ಭಾನುವಾರ ಸ್ಪೀಕರ್ ಚುನಾವಣೆ ಗೆದ್ದ ಏಕನಾಥ ಶಿಂಧೆ ( Eknath shinde) ಇಂದು ನಡೆಯಲಿರುವ ವಿಶ್ವಾಸ ಮತ ಪರೀಕ್ಷೆ ( trust vote ) ಯಲ್ಲಿ ಯಶಸ್ವಿಯಾಗಲಿದ್ದಾರೆ
ಮುಂಬೈ : ಮಹಾರಾಷ್ಟ್ರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಏಕನಾಥ ಶಿಂಧೆ ( Eknath shinde trust vote ) ಇಂದು ವಿಶ್ವಾಸ ಮತ ಸಾಬೀತು ಪಡಿಸಲಿದ್ದಾರೆ. ಪ್ರಸ್ತುತ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಸಾರಿ ಬಿಜೆಪಿ ಜೊತೆ ಮೈತ್ರಿ ಸರ್ಕಾರ ರಚಿಸಿರುವ ಏಕನಾಥ ಶಿಂಧೆ ( Eknath shinde ) ಪ್ರಸ್ತುತ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾರೆ.
ಈಗಾಗಲೇ ವಿಧಾನಸಭಾ ಸಚಿವಾಲಯ ಶಿವಸೇನೆ ಶಾಸಕಾಂಗ ನಾಯಕನ ಸ್ಥಾನವನ್ನು ಏಕನಾಥ ಶಿಂಧೆಗೆ ಮತ್ತು ಶಾಸಕ ಭರತ್ ಗೊಂಗಾವಲೆಗೆ ಮುಖ್ಯ ಸಚೇತಕನ ಹುದ್ದೆಗೆ ಮಾನ್ಯತೆ ನೀಡಿದೆ. ಇದು ಉದ್ಧವೇ ಠಾಕ್ರೆಯ ಜೊತೆಗಿನ ಹೊಸ ಕಿತ್ತಾಟಕ್ಕೆ ಕಾರಣವಾಗಲಿದೆ.
Also Read : Miss India 2022 Sini Shetty : ಕರ್ನಾಟಕ ಮೂಲದ ಸಿನಿ ಶೆಟ್ಟಿಗೆ ಮಿಸ್ ಇಂಡಿಯಾ 2022 ಕಿರೀಟ
ಪ್ರಸ್ತುತ ಪರಿಸ್ಥಿತಿಯಲ್ಲಿ ಏಕನಾಥ ಶಿಂಧೆ ಸೇಫ್ ಆಗಿದ್ದಾರೆ. ಉದ್ಧವ್ ಠಾಕ್ರೆ ಪರಿಸ್ಥಿತಿ ಹೇಗಿದೆ ಅಂದ್ರೆ ಶಿವೇನೆಯ 39 ಬಂಡಾಯ ಶಾಸಕರನ್ನು ಅನರ್ಹಗೊಳಿಸಿದರೂ ಶಿಂಧೆ ಮ್ಯಾಜಿಕ್ ಸಂಖ್ಯೆ ಗಡಿ ದಾಟಲಿದ್ದಾರೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಈಗ 1 ಸ್ಥಾನ ಖಾಲಿ ಇದೆ. ಹೀಗಾಗಿ ಬಹುಮತಕ್ಕೆ 144 ಸ್ಥಾನಗಳು ಬೇಕು. ಶಿಂಧೆ ಪರ 164 ಮತಗಳಿವೆ. ಈ ಪೈಕಿ 39 ಮತಗಳು ತಪ್ಪಿದರೆ, ಸಂಖ್ಯಾ ಬಲ 125ಕ್ಕೆ ಕುಸಿಯುತ್ತದೆ. ಆಗ ಸದನದ ಬಲ 248ಕ್ಕೆ ಬರುತ್ತದೆ. ಆ ವೇಳೆ ಬಹುಮತಕ್ಕೆ 125 ಮತಗಳು ಸಾಕಾಗುವುದರಿಂದ ಏಕನಾಥ ಶಿಂಧೆ ( Eknath shinde ) ಸರ್ಕಾರ ಸೇಫ್ ಆಗಿರುತ್ತದೆ.
Also Read : Assamese actor Kishor Das : ಕ್ಯಾನ್ಸರ್ ರೋಗಕ್ಕೆ ಬಲಿಯಾದ ಅಸ್ಸಾಂ ನ ಖ್ಯಾತ ನಟ
ಈ ನಡುವೆ ಶಿಂಧೆ ಬಣದ 16 ಶಾಸಕರನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿ ಉದ್ಧವ್ ಠಾಕ್ರೆಯ ಶೀವಸೇನೆ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದೆ. ಆದರೆ ಅಲ್ಲಿ ಅರ್ಜಿ ವಿಚಾರಣೆ ಇನ್ನೂ ನಡೆದಿಲ್ಲ. ಒಂದು ವೇಳೆ 16 ಶಾಸಕರೂ ಅನರ್ಹಗೊಂಡರೆ ಸದನದ ಸಂಖ್ಯಾ ಬಲ 148ಕ್ಕೆ ಕುಸಿಯುತ್ತದೆ. ಆಗ ಸದನದ ಬಲ 271ಕ್ಕೆ ಬಂದು ನಿಲ್ಲುತ್ತದೆ. ಆಗ ಬಹುಮತಕ್ಕೆ 136 ಮತಗಳು ಸಾಕಾಗುತ್ತದೆ.
Miss India 2022 Sini Shetty : ಕರ್ನಾಟಕ ಮೂಲದ ಸಿನಿ ಶೆಟ್ಟಿಗೆ ಮಿಸ್ ಇಂಡಿಯಾ 2022 ಕಿರೀಟ
ದಕ್ಷಿಣ ಕನ್ನಡ ಮೂಲದ ಸಿನಿ ಶೆಟ್ಟಿ ಹುಟ್ಟಿ ಬೆಳೆದಿದ್ದು ಮುಂಬೈ ನಲ್ಲಿ, ಇದೀಗ ಮಿಸ್ ಇಂಡಿಯಾ ಕಿರೀಟ ಧರಿಸುವ ಮೂಲಕ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಮುಂಬೈ : ಕರ್ನಾಟಕ ಮೂಲಕ ಸಿನಿ ಶೆಟ್ಟಿ ( Sini Shetty ) ಮಿಸಿ ಇಂಡಿಯಾ ( Miss India 2022 ) ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ಮುಂಬೈನಲ್ಲಿ ಮುಕ್ತಾಯಗೊಂಡ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ ವಿಜೇತರಾಗಿದ್ದಾರೆ. ರಾಜಸ್ಥಾನದ ರುಬುಲ್ ಶೆಖಾವತ್ ( Rubal Shekhawat from Rajasthan ) ಮತ್ತು ಉತ್ತರ ಪ್ರದೇಶದ ಶಿನಾತಾ ಚೌಹಾಣ್ ( Shinata Chauhan from Uttar Pradesh ) ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡರು.
ದಕ್ಷಿಣ ಕನ್ನಡ ಮೂಲದ 21 ವರ್ಷದ ಸಿನಿ ಶೆಟ್ಟಿ ಮುಂಬೈನಲ್ಲೇ ಹುಟ್ಟಿ ಬೆಳೆದವರು. ತಮ್ಮ ವ್ಯಾಸಂಗವನ್ನು ಕೂಡಾ ಅಲ್ಲೇ ಮುಗಿಸಿದ್ದಾರೆ. ಭರತ ನಾಟ್ಯ ಕಲಾವಿದೆಯಾಗಿರುವ ಸಿನಿ ಶೆಟ್ಟಿ ಹಲವು ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಕಾಣಿಸಿಕೊಂಡಿದ್ದರು. ಇದೀಗ Miss India 2022 ಕಿರೀಟ ಮುಡಿಗೇರಿಸಿಕೊಂಡಿರುವ Sini Shetty ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Discussion about this post