ಬಿಗ್ ಬಾಸ್ ಮನೆಯಲ್ಲಿ ತನಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಸೀಜನ್ 6ರ ಫೈನಲಿಸ್ಟ್ ಕವಿತಾ ಗೌಡ ಮಹಿಳಾ ಆಯೋಗದ ಮೊರೆ ಹೋಗಿದ್ದಾರೆ.
ಬಿಗ್ಬಾಸ್ ನಲ್ಲಿ ನಡೆದ ಘಟನೆ ಹಾಗೂ ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ ಹೊರ ಬಂದ ಮೇಲೂ ಆಂಡ್ರ್ಯೂ ಕಿರುಕುಳ ನೀಡಿದ್ದಾರೆ. ಶೋ ಮುಗಿಸಿದ ಬಳಿಕವೂ, ಹೋದಲ್ಲಿ ಬಂದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಆ್ಯಂಡ್ರೂ ವಿರುದ್ಧ ದೂರು ಸಲ್ಲಿಸಿದ್ದಾರೆ.
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರನ್ನು ಭೇಟಿಯಾಗಿರುವ ಕವಿತಾ ಆಂಡ್ರ್ಯೂ ಜೈಪಾಲ್ ವಿರುದ್ಧ ಲಿಖಿತ ದೂರು ನೀಡಿದ್ದಾರೆ.
ಇನ್ನು ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ಕವಿತಾ ಗೌಡ, ತಪ್ಪು ತಿದ್ದಿಕೊಳ್ಳೋದಾದ್ರೆ ತಿದ್ದಿಕೊಳ್ಳಲಿ ಅನ್ನೋದು ನನ್ನ ಭಾವನೆ. ಕಂಪ್ಲೇಂಟ್ ಅಂತೂ ಕೊಟ್ಟಿದ್ದೇನೆ, ಕೆಲವು ವೀಡಿಯೋಗಳು ವೂಟ್ನಲ್ಲಿವೆ. ಅವುಗಳೇ ಸಾಕು ಸಾಕ್ಷಿಗೆ ಎಂದಿದ್ದಾರೆ.
ಬಿಗ್ ಬಾಸ್ ಮನೆಗೆ ಹೋದ ಕೆಲವೇ ದಿನಗಳಲ್ಲಿ ಆ್ಯಂಡಿ ಬಗ್ಗೆ ಗೊತ್ತಾಯಿತು. ಹೀಗಾಗಿ ಅವರಿಂದ ಎಷ್ಟು ಸಾಧ್ಯವೋ ಅಷ್ಟು ದೂರ ಇರುತ್ತಿದ್ದೆ. ಆದರೂ ಅವರೇ ಬಂದು ಮಾತನಾಡಿಸುತ್ತಿದ್ದರು. ಟಾಸ್ಕ್ ಹೆಸರಿನಲ್ಲಿ ಕಿರುಕುಳ ಕೊಡುತ್ತಿದ್ದರು. ಹೀಗಾಗಿ ಬಿಗ್ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಅವರು ಬರುತ್ತಿದ್ದ ಕಾರ್ಯಕ್ರಮಕ್ಕೆ ಗೈರಾಗುತ್ತಿದೆ.
ಆದರೆ ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಹೋಗಲೆಬೇಕಾದ ಅನಿವಾರ್ಯತೆ ಇತ್ತು. ಅಷ್ಟೇ ಅಲ್ಲದೆ ನನಗೆ ಪರಿಚಿತರು ಬರುವಂತೆ ಒತ್ತಾಯ ಮಾಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇವೆ ಅನ್ನೋ ಭರವಸೆ ಕೊಟ್ಟಿದ್ದರು. ಆದರೆ ಆ್ಯಂಡಿ ಮೈಕ್ ಅನ್ನು ಪಕ್ಕಕ್ಕೆ ಇಟ್ಟು ಬೈದರು. ಕೆಟ್ಟ ಪದಗಳನ್ನು ಬಳಸಿದರು.
ಆಗ್ಲೇ ಗೊತ್ತಾಯ್ತು ಇವರು ಒಳಗಡೆ ಮಾತ್ರವಲ್ಲ, ಹೊರಗಡೆನೂ ಹೀಗೆ ಎಂದು. ಹೀಗಾಗಿ ದೂರು ಕೊಡಲು ಇದೊಂದು ರೈಟ್ ಟೈಮ್ ಎಂದು ದೂರು ಕೊಡಲು ನಿರ್ಧರಿಸಿದೆ ಅಂದಿದ್ದಾರೆ.
ಈ ಬಗ್ಗೆ ಚಾನೆಲ್ ಮುಖ್ಯಸ್ಥ ಪರಮೇಶ್ ಗುಂಡ್ಕಲ್ ಮತ್ತು ಬಿಗ್ ಬಾಸ್ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಗುರುದಾಸ್ ಶಣೈ ಅವರಿಗೂ ನನಗಾಗಿದ್ದ ನೋವನ್ನು ಹೇಳಿಕೊಂಡಿದ್ದೆ. ಆಗ ಅವರು ದೂರು ಕೊಟ್ಟರೆ ಬೆಂಬಲಿಸುವುದಾಗಿ ಹೇಳಿದ್ದರಂತೆ.
ಇದೇ ರೀತಿ ಬೇರೆ ಮಹಿಳಾ ಸ್ಪರ್ಧಿಗಳಿಗೂ ಈತನಿಗೂ ಕಿರುಕುಳವಾಗುತ್ತಿತ್ತು. ಆದರೆ ಅವರು ಯಾರು ದೂರು ಕೊಟ್ಟಿಲ್ಲ. ಆ ಬಗ್ಗೆ ನಾನು ಮಾತನಾಡೋದಿಲ್ಲ ಅಂದಿದ್ದಾರೆ ಕವಿತಾ.
ಕವಿತಾ ನಡೆ ನೋಡಿದರೆ ಈ ಹುಡುಗಿಯನ್ನು ಖಂಡಿತಾ ಬೆಂಬಲಿಸಲೇಬೇಕು. ಆಂಡ್ರ್ಯೂ ಜೈಪಾಲ್ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಮಹಿಳೆಯರಿಗೆ ಗೌರವ ಕೊಟ್ಟ ವ್ಯಕ್ತಿಯಲ್ಲ. ಆತ ಎಂಥಾ ಕ್ರಿಮಿ ಅನ್ನುವುದು ಆಗ್ಲೇ ಗೊತ್ತಾಗಿತ್ತು. ಆದರೂ ವಾಹಿನಿ ಮಂದಿ ಆತನನ್ನು ಅದ್ಯಾಕೋ ಸಹಿಸಿಕೊಂಡರೋ ಗೊತ್ತಿಲ್ಲ.
ಇದೀಗ ಕವಿತಾ ಆಂಡ್ರ್ಯೂ ಜೈಪಾಲ್ ವಿರುದ್ಧ ಗುಡುಗಿದ್ದಾರೆ. ಆಂಡ್ರ್ಯೂ ಜೈಪಾಲ್ ವಿರುದ್ಧ ಈಗಾಗಲೇ ಸಂಘಟನೆಯೊಂದು ದೂರು ದಾಖಲಿಸಿದೆ. ಇದರ ಬೆನ್ನಲ್ಲೇ ಮತ್ತೊಂದು ದೂರು ದಾಖಲಾಗಿದೆ ಅಂದ್ರೆ ಆಂಡ್ರ್ಯೂ ಜೈಪಾಲ್ ಮೇಲ್ನೋಟಕ್ಕೆ ತಪ್ಪಿತಸ್ಥ ಅನ್ನುವುದು ಸ್ಪಷ್ಟ.
Discussion about this post