ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿ ಫೈನಲ್ ವೇದಿಕೆಯತ್ತ ಮುನ್ನುಗುತ್ತಿರುವ ಕೆಲವು ಸ್ಪರ್ಧಿಗಳ ಪೈಕಿ ವೈಷ್ಣವಿ ಕೂಡಾ ಒಬ್ಬರು. ಮನೆಯಲ್ಲಿ ಕಿರಿಕ್ ಗಳಿಲ್ಲ, ಅಬ್ಬರವಿಲ್ಲ, ಟಾಸ್ಕ್ ಗಳನ್ನು ಶಿಸ್ತಿನಿಂದ ಮುಗಿಸುತ್ತಿರುವ ಸ್ಪರ್ಧಿ ಅಂದ್ರೆ ಅದು ವೈಷ್ಣವಿ.
ಇನ್ನು ಮನೆಯೊಳಗೆ ಯೋಗ ಧ್ಯಾನ, ಪ್ರಾಣಾಯಾಮ ಎಂದು ದಿನಚರಿ ಪ್ರಾರಂಭಿಸುವ ವೈಷ್ಣವಿ, ಬಿಗ್ ಬಾಸ್ ಹಾಡು ಹಾಕೋ ಮುನ್ನವೇ ಎದ್ದಿರುತ್ತಾರೆ.
ಅಗ್ನಿಸಾಕ್ಷಿಯ ಸನ್ನಿಧಿ ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಹೇಗಿದ್ದರೋ, ಮನೆಯೊಳಗೂ ಹಾಗೇ ಇದ್ದಾರೆ. ಮುಖವಾಡಗಳು ಇಲ್ಲದ ಕಾರಣದಿಂದ ವೈಷ್ಣವಿ ವೀಕ್ಷಕರ ಮನ ಗೆದ್ದಿದ್ದಾರೆ. ಹೀಗಾಗಿ ನಾಮಿನೇಷನ್ ಅನ್ನುವ ಭಯವೇ ಅವರಿಗೆ ಇಲ್ಲದಂತಾಗಿದೆ.
ಇದೀಗ ವೈಷ್ಣವಿಯವರ ಧ್ಯಾನದ ಕಳ್ಳಾಟವೊಂದು ಬಿಗ್ ಬಾಸ್ ಮನೆಯಲ್ಲಿ ಬಯಲಾಗಿದೆ. ಯೋಗ ಧ್ಯಾನದ ಮೂಲಕ ಗಮನ ಸೆಳೆದಿದ್ದ ವೈಷ್ಣವಿ ಇದೀಗ ಧ್ಯಾನದ ನೆಪದಲ್ಲಿ ನಿದ್ದೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇನ್ನು ವೈಷ್ಣವಿಯವರ ಧ್ಯಾನದ ವೈಖರಿಯನ್ನು ಕಂಡ ಪ್ರಿಯಾಂಕ, ಜಗಳ, ಗಲಾಟೆ ಗದ್ದವದ ನಡುವೆ ಧ್ಯಾನ ಮಾಡಲು ಸಾಧ್ಯವೇ ಎಂದು ಮಾಡಲು ಸಾಧ್ಯವೇ ಎಂದು ಶಮಂತ್ ಬಳಿ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಶಮಂತ್. ಅವರಿಗೆ ಏಕ್ರಾಗತೆ ಸಿದ್ದಿಸಿದೆ. ಹೀಗಾಗಿ ಗಲಾಟೆ, ಗದ್ದಲವಿದ್ದರೂ ಧ್ಯಾನ ಮಾಡುತ್ತಾರೆ ಅಂದಿದ್ದಾರೆ. ಆದರೂ ಪ್ರಿಯಾಂಕ ಎತ್ತಿದ ಪ್ರಶ್ನೆಯಿಂದ ತಲೆಗೆ ಹುಳ ಬಿಟ್ಟುಕೊಂಡ ಶಮಂತ್, ವೈಷ್ಣವಿ ಧ್ಯಾನದ ಹೆಸರಿನಲ್ಲಿ ನಿದ್ದೆ ಮಾಡುತ್ತಿದ್ದಾರೆ ಎಂದು ಬಿಗ್ ಬಾಸ್ ಬಳಿ ದೂರು ಸಲ್ಲಿಸಿದ್ದಾರೆ.
ಬಳಿಕ ಇದೇ ವಿಷಯ ಮನೆ ಮಂದಿಗೆಲ್ಲಾ ಗೊತ್ತಾಗುತ್ತದೆ. ಈ ಸಂದರ್ಭದಲ್ಲಿ ಧ್ಯಾನದ ನೆಪದಲ್ಲಿ ನಿದ್ದೆ ಮಾಡ್ತೀರಾ ಎಂದು ಸಹಸ್ಪರ್ಧಿಗಳು ರೇಗಿಸಿದ್ದಾರೆ. ಜೊತೆಗೆ ವೈಷ್ಣವಿ ಕಾಲಿಗೆ ನಮಸ್ಕರಿಸಿ, ನಮಗೂ ಈ ಕಲೆಯನ್ನು ಹೇಳಿಕೊಟ್ಟಿದ್ರೆ ನಾವು ಅದನ್ನೇ ಮಾಡುತ್ತಿದ್ವಿ ಎಂದು ರಾಜೀವ್ ಕೋರಿಕೊಂಡಿದ್ದಾರೆ.
ಇದೇ ವಿಷಯಕ್ಕೆ ಮಧ್ಯ ಪ್ರವೇಶಿಸಿದ ಮಂಜು, ರಾತ್ರಿ ಸಖತ್ ನಿದ್ದೆ ಮಾಡೋ ಈ ಯಮ್ಮ, ಬೆಳಗ್ಗೆ ಎದ್ದು ಯೋಗದ ಹೆಸರಿನಲ್ಲಿ ಮತ್ತೆ ನಿದ್ದೆ ಮಾಡುತ್ತಿದ್ದಾಳೆ ಎಂದು ಹಾಸ್ಯವಾಗಿಯೇ ಟೀಕಿಸಿದ್ದಾರೆ.
Discussion about this post