ಪುತ್ತೂರು : ವಿಶ್ವದೆಲ್ಲೆಡೆ ಸಂಚಲನ ಮೂಡಿಸಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಒಂದು ವರ್ಗ ಚಿತ್ರದ ವಿರುದ್ಧ ತಿರುಗಿ ಬಿದ್ದಿರುವ ಕಾರಣ ಇದೀಗ ಚಿತ್ರದಲ್ಲಿ ಏನಿದೆ ಅನ್ನುವ ಕುತೂಹಲ ಹೆಚ್ಚಾಗಿದೆ. ಹೀಗಾಗಿಯೇ ಚಿತ್ರವನ್ನು ಒಂದ್ಸಲ ನೋಡಬೇಕು ಅನ್ನುವ ಮಂದಿ ಸಂಖ್ಯೆ ಅಧಿಕವಾಗುತ್ತಿದೆ.
ಮತ್ತೊಂದು ಕಡೆ, ಭಯೋತ್ಪಾದಕರು ಮಾಡಿದ ಕೃತ್ಯವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಹಾಗಿದ್ದ ಮೇಲೆ ಕೆಲ ಮಂದಿ ಚಿತ್ರವನ್ನು ವಿರೋಧಿಸುತ್ತಿರುವುದ್ಯಾಕೆ ಅನ್ನುವ ಕುತೂಹಲವೂ ಅಧಿಕ ಜನರಲ್ಲಿದೆ. ಈ ನಡುವೆ ಮೆಟ್ರೋ ನಗರಗಳಲ್ಲಿ ಬಿಡುಗಡೆ ಚಿತ್ರ ಇದೀಗ ರಡನೇ ಹಂತದ ಮೆಟ್ರೋ ಸಿಟಿಗಳಲ್ಲಿ ಬಿಡುಗಡೆಯಾಗಲಿದೆ. ಈ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಅರುಣಾ ಥಿಯೇಟರ್ ನಲ್ಲಿ ಚಿತ್ರ ಇಂದು ಬಿಡುಗಡೆಯಾಗಲಿದ್ದು , ನಾಲ್ಕು ದೇಖಾವೆಗಳನ್ನು ನಿಗದಿಗೊಳಿಸಲಾಗಿದೆ. ಮೊದಲ ಪ್ರದರ್ಶನ 10.45ಕ್ಕೆ ಮತ್ತು ಉಳಿದಂತೆ 2 ಗಂಟೆ, 5.45 ಹಾಗೂ ರಾತ್ರಿ 9 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ.
Discussion about this post