್ತಿದ್ದಾರೆ.
ಸೂಪರ್ ಮೂನ್ ನೋಡಲು ಸಿದ್ದರಾಗಿರಿ : ಮಳೆ ಇಲ್ಲದಿದ್ರೆ ನಿಮ್ಮ ಅದೃಷ್ಟ
ವರ್ಷದಲ್ಲಿ ಮೂರ್ನಾಲ್ಕು ಸೂಪರ್ ಮೂನ್ ಕಾಣಿಸಿಕೊಳ್ಳುತ್ತದೆ. ಇಂದು ಕಾಣಿಸಿಕೊಳ್ಳುವ ಸೂಪರ್ ಮೂನ್ ಅತಿ ದೊಡ್ಡದು
ಈ ವರ್ಷದ ಅತಿದೊಡ್ಡ ಸೂಪರ್ ಮೂನ್ ಇಂದು ಕಾಣಸಿಗಲಿದೆ. ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳು ಈ ವಿಶೇಷ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಭಾರತದಲ್ಲಿ ಮಂಗಳವಾರ ಮುಂಜಾನೆಯಿಂದ ಶುಕ್ರವಾರ ಬೆಳಗಿನ ಜಾವದವರೆಗೆ ಸುಮಾರು ಮೂರು ದಿನಗಳ ಕಾಲ ಚಂದ್ರನು ಪೂರ್ಣವಾಗಿ ಕಾಣಿಸಿಕೊಳ್ಳುತ್ತಾನೆ. ನಮ್ಮ ದೇಶದಲ್ಲಿ ಗುರುವಾರ ಅಂದರೆ ಜುಲೈ 14 ರ ಮಧ್ಯರಾತ್ರಿ 12.08 ಕ್ಕೆ ಸೂಪರ್ ಮೂನ್ ವೀಕ್ಷಿಸಬಹುದಾಗಿದೆ.
ಸೂಪರ್ ಮೂನ್ ಅಂದರೇನು…? ಹುಣ್ಣಿಮೆ ಅಥವಾ ಪೌರ್ಣಿಮೆ ದಿನದಂದು ಭೂಮಿಯ ಒಂದು ಬದಿಯಲ್ಲಿ ಸೂರ್ಯ ಇದ್ದರೆ, ಅದಕ್ಕೆ ತದ್ವಿರುದ್ಧವಾಗಿ ಹಿಂಬದಿಯಲ್ಲಿ ಚಂದ್ರನಿರುತ್ತಾನೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಇರುತ್ತದೆ. ಸೂಪರ್ ಮೂನ್ ದಿನ ಭೂಮಿಯ ಹತ್ತಿರಕ್ಕೆ ಚಂದ್ರ ಬರುವ ಕಾರಣ ಸೂರ್ಯನ ಬೆಳಕಿನಲ್ಲಿ ಇಡೀ ಚಂದ್ರ ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತದೆ. ಆ ದಿನದಂದು ಭೂಮಿಗೆ ಚಂದ್ರ ಅತಿ ಸಮೀಪಕ್ಕೆ ಬಂದಾಗ ಅದನ್ನು ಸೂಪರ್ ಮೂನ್ ಎಂದು ಕರೆಯುತ್ತಾರೆ.
ಈ ವರ್ಷದ ಅತಿ ದೊಡ್ಡ ಸೂಪರ್ ಮೂನ್ ಗುರು ಪೂರ್ಣಿಮೆಯ ದಿನವಾದ ಇಂದು ಕಾಣಿಸಿಕೊಳ್ಳಲಿದೆ. ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಹತ್ತಿರವಾಗುವುದರಿಂದ ಚಂದ್ರ ಎಂದಿಗಿಂತ ಇಂದು ದೊಡ್ಡದಾಗಿ ಕಾಣಿಸಿಕೊಳ್ಳುತ್ತಾನೆ. ಇದನ್ನು ನೋಡುವುದೇ ಕಣ್ಣಿಗೆ ಹಬ್ಬ ಅನ್ನಿಸಿಕೊಳ್ಳಲಿದೆ
Discussion about this post