ಬಹು ನಿರೀಕ್ಷೆಯ ವಿಕ್ರಾಂತ್ ರೋಣ ಚಿತ್ರಕ್ಕಾಗಿ ನಟ ಸುದೀಪ್ ಡಬ್ಬಿಂಗ್ ಮುಗಿಸಿದ್ದಾರೆ. ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ತುಂಬಾ ದಿನಗಳ ನಂತ್ರ ಸಿನಿಮಾಗೆ ನನ್ನ ದನಿ ನೀಡುತ್ತಿದ್ದೇನೆ ಅಂದಿದ್ದಾರೆ.
ಅನೂಪ್ ಭಂಡಾರಿ ನಿರ್ದೇಶನದದಲ್ಲಿ ಮೂಡಿ ಬರುತ್ತಿರುವ ಚಿತ್ರವನ್ನು ಜಾಕ್ ಮಂಜು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ರವಿಶಂಕರ್ ಗೌಡ, ನೀತಾ ಅಶೋಕ್ ಸೇರಿ ಬಹುದೊಡ್ಡ ತಾರಾಂಗಣವಿದೆ.
ಇನ್ನು ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಬಿಗ್ಬಜೆಟ್ ಚಿತ್ರ ‘ವಿಕ್ರಾಂತ್ ರೋಣ ಆಗಸ್ಟ್ 19ರಂದು ತೆರೆಯ ಮೇಲೆ ಬರುವ ಸಾಧ್ಯತೆಗಳಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಥಿಯೇಟರ್ ತೆರೆಯಲು ಇನ್ನೂ ಅನುಮತಿ ಸಿಕ್ಕಿಲ್ಲ. ಜೊತೆಗೆ ಶೇ100ರಷ್ಟು ಸೀಟು ತುಂಬಲು ಸರ್ಕಾರ ಅವಕಾಶ ಕೊಡದಿದ್ರೆ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆಗಳಿದೆ.
ಈ ನಡುವೆ ಶಾಲಿನಿ ಆರ್ಟ್ಸ್ ಬ್ಯಾನರ್ ನಲ್ಲಿ ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾ ತಯಾರಾಗುತ್ತಿದ್ದು, ಮಂಜುನಾಥ್ ಗೌಡ ನಿರ್ಮಾಪಕರಾಗಿದ್ದಾರೆ. ಶಿವ ಕಾರ್ತಿಕ್ ನಿರ್ದೇಶಿಸಿ ಸೂರಪ್ಪ ಬಾಬು ನಿರ್ಮಿಸಿರುವ ಕೋಟಿಗೊಬ್ಬ-3 ಸಿನಿಮಾ ರಿಲೀಸ್ ನಂತರವೇ ವಿಕ್ರಾಂತ್ ರೋಣ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಮಂಜುನಾಥ್ ಗೌಡ ತಿಳಿಸಿದ್ದಾರೆ.
ಏಪ್ರಿಲ್ 29 ರಂದು ಬಹು ನಿರೀಕ್ಷಿತ ಕೋಟಿಗೊಬ್ಬ -3 ರಿಲೀಸ್ ಆಗಬೇಕಿತ್ತು, ಆದರೆ ಕೋರೋನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿತು.
ಕೊರೋನಾ ಪರಿಸ್ಥಿತಿ ಸುಧಾರಿಸಿದರೆ ಮತ್ತು ಥಿಯೇಟರ್ ಗಳಲ್ಲಿ ಶೇಕಡಾ 100 ರಷ್ಟು ಸೀಟಿಗೆ ಅವಕಾಶ ನೀಡಿದರೇ ಕೋಟಿಗೊಬ್ಬ 3 ಅನ್ನು ಬಿಡುಗಡೆ ಮಾಡಲು ಆಗಸ್ಟ್ 19 ರ ಬಿಡುಗಡೆಯ ದಿನಾಂಕವನ್ನು ಸೂರಪ್ಪ ಬಾಬು ಅವರಿಗೆ ನೀಡಲು ನಾನು ಬಯಸುತ್ತೇನೆ. ನಾನು ಇನ್ನೊಂದು ದಿನಾಂಕವನ್ನು ತೆಗೆದುಕೊಳ್ಳುತ್ತೇನೆ ಎಂದು ಮಂಜುನಾಥ್ ಗೌಡ ಹೇಳಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಬಗ್ಗೆ ಉತ್ತರಿಸಿದ ಮಂಜುನಾಥ್ ಗೌಡ, ಸದ್ಯ ಚಿತ್ರ ತಂಡ ಕನ್ನಡ ಡಬ್ಬಿಂಗ್ ನಡೆಯುತ್ತಿದ್ದು, ಭಾರತದ ಇತರ ಭಾಷೆ ಮತ್ತು ಅಂತಾರಾಷ್ಟ್ರೀಯ ಭಾಷೆಗಳಲ್ಲಿಯೂ ಡಬ್ಬಿಂಗ್ ನಡೆಯಲಿದೆ ಎಂದು ತಿಳಿಸಿದ್ದಾರೆ.
ನಿರೂಪ್ ಭಂಡಾರಿ, ನೀತಾ ಅಶೋಕ್, ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ, ಕೋಟಿಗೊಬ್ಬ 3 ಸಿನಿಮಾದಲ್ಲಿ ಮಡೋನಾ ಸೆಬಾಸ್ಟಿಯನ್, ಅಫ್ತಾಬ್ ಶಿವದಾಸನಿ, ಶ್ರದ್ಧಾ ದಾಸ್ ಹಾಗೂ ಸುಧಾಂಶು ಪಾಂಡೆ ಮುಂತಾದವರು ಅಭಿನಯಿಸಿದ್ದಾರೆ.
ಸುದೀಪ್ ಅಭಿನಯದ ಎರಡು ಸಿನಿಮಾಗಳು ಭಾರೀ ನಿರೀಕ್ಷೆ ಮೂಡಿಸಿದ್ದು, ಕನ್ನಡ ಸಿನಿಮಾ ರಂಗ ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆಗೆ ಕಾರಣನವಾಗಲಿದೆ ಎಂದು ಮಂಜುನಾಥ್ ಗೌಡ ತಿಳಿಸಿದ್ದಾರೆ.
Discussion about this post