ದುಬೈನಲ್ಲಿ ನಡೆಯುತ್ತಿರುವ T20 ವಿಶ್ವಕಪ್ ನ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಪಾಕಿಸ್ತಾನ ಸುಲಭವಾಗಿ ಭಾರತವನ್ನು ಸೋಲಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ ಪಾಕಿಸ್ತಾನಕ್ಕೆ ದೊಡ್ಡ ಮೊತ್ತದ ಗುರಿಯನ್ನು ಕೊಡುವಲ್ಲಿ ವಿಫಲವಾಯ್ತು. ಹೀಗಾಗಿ 151 ರನ್ ಗಳ ಬೆನ್ನು ಹತ್ತಿದ ಪಾಕಿಸ್ತಾನ ಭಾರತದ ಬೌಲರ್ ಗಳನ್ನು ಮನಸ್ಸೋ ಇಚ್ಛೆ ದಂಡಿಸಿದೆ.
152 ರನ್ಗಳ ಗುರಿ ಬೆನ್ನು ಹತ್ತಿದ ಪಾಕಿಸ್ತಾನ ಆರಂಭದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿತು. ಓಪನರ್ ಗಳಾಗಿ ಬಂದ ಬಾಬರ್ ಮತ್ತು ರಿಜ್ವಾನ್ ಜೋಡಿ 7.5 ಓವರ್ಗಳಲ್ಲಿ 46 ಬಾಲ್ಗಳನ್ನು ಎದುರಿಸಿ 50 ರನ್ ಕಲೆಹಾಕುವ ಮೂಲಕ ಗೆಲ್ಲುವ ಭರವಸೆ ಮೂಡಿಸಿದರು,
ಇಂದು ಕೆಎಲ್ ರಾಹುಲ್ ಬಗ್ಗೆ ಸಾಕಷ್ಟು ನಿರೀಕ್ಷೆಗಳಿತ್ತು. ಆದರೆ ರಾಹುಲ್ ಕೋಟಿ ಕೋಟಿ ಭಾರತೀಯರ ನಿರೀಕ್ಷೆಯನ್ನು ಸುಳ್ಳಾಗಿಸಿ ಭಾರತಕ್ಕೆ ಸೋಲಿನ ರುಚಿ ಕೊಟ್ಟಿದ್ದಾರೆ. ಬೇರಾವುದೇ ದೇಶದ ಜೊತೆಗಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋತರೂ ಪರವಾಗಿರಲಿಲ್ಲ, ಪಾಕಿಸ್ತಾನ ಜೊತೆಗೆ ಸೋತ್ರಲ್ಲ ಅನ್ನುವುದು ಬೇಸರ
Discussion about this post