Thursday, March 4, 2021

ಇದೊಂದಕ್ಕೆ ರಾಹುಲ್ ಗಾಂಧಿಯನ್ನು ಇಷ್ಟಪಡಲೇಬೇಕು..!ಸಾಧ್ಯವಾದ್ರೆ ಕೈ ನಾಯಕರು ಫಾಲೋ ಮಾಡ್ಲಿ

Must read

- Advertisement -
- Advertisement -

ರಾಹುಲ್ ಗಾಂಧಿ… ಎಐಸಿಸಿ ಅಧ್ಯಕ್ಷರು..ದೇಶದ ಪ್ರಧಾನಿಯಾಗಬೇಕು ಎಂದು ಕನಸು ಕಾಣುತ್ತಿರುವ ವ್ಯಕ್ತಿ. ಇತ್ತೀಚೆಗೆ ಎಡವಟ್ಟುಗಳಿಂದ ಸದಾ ಸುದ್ದಿಯಲ್ಲಿರುವ ರಾಜಕಾರಣಿ.ಅದರಲ್ಲೂ ವಿದೇಶದಲ್ಲಿ ಆಡಿದ ಮಾತುಗಳು ಕಾಲಿಗೆ ಬಳ್ಳಿಯಂತೆ ಸುತ್ತಿಕೊಂಡಿದೆ.

ಆದರೆ ಎರಡು ದಿನಗಳ ಹಿಂದೆ ಕೇರಳಕ್ಕೆ ತೆರಳಿದ್ದ ರಾಹುಲ್ ಗಾಂಧಿ ನೆರೆ ಸಂತ್ರಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿ ಹಿಂದಿರುಗಿದ್ದಾರೆ. ವಾಪಾಸ್ ದೆಹಲಿಗೆ ಬರುವ ಸಲುವಾಗಿ ಆಲಪ್ಪುರದ ಚೆಂಗನೂರು ಕ್ರಿಶ್ಚಿಯನ್ ಕಾಲೇಜಿನ ಹೆಲಿಪ್ಯಾಡ್ ಗೆ ಆಗಮಿಸಿದ್ದಾರೆ

ಈ ವೇಳೆ ತಮ್ಮ ಹೆಲಿಕಾಫ್ಟರ್ ಪಕ್ಕದಲ್ಲೇ ಮತ್ತೊಂದು ಹೆಲಿಕಾಫ್ಟರ್ ನಿಂತಿರುವುದನ್ನು ಗಮನಿಸಿ,SPG ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಆಗ ಗೊತ್ತಾಗಿದ್ದು ಅಲ್ಲಿ ನಿಂತಿರುವುದು Air ambulance ಎಂದು.

ನಿರಾಶ್ರಿತರ ಕೇಂದ್ರದಲ್ಲಿರುವ ವ್ಯಕ್ತಿಯೊಬ್ಬರು ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದು, ಅವರನ್ನು ಅಲಪ್ಪುರ ಮೆಡಿಕಲ್ ಕಾಲೇಜಿಗೆ ಕರೆದೊಯ್ಯಲು ಸಿದ್ದತೆ ನಡೆಯುತ್ತಿದೆ ಎಂದು ಸಿಬ್ಬಂದಿ ರಾಹುಲ್ ಗಾಂಧಿಗೆ ವಿವರಿಸಿದ್ದಾರೆ.

ತಕ್ಷಣ ಎಚ್ಚೆತ್ತುಕೊಂಡ ರಾಹುಲ್ ಗಾಂಧಿ ತಮ್ಮ ಪ್ರಯಾಣವನ್ನು ತಡೆ ಹಿಡಿಯುವಂತೆ SPG ಸಿಬ್ಬಂದಿಗೆ ಸೂಚಿಸಿದ್ದಾರೆ. ಹೀಗಾಗಿ 30 ನಿಮಿಷಗಳ ಕಾಲ ಹೆಲಿಪ್ಯಾಡ್ ನಲ್ಲಿ ಕಾಲ ಕಳೆದ ರಾಹುಲ್ ಗಾಂಧಿ  Air ambulance ಟೇಕಾಫ್ ಆದ ನಂತರ ಪ್ರಯಾಣ ಪ್ರಾರಂಭಿಸಿದ್ದಾರೆ.

Raga

ವಿಐಪಿ ಕಲ್ಚರ್ ನಿಂದ ಮೆರೆಯುತ್ತಿರುವ ರಾಜಕಾರಣಿಗಳನ್ನು ನೋಡಿದರೆ ರಾಹುಲ್ ಗಾಂಧಿ ಕೆಲಸ ನಿಜಕ್ಕೂ ಮೆಚ್ಚುವಂತದ್ದು. ಆದರೆ ರಾಹುಲ್ ಗಾಂಧಿಯನ್ನು ಹೊಗಳಿ ಅಟ್ಟಕ್ಕೆ ಏರಿಸುವ ನಾಯಕರು ಈ ಸಂಪ್ರದಾಯವನ್ನು ಫಾಲೋ ಮಾಡುವ ತಾಕತ್ತು ತೋರಿಸುತ್ತಾರ. ಖಂಡಿತಾ ಇಲ್ಲ.

- Advertisement -
- Advertisement -
- Advertisement -

Latest article