Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಸೋತರೂ ಭಾರತೀಯರ ಹೃದಯ ಗೆದ್ದ ಮಹಿಳಾ ಹಾಕಿ ತಂಡ

Radhakrishna Anegundi by Radhakrishna Anegundi
August 6, 2021
in ಕ್ರೀಡಾಂಗಣ
women hockey
Share on FacebookShare on TwitterWhatsAppTelegram

ಕಂಚಿನ ಪದಕದ ನಿರೀಕ್ಷೆ ಮೂಡಿಸಿದ್ದ ಭಾರತದ ಮಹಿಳಾ ಹಾಕಿ ತಂಡ ಗ್ರೇಟ್ ಬ್ರಿಟನ್ ವಿರುದ್ಧ ವಿರೋಚಿತ ಸೋಲು ಕಂಡಿದೆ. ಗೆಲುವಿಗಾಗಿ ತೀವ್ರ ಸೆಣಸಾಟ ನಡೆಸಿದ ಭಾರತೀಯ ಆಟಗಾರರು ಗ್ರೇಟ್ ಬ್ರಿಟನ್ ತಂಡದ ಉಸಿರುಗಟ್ಟಿಸಿದ್ದರು. ಅದ್ಭುತ ಪ್ರಯತ್ನದ ನಡುವೆಯೂ ಬ್ಯಾಡ್ ಲಕ್ ಅನ್ನುವಂತೆ ವಿಜಯಲಕ್ಷ್ಮಿ ಒಲಿಯಲಿಲ್ಲ.ಶುಕ್ರವಾರ ಬೆಳಗ್ಗೆ ಮುಕ್ತಾಯವಾದ ಪಂದ್ಯದಲ್ಲಿ ಭಾರತ ತಂಡ ಗ್ರೇಟ್ ಬ್ರಿಟನ್ ವಿರುದ್ಧ 1 ಗೋಲುಗಳ ಅಂತರದಲ್ಲಿ ಸೋಲು ಕಂಡಿದೆ.

Jo kabhi na ho paya ho, wo karke dikhaya hai,
Namumkin ko mumkin karna, is Team ne sikhaya hai!

The journey has been nothing short of inspirational. ?#HaiTayyar #IndiaKaGame #Tokyo2020 #TeamIndia #TokyoTogether #StrongerTogether #HockeyInvites #WeAreTeamIndia #Hockey pic.twitter.com/HYOWoz1Asn

— Hockey India (@TheHockeyIndia) August 6, 2021

ಚೊಚ್ಚಲ ಪದಕ ಗೆಲ್ಲುವಲ್ಲಿ ತಂಡ ವಿಫಲವಾದರೂ ರಾಣಿ ರಾಂಪಾಲ್ ಪಡೆಯ ಆಟ ಭಾರತೀಯರ ಹೃದಯ ಗೆದ್ದಿದೆ. ಮೊದಲ ಕ್ವಾರ್ಟರ್ ನಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸುವ ಅವಕಾಶ ಗ್ರೇಟ್ ಬ್ರಿಟನ್ ಗೆ ಸಿಕ್ಕಿತ್ತು. ಆದರೆ ಭಾರತೀಯ ಗೋಲ್ ಕೀಪರ್ ಸವಿತಾ ಪೂನಿಯಾ ಅದನ್ನು ವಿಫಲಗೊಳಿಸಿದರು, ಎರಡನೇ ಸಲ ಸಿಕ್ಕ ಅವಕಾಶವನ್ನು ಬ್ರಿಟನ್ ಗೋಲಾಗಿ ಪರಿವರ್ತಿಸಲಿಲ್ಲ. ಮೂರನೇ ಸಲವೂ ಪೆನಾಲ್ಟಿ ಕಾರ್ನರ್ ಸಿಕ್ಕರೂ ಭಾರತೀಯ ತಂಡದ ರಕ್ಷಣಾತ್ಮಕ ಆಟದ ಕಾರಣ ಬ್ರಿಟನ್ ಗೆ ಗೋಲು ಬಾರಿಸುವ ಅವಕಾಶವೇ ಸಿಗಲಿಲ್ಲ. ಹೀಗಾಗಿ ಯಾವುದೇ  ಗೋಲು ಇಲ್ಲದೆ ಮೊದಲ ಕ್ವಾರ್ಟರ್ ಮುಕ್ತಾಯವಾಯ್ತು.

ಎರಡನೇ ಕ್ವಾರ್ಟರ್ ಆರಂಭದಲ್ಲಿ ಭಾರತೀಯ ಆಟಗಾರ್ತಿ ಗ್ರೇಸ್ ಎಕ್ಕಾ ಮಾಡಿದ ಎಡವಟ್ಟು ಬ್ರಿಟನ್ ಗೆ ಒಂದು ಗೋಲು ತಂದುಕೊಟ್ಟಿತು. ಬಳಿಕ ಬ್ರಿಟನ್ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತಾದರೂ, ಗೋಲು ಬಾರಿಸಲು ಭಾರತೀಯ  ಗೋಲು ಕೀಪರ್ ಅದನ್ನು ತಡೆದರು.

#HaiTayyar #IndiaKaGame #Tokyo2020 #TeamIndia #TokyoTogether #StrongerTogether #HockeyInvites #WeAreTeamIndia #Hockey pic.twitter.com/GbnmbzfU0O

— Hockey India (@TheHockeyIndia) August 6, 2021

ಪಂದ್ಯದ 19ನೇ ನಿಮಿಷಯದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಆದರೆ ಅದನ್ನು ಬಳಸಿಕೊಳ್ಳಲು ನಮ್ಮವರು ಸಫಲರಾಗಲಿಲ್ಲ. ಇದಾದ ಬಳಿಕ ಬ್ರಿಟನ್ ನ ಸಾರಾ ರಾಬರ್ಟ್ ಸನ್ ಗೋಲು ಬಾರಿಸಿ 2-0 ಮುನ್ನಡೆ ಪಡೆದರು.

ಈ ವೇಳೆ ಎಚ್ಚೆತ್ತುಕೊಂಡ ಭಾರತೀಯ ಆಟಗಾರರು ಮತ್ತಷ್ಟು ಅಕ್ರಮಣಕಾರಿ ಆಟಕ್ಕೆ ಮುಂದಾದರು. ಹೀಗಾಗಿ ಪೆನಾಲ್ಟಿ ಯಲ್ಲಿ ಗೋಲು ಬಾರಿಸಿ ಖಾತೆ ತೆರೆದರು. ಇದಾದ ಬಳಿಕ ಗುರ್ಜಿತ್ ಕೌರ್ ಪೆನಾಲ್ಟಿ ಕಾರ್ನರ್ ನಲ್ಲಿ ಸಿಕ್ಕ ಅವಕಾಶವನ್ನು ಗೋಲಾಗಿ ವರಿವರ್ತಿಸಿ 2-2 ಅಂಕಗಳೊಂದಿಗೆ ಸಮಬಲಕ್ಕೆ ಮುಂದಾದರು.  ಬಳಿಕ ಭಾರತದ ವಂದನಾ ಕಟಾರಿಯಾ ಮತ್ತೊಂದು ಗೋಲು ಸಂಪಾದಿಸಿ ಭಾರತಕ್ಕೆ 3-2ರ ಮುನ್ನಡೆ ತಂದುಕೊಟ್ಟರು.

ಮೂರನೇ ಕ್ವಾರ್ಟರ್ ನಲ್ಲಿ ಬ್ರಿಟನ್ ನಾಯಕಿ ಹೋಲಿ ಗೋಲು ಬಾರಿಸಿ 3-3 ಸಮಬಲಕ್ಕೆ ತಂಡವನ್ನು ತಂದು ನಿಲ್ಲಿಸಿದರು. ಮೂರನೇ ಕ್ವಾರ್ಟರ್ ನಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಭಾರತಕ್ಕೆ ಗೋಲು ತಂದುಕೊಡಲಿಲ್ಲ. ನಾಲ್ಕನೇ ಕ್ವಾರ್ಟರ್ ನ ಆರಂಭದಲ್ಲಿ ಬ್ರಿಟನ್ ಪೆನಾಲ್ಟಿ ಕಾರ್ನರ್ ನ ಲಾಭ ಬಳಸಿಕೊಂಡಿತು. ಹೀಗಾಗಿ 4-3 ಅಂತರದೊಂದಿಗೆ ಭಾರತ ಶರಣಾಯ್ತು.

The fact that we are PROUD of this team would be an understatement. ?

Here are some glimpses from our hard-fought match against Great Britain. ?#HaiTayyar #IndiaKaGame #Tokyo2020 #TeamIndia #TokyoTogether #StrongerTogether #HockeyInvites #WeAreTeamIndia #Hockey pic.twitter.com/ms4YZyRDqe

— Hockey India (@TheHockeyIndia) August 6, 2021

ಇನ್ನು  ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡದ ಶ್ರಮಕ್ಕೆ ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಾರೆ. ತಂಡದ ಸಾಧನೆ ಹೆಮ್ಮೆ ತಂದಿದೆ. ನಮ್ಮ ಮಹಿಳಾ ಹಾಕಿ ತಂಡದ ಸಾಧನೆಯನ್ನು ನಾವು ಎಂದೆಂದಿಗೂ ನೆನಪಿನಲ್ಲಿ ಇಡುತ್ತೇವೆ. ಸ್ವಲ್ಪದರಲ್ಲಿ ನಮಗೆ ಕಂಚಿನ ಪದಕ ಕೈತಪ್ಪಿ ಹೋಗಿದೆ. ಆದರೆ ಈ ತಂಡದ ಪರಿಶ್ರಮ, ಸಾಧನೆ ನವ ಭಾರತದ ಉತ್ಸಾಹವನ್ನು ಪ್ರತಿಫಲಿಸುತ್ತದೆ ಅಂದಿದ್ದಾರೆ.

Tags: hockey
Share2TweetSendShare

Discussion about this post

Related News

fifa-world-cup-2022 argentina-france-world-cup-final-in-qatar

FIFA World cup : ಸೂಫರ್ ಫಾಸ್ಟ್ ಫಿಫಾ ವಿಶ್ವಕಪ್ ಗೆ ಇಂದು ತೆರೆ :  ಅರ್ಜೆಂಟೀನಾ ಫ್ರಾನ್ಸ್ ನಡುವೆ ಚಾಂಪಿಯನ್ ಪಟ್ಟಕ್ಕೆ ಕದನ

rudy-kurtzen-cricket-umpire-dies-in-car-crash

Rudy kurtzen : ಖ್ಯಾತ ಕ್ರಿಕೆಟ್ ಅಂಪೈರ್ ನಿಧನ : ಕಂಬನಿ ಮಿಡಿದ ಕ್ರೀಡಾ ಲೋಕ

Wardrobe malfunction : ವಸ್ತ್ರ ದೋಷದಿಂದ ಗುಪ್ತಾಂಗ ಹೊರ ಬಿದ್ದು ಸೋತ ಅಥ್ಲೀಟ್

vivo Pro Kabaddi 2022 : ಪ್ರೊ ಕಬಡ್ಡಿ ಆಟಗಾರರ ಹರಾಜಿಗೆ ವೇದಿಕೆ ಸಜ್ಜು

kho kho league : ಐಪಿಎಲ್ ಮಾದರಿಯಲ್ಲೇ ಖೋ ಖೋ ಲೀಗ್ : ದೇಶಿ ಕ್ರೀಡೆಗೆ ಹೈಟೆಕ್ ಸ್ಪರ್ಶ

kl rahul marriage ಅಕ್ಟೋಬರ್ ತಿಂಗಳಲ್ಲಿ ಕೆ.ಎಲ್. ರಾಹುಲ್ – ಆಥಿಯಾ ವಿವಾಹ

Rohit sharma : ರೋಹಿತ್ ಶರ್ಮಾ ಭರ್ಜರಿ ಸಿಕ್ಸರ್ : ಚೆಂಡು ತಗುಲಿ ಗಾಯಗೊಂಡ ಬಾಲಕಿ

45 ಸಾವಿರ ಕೋಟಿಯ ಮೇಲೆ ಕಣ್ಣು : ಐಪಿಎಲ್ ಪ್ರಸಾರ ಹಕ್ಕು ( IPL media rights auction ) ಇಂದು ಹರಾಜು

ಡ್ರಗ್ಸ್ ಕೇಸ್ ಬಳಿಕ ಮಗನಿಗೆ ಮಹತ್ತರ ಜವಾಬ್ದಾರಿ ಕೊಟ್ಟ ಶಾರುಖ್ ಖಾನ್

IPL ಪ್ರಸಾರ ಹಕ್ಕು ಪಡೆಯಲು ಮುಗಿಬಿದ್ದ sports channel ಗಳು : 45 ಸಾವಿರ ಕೋಟಿ ನಿರೀಕ್ಷೆಯಲ್ಲಿ BCCI

Latest News

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್