ಟಗರುನಂತಹ ಮೆಗಾ ಹಿಟ್ ಸಿನಿಮಾ ಕೊಟ್ಟ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಸಂಗೀತ ನಿರ್ದೇಶಕ ಚರಣ್ ರಾಜ್ ಜೊತೆಗೆ ದುನಿಯಾ ವಿಜಯ್ ಮತ್ತು ಟಗರು ಚಿತ್ರದಿಂದ ಸ್ಟಾರ್ ಪಟ್ಟಕ್ಕೇರಿದ ಡಾಲಿ ಧನಂಜಯ ಜೊತೆಯಾಗಿರುವ ಸಿನಿಮಾ ‘ಸಲಗ’. ಇಲ್ಲಿ ವಿಜಿ ರಗಡ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಡಾಲಿ ಇದೇ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಎ2 ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಸಲಗ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು, ಸಿನಿ ಪ್ರಿಯರ ಎದೆ ಬಡಿತವನ್ನು ಮತ್ತಷ್ಟು ಹೆಚ್ಚಿಸಿದೆ. ವಿಡಿಯೋ ನೋಡಿದ ಮಂದಿ ‘ಸಲಗ’ ಸಿನಿಮಾ ಹೇಗಿರಬಹುದು ಎಂದು ಕಾತರದಿಂದ ಕಾಯುತ್ತಿದ್ದಾರೆ. ಮೇಕಿಂಗ್ ವಿಡಿಯೋದಲ್ಲಿ ಸಿನಿಮಾದ ಫ್ಲೇವರ್ ಗೊತ್ತಾಗಿದೆ ಆದರೆ ರುಚಿ ಸವಿಯಲು ಇನ್ನಷ್ಟು ದಿನ ಕಾಯಬೇಕಾಗಿದೆ.
ಈ ನಡುವೆ ದುನಿಯಾ ವಿಜಿ ಹಾಗೂ ಡಾಲಿ ಧನಂಜಯ್ ಅಭಿಮಾನಿಗಳಿಗಾಗಿ ಸ್ಪೆಷಲ್ ಗಿಫ್ಟ್ ಜನವರಿ 6ರಂದು ಸಿಗಲಿದೆ. ಚಿತ್ರದ ಮೊದಲ ಹಾಡು ‘ಸೂರಿ ಅಣ್ಣ’ ಬಿಡುಗಡೆಯಾಗಲಿದೆ. ಈಗಾಗಲೇ ಮೇಕಿಂಗ್ ವಿಡಿಯೋ ನೋಡಿ ಥ್ರಿಲ್ ಆಗಿರುವ ಮಂದಿ ಹಾಡಿಗಾಗಿ ಕಾಯುತ್ತಿದ್ದಾರೆ.
ಅಂದ ಹಾಗೇ ಈ ಹಾಡು ಕೂಡಾ ಎ2 ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಆಗಲಿದೆ.
ಇನ್ನು ಚಿತ್ರದ ಆಡಿಯೋ ರಿಲೀಸ್ ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆಸ್ಟ್ ಆಗಿ ಆಗಮಿಸಲಿದ್ದಾರಂತೆ. ಹೇಳಿ ಕೇಳಿ ಸಲಗ ಬಹುತೇಕ ಟಗರು ತಂಡದಿಂದ ನಿರ್ಮಾಣವಾಗುತ್ತಿರುವ ಸಿನಿಮಾ. ಶಿವಣ್ಣ ಆಡಿಯೋ ಲಾಂಚ್ ನಲ್ಲಿ ಭಾಗಿಯಾಗುವ ಮೂಲಕ ಮತ್ತೊಮ್ಮೆ ಟಗರು ಟೀಂ ಸಮಾಗಮವಾಗಲಿದೆ.
Discussion about this post