Thursday, March 4, 2021

KGF Chapter 2 ವಿನಲ್ಲಿ ಯಶ್ ಜೊತೆ ನೀವು ಕಾಣಿಸಿಕೊಳ್ಳಬೇಕಾ…ಅವಕಾಶ ಇಲ್ಲಿದೆ..

Must read

- Advertisement -
- Advertisement -

ಭಾರತೀಯ ಸಿನಿ ರಂಗವೇ ಚಂದನವನದತ್ತ ತಿರುಗಿ ನೋಡುವಂತೆ ಮಾಡಿದ ಕನ್ನಡದ ಸಿನಿಮಾ ‘ಕೆಜಿಎಫ್’. ಸದ್ಯ ಈ ಚಿತ್ರದ ಚಾಪ್ಟರ್ 2 ಚಿತ್ರೀಕರಣದ ತಯಾರಿಯಲ್ಲಿದೆ ಚಿತ್ರತಂಡ.

ಕೆಜಿಎಫ್ ಮೊದಲ ಭಾಗಕ್ಕೆ ಕಲಾವಿದರನ್ನು ಡಿಫರೆಂಟ್ ಆಗಿ ಆಯ್ಕೆ ಮಾಡಿದ್ದ ನಿರ್ದೇಶಕ ಪ್ರಶಾಂತ್ ನೀಲ್, ಚಾಪ್ಟರ್ 2 ಗೂ ಕೂಡಾ ಅದೇ ತಂತ್ರ ಅನುಸರಿಸುತ್ತಿದ್ದಾರೆ.

ಮೊದಲ ಭಾಗದಲ್ಲಿ ಬಂದ ಅನೇಕ ಗಡ್ಡಧಾರಿಗಳು ಮೊದಲ ಬಾರಿಗೆ ಕ್ಯಾಮಾರ ಎದುರಿಸುತ್ತಿದ್ದರು. ಆಡಿಷನ್ ಮೂಲಕ ಆಯ್ಕೆಯಾದ ಕಲಾವಿದರಿಗೆ ಕಠಿಣ ತರಬೇತಿ ಕೊಟ್ಟು, ಅದ್ಭುತ ಫಲಿತಾಂಶವನ್ನು ಪಡೆಯಲಾಗಿತ್ತು.
ಇದೀಗ ಸ್ಯಾಂಡಲ್‍ವುಡ್‌ನಲ್ಲಷ್ಟೇ ಅಲ್ಲದೆ, ಇಡೀ ದೇಶದಾದ್ಯಂತ ಕುತೂಹಲ ಮೂಡಿಸಿರುವ ಸಿನಿಮಾ ‘ಕೆಜಿಎಫ್ ಚಾಪ್ಟರ್ 2’. ಈ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹೀಗಾಗಿ ಮತ್ತಷ್ಟು ವಿಭಿನ್ನವಾಗಿ ಚಿತ್ರ ಮಾಡಬೇಕು ಅನ್ನುವ ಕಾರಣಕ್ಕೆ ಹೊಸ ಪ್ರತಿಭೆಗಳ ಹುಡುಕಾಟಕ್ಕೆ ನೀಲ್ ಇಳಿದಿದ್ದಾರೆ.

ಇದೇ ಏಪ್ರಿಲ್ 26ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಜಿಎಂ ರಿಜಾಯಿಜ್‌ನಲ್ಲಿ ಆಡಿಷನ್ಸ್ ನಡೆಯಲಿದ್ದು, ನಿಮಗೂ ಯಶ್ ಜೊತೆ ಕಾಣಿಸಿಕೊಳ್ಳಬೇಕು, ಚಂದನವನದಲ್ಲಿ ತಾಕತ್ತು ತೋರಿಸಬೇಕು ಅನ್ನುವ ಹಾಗಿದ್ದರೆ ಟ್ರೈ ಮಾಡಬಹುದು.

https://twitter.com/prashanth_neel/status/1119932065951076352
- Advertisement -
- Advertisement -
- Advertisement -

Latest article