ಬಾಲ್ ಎಲ್ಲಿದ್ದೀಯಪ್ಪಾ….?
ಹೆಗಲಲ್ಲಿ ಕೊಡಲಿ ಇಟ್ಟುಕೊಂಡು ಊರೆಲ್ಲಾ ಹುಡುಕಾಡಿದರು ಇದು ಗಾದೆ ಮಾತು. ಆದರೆ ಈಗ ಐಪಿಎಲ್ ಪಂದ್ಯಕ್ಕೆ ಬಂದ್ರೆ ಕಿಸೆಯಲ್ಲಿ ಬಾಲ್ ಇಟ್ಟು ಮೈದಾನವೆಲ್ಲಾ ಹುಡುಕಿದರು ಎಂದು ಗಾದೆಯನ್ನು ಬದಲಾಯಿಸಬೇಕಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಬುಧವಾರ RCB ಬ್ಯಾಟಿಂಗ್ ಮಾಡುತ್ತಿತ್ತು . 15ನೇ ಓವರ್ ಎಸೆಯಲು ಬಂದ ಪಂಜಾಬ್ ಬೌಲರ್ ಅಂಕಿತ್ ರಜಪೂತ್ ಬಾಲ್ ಗಾಗಿ ಹುಡುಕಿದಾಗ ಬಾಲ್ ನಾಪತ್ತೆ. ಬಾಲ್ ಕೊಡಿ ಎಂದು ಬೌಲರ್ ಕೇಳಿದ್ರೆ ಬಾಲ್ ಎಲ್ಲಿದೆ. ಗೊತ್ತಿಲ್ಲ. ಆಟಗಾರರು ಮುಖ ಮುಖ ನೋಡಿಕೊಳ್ಳುತ್ತಿದ್ದಾರೆ. ಅಂಪೈರ್ ಅಂಪಾಯರ್ ಶಂಶುದ್ದೀನ್ ಮತ್ತು ಬ್ರೂಸ್ ಆಕ್ಸನ್ ಫರ್ಡ್ ಅರೇ ಬಾಲ್ ಎಲ್ಲಿ ಎಂದು ತಲೆ ಕೆಡಿಸಿಕೊಂಡಿದ್ದಾರೆ.
ನಿನ್ನಲ್ಲಿತ್ತು, ನಿನ್ನಲ್ಲಿತ್ತು ಅನ್ನುವ ಚರ್ಚೆಯ ನಡುವೆ ಬಾಲ್ ಎಲ್ಲಿ ಹೋಗಿದೆ ಎಂದು ಯಾರಿಗೂ ಗೊತ್ತೇ ಆಗಲಿಲ್ಲ. ನಂತ್ರ ಹೆಚ್ಚುವರಿ ಅಂಪಾಯರ್ ಹೊಸ ಬಾಲ್ ತಂದು ಆಟ ಮುಂದುವರಿಯಿತು. ಹಾಗಾದ್ರೆ ಬಾಲ್ ಎಲ್ಲಿ ಹೋಯ್ತು.
ಕೊನೆಗೆ ಬಾಲ್ ಹುಡುಕಾಡುವ ಸಲುವಾಗಿ ವಿಡಿಯೋ ಪೂಟೇಜ್ ಅನ್ನು ರಿವೈಡ್ ಮಾಡಿದ್ರೆ, ಅಸಲಿ ಕಥೆ ಗೊತ್ತಾಗಿದೆ.
14ನೇ ಓವರ್ ಮುಗಿದಾಗ ಅಂಪಾಯರ್ ಬ್ರೂಸ್ ಆಕ್ಸನ್ ಫರ್ಡ್ ಟೈಮ್ ಔಟ್ ಘೋಷಿಸುತ್ತಾರೆ. ಆಗ ಸ್ಕ್ವೇರ್ ಲೆಗ್ ನಲ್ಲಿದ್ದ ಅಂಪಾಯರ್ ಶಂಶುದ್ದೀನ್ ಬಂದು ಆಕ್ಸನ್ ಫರ್ಡ್ ಬಳಿಯಿಂದ ಬಾಲ್ ಪಡೆದುಕೊಳ್ಳುತ್ತಾರೆ. ಹಾಗೇ ಅದನ್ನ ತಮ್ಮ ಪ್ಯಾಂಟ್ ಕಿಸೆಯಲ್ಲಿ ಜಾರಿಸಿದ್ದಾರೆ.
ಟೈಮ್ ಔಟ್ ಮುಗಿದು ಆಟ ಪ್ರಾರಂಭವಾದ್ರೆ ಶಂಶುದ್ದೀನ್ ಅವರಿಗೆ ಚೆಂಡು ತನ್ನ ಕಿಸೆಯಲ್ಲಿ ಇದೆ ಅನ್ನುವುದು ಮರೆದು ಹೋಗಿದೆ.
ಕೊನೆಗೆ ಟಿವಿ ಅಂಪಾಯರ್ ಶಂಶುದ್ದೀನ್ ಸಾರ್ ಬಾಲ್ ಎಲ್ಲೂ ಇಲ್ಲ ನಿಮ್ಮ ಕಿಸೆಯಲ್ಲಿದೆ ಅಂದ್ರೆ, ಹೋ..ಹೌದಲ್ಲ ಎಂದು ನಗುತ್ತಾ ಶಂಶುದ್ದೀನ್ ಕಿಸೆಯಿಂದ ಚೆಂಡನ್ನು ಹೊರತೆಗೆದಿದ್ದಾರೆ.
Discussion about this post