ಆಷಾಢ ಅಮಾವಾಸ್ಯೆ ಹಿಂದೂಗಳ ಪಾಲಿನ ಮಹತ್ವದ ದಿನ. ಜ್ಯೇಷ್ಠ ಮಾಸದ ಕೊನೆಯ ಅಮಾವಾಸ್ಯೆ ಬಹಳಷ್ಟು ಮಹತ್ವದಿಂದ ಕೂಡಿದೆ
ಸನಾತನ ಧರ್ಮದಲ್ಲಿ ಪ್ರತಿ ತಿಂಗಳು ಬರೋ ಅಮಾವಾಸ್ಯೆಗೆ ವಿಶೇಷವಾದ ಮಹತ್ವವಿದೆ. ಈ ದಿನ ಮಾಡಿದ ಪುಣ್ಯ ಕಾರ್ಯಗಳಿಗೆ ಉತ್ತಮ ಫಲವೂ ಸಿಗುತ್ತದೆ ಅನ್ನುವುದನ್ನು ಹೇಳಲಾಗಿದೆ. ಹೀಗಾಗಿಯೇ ಈ ದಿನ ಪೂರ್ವಜರಿಗೆ ಪೂಜೆ ಸಲ್ಲಿಸುವುದರಿಂದ ಪೂರ್ವಜರಿಗೆ ಸಂತೃಪ್ತಿ ದೊರೆಯುತ್ತದೆ ಹಾಗೂ ಅವರ ಆಶೀರ್ವಾದ ನಮಗೆ ಸಿಗುತ್ತದೆ ಎಂದು ನಂಬಲಾಗಿದೆ.
ಇನ್ನು ಪ್ರತೀ ತಿಂಗಳ ಅಮಾವಾಸ್ಯೆಗೆ ಒಂದೊಂದು ವಿಶೇಷವಿರುತ್ತದೆ. ಅದರಲ್ಲೂ ಜ್ಯೇಷ್ಠ ಮಾಸದಲ್ಲಿ ಬರೋ ಕೊನೆಯ ಅಮವಾಸ್ಯೆಗೆ ( Ashadha Amavasya 2022 )ವಿಶೇಷ ಮಹತ್ವವಿದೆ. ಈ ದಿನದಿಂದಲೇ ಮಳೆಗಾಲ ಆರಂಭವಾಗುತ್ತದೆ ಅನ್ನುವ ನಂಬಿಕೆ ಇರುವುದರಿಂದ, ಈ ದಿನ ಕೆಲ ಭಾಗಗಳಲ್ಲಿ ರೈತರು ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸುತ್ತಾರೆ.
ಈ ಬಾರಿಯ ಅಮಾವಾಸ್ಯೆ ದಿನಾಂಕ ಜೂನ್ 28 ರಂದು ಬೆಳಿಗ್ಗೆ 05:53ಕ್ಕೆ ಪ್ರಾರಂಭವಾಗಲಿದ್ದು, ಜೂನ್ 29ರ ಬೆಳಗ್ಗೆ 08:23 ರ ತನಕ ಇರುತ್ತದೆ. ಹೀಗಾಗಿ ಅಮಾವಾಸ್ಯೆಯನ್ನು ಜೂನ್ 28 ರಂದು ಆಚರಿಸಬೇಕು ಎಂದು ಧಾರ್ಮಿಕ ವಿದ್ವಾಂಸರು ಹೇಳಿದ್ದಾರೆ. ಆದರೆ ಪಂಚಾಂಗದ ನಡುವಿನ ಭಿನ್ನಾಭಿಪ್ರಾಯದ ಕಾರಣದಿಂದ ಒಂದಿಷ್ಟು ಗೊಂದಲಗಳಿದೆ,.
ಹಲಹರಿ ಅಮಾವಾಸ್ಯೆಯು ಜ್ಯೇಷ್ಠ ಮಾಸದ ಕೊನೆಯ ಅಮಾವಾಸ್ಯೆಯಾಗಿದ್ದು, ಈ ಅಮಾವಾಸ್ಯೆ ನಂತರ ನಂತರ ಆಷಾಢ ಮಾಸದ ಆಗಮನವಾಗುತ್ತದೆ.
ಈ ಬಾರಿ ಎರರೆಡರಡು ದಿನ ಅಮಾವಾಸ್ಯೆ ( Ashadha Amavasya 2022) ಕಾಣಿಸಿಕೊಂಡಿರುವುದರಿಂದ ಯಾವಾಗ ಅಮಾವಾಸ್ಯೆ ಆಚರಿಸಬೇಕು ಅನ್ನುವ ಗೊಂದಲವಿದೆ. ಇದಕ್ಕೆ ಧಾರ್ಮಿಕ ವಿದ್ವಾಂಸತರು ಪರಿಹಾರವನ್ನು ಕೂಡಾ ಕೊಟ್ಟಿದ್ದು, ಜೂನ್ 28 ರಂದು ಬೆಳಗ್ಗೆಯೇ ಅಮಾವಾಸ್ಯೆ ಪ್ರಾರಂಭವಾಗುವುದರಿಂದ ಅಂದೇ ಸುದೀರ್ಘ ಅಮಾವಾಸ್ಯೆ ಇರುತ್ತದೆ. ಹೀಗಾಗಿ ಅಂದೇ ಅಮಾವಾಸ್ಯೆ ಉಪವಾಸವನ್ನು ಆಚರಿಸಬೇಕು. ಜೂನ್ 29 ರಂದು ದಾನದ ಅಮಾವಾಸ್ಯೆ ಇರುತ್ತದೆ. ಜೂನ್ 29 ರಂದು ಸ್ನಾನ, ದಾನ, ಶ್ರಾದ್ಧದ ಅಮಾವಾಸ್ಯೆಯನ್ನು ಆಚರಿಸುವಂತೆ ಸೂಚಿಸಲಾಗಿದೆ.
Discussion about this post