Peruser!!! It is a trendy supermarket: read articles on day to day basis in English & Kannada. Read,Share & Care
ರಾಹುಲ್ ಗಾಂಧಿ ಪೌರತ್ವದ ಕುರಿತಾಗಿ ನಡೆಯುತ್ತಿರುವ ಚರ್ಚೆಗಳ ನಡುವೆಯೇ ವಯನಾಡ್ ನ 72 ವರ್ಷದ ನಿವೃತ್ತ ನರ್ಸ್ ರಾಜಮ್ಮ ವವಾತಿಲ್ ಕಾಂಗ್ರೆಸ್ ಅಧ್ಯಕ್ಷರ ಜನ್ಮ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ನವಜಾತ ಶಿಶುವನ್ನೆತ್ತಿಕೊಂಡವರಲ್ಲಿ ನಾನೇ ಮೊದಲಿಗಳು ಎಂದು ಕೇರಳ ಮೂಲದ ಓರ್ವ ನಿವೃತ್ತ ನರ್ಸ್ ಹೇಳಿದ್ದು, ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ನಾನು ತರಬೇತಿ ನಿರತ ನರ್ಸ್ ಆಗಿದ್ದ ವೇಳೆ ರಾಹುಲ್ ಜನ್ಮ ಆಯ್ತು…
ನಡೆದಾಡುವ ದೇವರು ಇನ್ನಿಲ್ಲ ಅನ್ನುವ ಸುದ್ದಿ ಕೇಳಿ ನಾಡು ಕಣ್ಣೀರಿನಲ್ಲಿ ಮುಳುಗಿದೆ. ಶತಮಾನದ ಸಂತ ಇನ್ನಿಲ್ಲ ಅನ್ನುವ ಸುದ್ದಿಯನ್ನು ನಂಬಲು ಅಸಾಧ್ಯವಾಗುತ್ತಿದೆ. ಈ ನಡುವೆ ಶ್ರೀಗಳಿಗೆ ಗಣ್ಯರು ಅಂತಿಮ ನಮನವನ್ನು ಸಲ್ಲಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದರು. ಆದರೆ ರಾಹುಲ್ ಈ ವೇಳೆ ಬಳಸಿದ ಶಬ್ಧವೊಂದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಟ್ವೀಟ್…
ಪಂಚ ರಾಜ್ಯಗಳ ಫಲಿತಾಂಶದಿಂದ ಶಕ್ತಿ ವೃದ್ಧಿಸಿಕೊಂಡಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಗೆಲುವಿನ ಕನಸು ಕಾಣುತ್ತಿದೆ. ಸಾಲ ಮನ್ನಾ, ಸಾಫ್ಟ್ ಹಿಂದುತ್ವ ಅಜೆಂಡಾದಿಂದ ಮತದಾರರನ್ನು ಮೋಡಿ ಮಾಡಿರುವ ರಾಹುಲ್ 2019ರ ಮಹಾಸಮರದಲ್ಲಿ ಮೋದಿಯನ್ನು ಮಣಿಸುವ ವಿಶ್ವಾಸ ವೃದ್ಧಿಸಿಕೊಂಡಿದ್ದಾರೆ. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ನ ಮೂವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಾಹುಲ್, ಚುನಾವಣೆಗೆ ಮುನ್ನ ರೈತರಿಗೆ ಕೊಟ್ಟ ಭರವಸೆಗಳನ್ನು…
ರಾಜಕೀಯದಲ್ಲಿ ಕ್ಷಣ ಮಾತ್ರದಲ್ಲಿ ಏನು ಬೇಕಾದರೂ ಸಂಭವಿಸಬಹುದು ಅನ್ನುವುದಕ್ಕೆ ಇತಿಹಾಸ ಪುಟಗಳಲ್ಲಿ ರಾಶಿಗಟ್ಟಲೆ ಸಾಕ್ಷಿಗಳಿವೆ. ಇದೀಗ ತೆಲಂಗಾಣದಲ್ಲೂ ಹಾಗೇ ಆಗಿದೆ. ರಾಜಕೀಯದಲ್ಲಿ ಯಾರು ಮಿತ್ರರು, ಯಾರು ಶತ್ರುಗಳು ಎಂದು ಅರಿಯುವ ಪ್ರಯತ್ನದಲ್ಲಿರುವಾಗಲೇ ಮಿತ್ರರು ಶತ್ರುಗಳಾಗಿರುತ್ತಾರೆ, ಶತ್ರುಗಳು ಮಿತ್ರರಾಗಿರುತ್ತಾರೆ. 2019ರ ಚುನಾವಣೆಯಲ್ಲಿ ಮೋದಿಯನ್ನು ಏಕಾಂಗಿಯಾಗಿ ಎದುರಿಸಬಲ್ಲ ನಾಯಕನ ಕೊರೆತೆ ಎದುರಿಸುತ್ತಿರುವ ಪ್ರತಿಪಕ್ಷಗಳು ಸಂಘಟಿತ ಹೋರಾಟಕ್ಕೆ ಮುಂದಾಗಿವೆ. ಕುಮಾರಸ್ವಾಮಿ ಪ್ರಮಾಣ ವಚನಕ್ಕೂ ಮುನ್ನ ಪ್ರಾರಂಭವಾದ…
ಬಿಜೆಪಿ ನಾಯಕರು ರಾಹುಲ್ ಗಾಂಧಿ ತಟ್ಟೆ ಇಣುಕುವುದನ್ನು ಬಿಟ್ಟು ದೇಶದ ಬೇರೆ ಸಮಸ್ಯೆಗಳತ್ತ ಚಿತ್ತ ಹರಿಸುವುದು ಬೆಟರ್. ಇಲ್ಲವಾದರೆ ರಾಹುಲ್ ಗಾಂಧಿ ಏನು ತಿನ್ನಬೇಕು ಬೇಡ ಅನ್ನುವುದನ್ನು ಹೇಳಿ ಬಿಡಲಿ. ಅದು ಅಸಾಧ್ಯವಾದರೆ ರಾಹುಲ್ ಗಾಂಧಿಯೇ ಬಿಜೆಪಿ ನಾಯಕರ ಅನುಮತಿ ಪಡೆದು ತಿನ್ನುವುದು ಒಳಿತು. ಯಾಕೆ ಈ ಮಾತು ಅಂದರೆ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ಕಾಠ್ಮಂಡುವಿನ…
ನೀವು Observe ಮಾಡಿದ್ರೋ..ಇಲ್ವೋ ಗೊತ್ತಿಲ್ಲ, ಇತ್ತೀಚೆಗೆ ಚಂದನವನದ ಮೋಹಕ ತಾರೆ, ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲ ತಾಣಗಳ ಮುಖ್ಯಸ್ಥೆ ರಮ್ಯ ಸೈಲೆಂಟ್ ಆಗಿದ್ದಾರೆ. ಒಂದಲ್ಲ ಒಂದು ಟ್ವೀಟ್ ಮೂಲಕ ಸುದ್ದಿಯಾಗುತ್ತಿದ್ದ ದಿವ್ಯ ಸ್ಪಂದನ ಟ್ವೀಟ್ ಗಳ ದೂರವುಳಿದಿದ್ದಾರೆ. ಏನಿದ್ದರೂ ಅವರೀಗ ರೀ ಟ್ವೀಟ್ ಮಾಡುವುದಕ್ಕೆ ಸೀಮಿತರಾಗಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ರಮ್ಯ ಅವರು ಸಾಮಾಜಿಕ ಜಾಲ ತಾಣಗಳ ಮುಖ್ಯಸ್ಥೆ ಅನ್ನುವ…
ರಾಹುಲ್ ಗಾಂಧಿ ಮದುವೆಯ ಬಗ್ಗೆ ಚರ್ಚೆಯಾದಷ್ಟು ಭಾರತದ ಮತ್ಯಾವ ರಾಜಕಾರಣಿಯ ಮದುವೆಯ ಬಗ್ಗೆ ಚರ್ಚೆಯಾಗಿಲ್ಲ. ಕೆಲವರಿಗೆ ರಾಹುಲ್ ಮದುವೆ ಟೀಕೆಯ ವಿಷಯವಾದರೆ, ಮತ್ತೆ ಹಲವರಿಗೆ ಕಾಳಜಿಯ ವಿಷಯ. ಆದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ವಿವಾಹದ ಬಗ್ಗೆ ಪ್ರಸ್ತಾಪವಾದ ವೇಳೆ ಅದರಿಂದ ಜಾಣ್ಮೆಯಿಂದ ಜಾರಿಕೊಳ್ಳುತ್ತಿದ್ದರು. ಆದರೆ ಹಿಂದೊಮ್ಮೆ ನಾನು ಹಣೆ ಬರಹದ ಮೇಲೆ ನಂಬಿಕೆ ಇಟ್ಟವನು ಎಂದು ತಮ್ಮ ಮದುವೆ…
ಕರ್ನಾಟಕಕ್ಕೆ ಕಾಲಿಟ್ಟರೆ ಸಾಕು, ರಾಷ್ಟ್ರ ಮಟ್ಟದ ರಾಜಕಾರಣಿಗಳಿಗೆ ಕರ್ನಾಟಕದ ಸಾಧಕರು ನೆನಪಾಗಿ ಬಿಡುತ್ತಾರೆ. ಕನ್ನಡ ಮೇಲೆ ಪ್ರೀತಿ ಉಕ್ಕಿ ಹರಿಯುತ್ತದೆ. ಆದರೆ ಅವೆಲ್ಲವೂ ನಾಟಕ ಅನ್ನುವುದಕ್ಕೆ ಅವರ ಉಚ್ಛಾರಣೆಯೇ ಸಾಕ್ಷಿಯಾಗಿರುತ್ತದೆ. ಈ ಹಿಂದೆ ಮೋದಿ, ರಾಹುಲ್ ಗಾಂಧಿ ಸಾಧಕರ ಹೆಸರು ಹೇಳಲು ಹೋಗಿ ಎಡವಟ್ಟು ಮಾಡಿಕೊಂಡಿದ್ದರು. ಹಿಂದೆ ಉಚ್ಛಾರಣೆಯಲ್ಲಿ ಕನ್ನಡ ಹೇಳಲು ಹೋಗಿ ಟ್ರೋಲ್ ಆಗಿದ್ದರು. ಅದರಲ್ಲೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ…
ಪ್ರಧಾನಿ ಮೋದಿ ಚೌಕೀದಾರ ಅಲ್ಲ ಬದಲಾಗಿ ಭ್ರಷ್ಟಾಚಾರದ ಭಾಗೀದಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಬೀದರ್ ನಲ್ಲಿ ನಡೆಯುತ್ತಿರುವ ಜನಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು ನಾಲ್ಕು ವರ್ಷಗಳ ಬಳಿಕ ಕೇಂದ್ರದ ಬಿಜೆಪಿ ಸರ್ಕಾರದ ಬಂಡವಾಳ ಬಯಲಾಗಿದೆ. ಎಲ್ಲಾ ರಂಗಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಸುಳ್ಳು ಭರವಸೆ ಮತ್ತು ಅಪಪ್ರಚಾರದ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ…