ಬೆಂಗಳೂರು : ಚಂದನವನದ ನಟಿ ಕಾವ್ಯ ಶಾ ಕೊನೆಗೂ ಸಪ್ತಪದಿ ತುಳಿದಿದ್ದಾರೆ. ಗುರುವಾರ ಗುರುಹಿರಿಯರ ಸಮ್ಮುಖದಲ್ಲಿ ವರುಣ್ ಕೈ ಹಿಡಿದಿರುವ ಕಾವ್ಯ ಶಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಹಿಂದೆ ಎರಡು ಬಾರಿ ಕಾವ್ಯ ಮತ್ತು ಕಾವ್ಯ ಅವರ ಮದುವೆಯನ್ನು ಮುಂದೂಡಲಾಗಿತ್ತು. ನಿರ್ಮಾಪಕ ವರುಣ್ ಪುನೀತ್ ರಾಜ್ ಕುಮಾರ್ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಪುನೀತ್ ಅಕಾಲಿಕ ನಿಧನದ ಹಿನ್ನಲೆಯಲ್ಲಿ ಮದುವೆಯನ್ನು ಮುಂದೂಡಲಾಗಿತ್ತು. ಇದಾದ ಬಳಿಕ ಏಪ್ರಿಲ್ 18 ರಂದು ಕಾವ್ಯ ಮತ್ತು ವರುಣ್ ಮದುವೆ ನಿಗದಿಯಾಗಿತ್ತು. ಮದುವೆಯ ಹಿಂದಿನ ವರುಣ್ ತಂದೆ ಅಕಾಲಿಕವಾಗಿ ಮೃತಪಟ್ಟಿದ್ದರು. ಹೀಗಾಗಿ ಮದುವೆಯನ್ನು ಮುಂದೂಡಲಾಗಿತ್ತು.
ಬೆಂಗಳೂರಿನ ನಂದಿ ಗ್ರೌಂಡ್ಸ್ ನಲ್ಲಿ ಜೂನ್ 9 ರಂದು ಸರಳವಾಗಿ ವಿವಾಹ ನೆರವೇರಿದ್ದು, ಲೂಸ್ ಮಾದ, ನಟಿ ರಮ್ಯ ಸೇರಿದಂತೆ ಚಿತ್ರರಂಗದ ಅನೇಕರು ಉಪಸ್ಥಿತರಿದ್ದರು.
ಮಿಸ್ಟರ್ & ಮಿಸ್ಸ್ ರಾಮಾಚಾರಿ’, ‘ಹಾಸ್ಯ ಸಂತಾನಂ’, ‘ಮುಗಿಲ್ಪೇಟೆ’ ಸಿನಿಮಾಗಳಲ್ಲಿಯೂ ಅವರು ಬಣ್ಣ ಹಚ್ಚಿದ್ದರು. ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಲ್ತ್ ಕೋಚ್ ಆಗಿ ಗುರುತಿಸಿಕೊಂಡಿದ್ದಾರೆ. ಅಂದಹಾಗೆ ಕಾವ್ಯಾ ಅವರು ಕನ್ನಡ ನಟ ನಾಗೇಂದ್ರ ಶಾ ಅವರ ಮಗಳು.
ಕಳೆದ 11 ವರ್ಷದಿಂದ ರಿಲೇಶನ್ಶಿಪ್ನಲ್ಲಿದ್ದ ಈ ಜೋಡಿ ಒಟ್ಟಿಗೆ ವೃತ್ತ ಜೀವನ ಆರಂಭಿಸಿದ್ದರು.
Discussion about this post