ಬೆಂಗಳೂರು : ಡ್ರಗ್ಸ್ ಕೇಸ್ ನಲ್ಲಿ ಸಿಲುಕಿ ಒಂದು ತಿಂಗಳ ಕಾಲ ಜೈಲು ವಾಸ ಅನುಭವಿಸಿ ಬಂದಿದ್ದ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಶಾರೂಖ್ ಖಾನ್ ಮಕ್ಕಳಾದ ಆರ್ಯನ್ ಖಾನ್ ಹಾಗೂ ಸುಹಾನ ಖಾನ್ ಬೆಂಗಳೂರಿನಲ್ಲಿ ನಡೆಯುತ್ತಿರುವ IPL ಆಕ್ಷನ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಕಳೆದ ಬಾರಿಯ ಐಪಿಎಲ್ ಪಂದ್ಯದ ವೇಳೆ ಪುತ್ರ ಜೈಲಿನಲ್ಲಿದ್ದ ಕಾರಣ, ಶಾರೂಖ್ ಐಪಿಎಲ್ ಪಂದ್ಯದಲ್ಲಿ ಸಕ್ರಿಯವಾಗಿರಲಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ಫಿನಾಲೆಗೆ ಬಂದರೂ ಮಗನಿಗೆ ಜಾಮೀನು ಕೊಡಿಸಲು ಓಡಾಡುತ್ತಿದ್ದ ಕಾರಣ ಫಿನಾಲೆ ನೋಡಲು ಸಾಧ್ಯವಾಗಿರಲಿಲ್ಲ.
A crash course in #IPLAuction strategies from the CEO to our Gen-Next ⏭@VenkyMysore #AryanKhan #SuhanaKhan #JahnaviMehta #GalaxyOfKnights pic.twitter.com/WqWNuzhpJt
— KolkataKnightRiders (@KKRiders) February 12, 2022
ಈ ಎಲ್ಲಾ ಬೆಳವಣಿಗೆ ಬಳಿಕ ಕೋಲ್ಕತ್ತಾ ತಂಡದ ಪ್ರತಿನಿಧಿಯಾಗಿ ಶಾರೂಖ್ ಮಕ್ಕಳು ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಳವಣಿಗೆ ನೋಡಿದರೆ ಪುತ್ರನ ಮೇಲೆ ತಂದೆ ದೊಡ್ಡ ಜವಾಬ್ದಾರಿ ಹೊರಿಸಿದ್ದಂತೆ ಕಾಣಿಸುತ್ತಿದೆ.
Discussion about this post