ನಿಮಗಾಗಿ ಕಾದು ಕುಳಿತ್ತಿದ್ದೇವೆ ಎಂದು ಅಸ್ಸಾಂ ಜನ ಕಿಶೋರ್ ದಾಸ್ ರನ್ನು ( Assamese actor Kishor Das) ಎದುರು ನೋಡುತ್ತಿದ್ದರು. ಆದರೆ ವಿಧಿಯಾಟವೇ ಬೇರೆ
ಚೈನೈ : ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ರೋಗದೊಂದಿಗೆ ಹೋರಾಡುತ್ತಿದ್ದ ಅಸ್ಸಾಂ ನಟ ಕಿಶೋರ್ ದಾಸ್ ( Assamese actor Kishor Das) ಶನಿವಾರ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ. 30 ವರ್ಷದ Assamese actor Kishor Das ಚೆನೈ ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಮಾರ್ಚ್ ತಿಂಗಳಲ್ಲಿ ಇದೇ ಆಸ್ಪತ್ರೆಗೆ ಅವರು ದಾಖಲಾಗಿದ್ದರು ಅನ್ನಲಾಗಿದೆ,
ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು ಅನ್ನಲಾಗಿದೆ. ಇನ್ನು ಕೊರೋನಾ Protocols ಕಾರಣದಿಂದ ಚೆನೈ ನಲ್ಲೇ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಇದಕ್ಕೂ ಮುನ್ನ ಅವರ ಮೃತ ದೇಹವನ್ನು ಅಸ್ಸಾಂಗೆ ತರುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಲಾಗಿತ್ತು. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ತಮಿಳುನಾಡು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಕೊರೋನಾ ನಿಯಮಗಳ ಕಾರಣದಿಂದ ಅದು ಸಾಧ್ಯವಾಗಲಿಲ್ಲ.
ಇದನ್ನು ಓದಿ : ಬಕ್ರೀದ್ ಹಬ್ಬಕ್ಕೆ ರಾಜಸ್ಥಾನದಿಂದ ಬೆಂಗಳೂರಿಗೆ ತಂದಿದ್ದ 18 ಒಂಟೆಗಳ ರಕ್ಷಣೆ
ಕಿಶೋರ್ ಅಸ್ಸಾಂ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವ ನಿರೀಕ್ಷೆಗಳಿತ್ತು. ಜೊತೆಗೆ ಕಿರುತೆರೆಗಳಲ್ಲೂ ಸಾಕಷ್ಟು ಸಾಧನೆ ಮಾಡಿದ ಹಿರಿಮೆ ಇವರದ್ದು.
ಇದನ್ನು ಓದಿ : ಸೋಮವಾರ ಮತ್ತೆ ಮಂಗಳೂರು ಮುಳುಗಲಿದೆಯೇ…. ಅಲರ್ಟ್ ಕೊಟ್ಟ ಹವಮಾನ ಇಲಾಖೆ
ದುಡ್ಡಿನಾಸೆಗೆ ಬಿದ್ದು ಮನೆ ಮಾಲೀಕನ ಮಗನನ್ನೇ ಕಿಡ್ನಾಪ್ ಮಾಡಿದ ಕಿರಾತಕ ದಂಪತಿ ಅಂದರ್
ಬೆಂಗಳೂರು : ಏಕಾಏಕಿ ಶ್ರೀಮಂತರಾಗುವ ಆಸೆಗೆ ಬಿದ್ದ ದಂಪತಿ ಮನೆ ಮಾಲೀಕನ ಮಗನನ್ನೇ ಅಪಹರಿಸಿ ( kidnap ) ಕಾಸಿಗೆ ಬೇಡಿಕೆ ಇಟ್ಟು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಬಂಧಿತರನ್ನು ಶಕ್ತಿವೇಲು ಮತ್ತು ಸುನೀತಾ ಎಂದು ಗುರುತಿಸಲಾಗಿದೆ.
ಬೆಂಗಳೂರು ಪೂರ್ವ ತಾಲೂಕಿನ ಕಿತ್ತಗನೂರಿನ ಹ್ಯಾಪಿ ಲೇ ಜೌಟ್ ( Happy Lay out ) ನಲ್ಲಿ ಈ ಘಟನೆ ನಡೆದಿದ್ದು, ಕೆ ಆರ್ ಪುರಂ ( KR Puram ) ನಿವಾಸಿಗಳಾದ ಶಕ್ತಿವೇಲು ಮತ್ತು ಸುನೀತಾ ಮನೋಜ್ ಕುಮಾರ್ ( Manoj Kumar ) ಅನ್ನುವವರ ಮನೆಯಲ್ಲಿ ಕೆಲಸಕ್ಕಿದ್ದರು. ಈ ವೇಳೆ ದಿಢೀರ್ ಶ್ರೀಮಂತರಾಗುವ ಆಸೆಗೆ ಬಿದ್ದ ದಂಪತಿ, ಮನೆ ಮಾಲೀಕನ ಬಳಿಯೇ ಕಾಸು ವಸೂಲಿಗೆ ಮುಂದಾಗಿದ್ದಾರೆ.
ಮನೋಜ್ ಅವರ 6 ವರ್ಷದ ಮಗ ಶಾಲೆಯಿಂದ ಬರುವ ವ್ಯಾನ್ ಅಡ್ಡ ಹಾಕಿ Kidnap ಮಾಜಲು ಮುಂದಾಗಿದ್ದಾರೆ. ಈ ವೇಳೆ ವ್ಯಾನ್ ಚಾಲಕ ಬಾಲಕನನ್ನು ಕಳುಹಿಸಿಕೊಡಲು ನಿರಾಕರಿಸಿದ್ದಾನೆ. ಪೋಷಕರನ್ನು ತೋರಿಸಿದ್ರೆ ಮಾತ್ರ ಬಾಲಕನನ್ನು ಕಳುಹಿಸಿಕೊಡುವುದಾಗಿ ಹೇಳಿದ ಚಾಲಕನಿಗೆ ಹಲ್ಲೆ ನಡೆಸಿದ್ದಾರೆ. ಆದರೆ ಚಾಲಕ ಅದಕ್ಕೆ ಬಗ್ಗಲಿಲ್ಲ. ಹೀಗಾಗಿ ಕೆಲಸ ಕೆಟ್ಟಿತ್ತು ಎಂದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಆ ಮೇಲಾದ್ರು ಸುಮ್ಮನಾದ್ರ, ಇಲ್ಲ ಬದಲಿಗೆ ಮನೆ ಮಾಲೀಕನಿಗೆ ಕರೆ ಮಾಡಿ ನಿಮ್ಮ ಮಗನನ್ನು ಅಪಹರಿಸಿದ್ದೇವೆ 5 ಲಕ್ಷ ಕೊಡಿ, ತಪ್ಪಿದ್ರೆ ಮಗನನ್ನು ಕೊಲೆ ಮಾಡುತ್ತೇವೆ ಅಂದಿದ್ದಾರೆ.
ಇದರ ಬೆನ್ನಲ್ಲೇ ಮನೋಜ್ ಕುಮಾರ್ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯಾಚರಣೆ ಪ್ರಾರಂಭಿಸಿದ ಪೊಲೀಸರು, ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
Discussion about this post