Advertisements

ರಶ್ಮಿ V/S ನಯನ : ಕಸದ ತೊಟ್ಟಿಯಿಂದ ಬಂದವರಾರು…? ಮಹಾಮನೆಯಲ್ಲೊಂದು ಮಹಾ ಪ್ರಶ್ನೆ

ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಬಿಗ್ ಸೀಸನ್ 6 ನಿರಾಶೆಯಿಂದ ಮುಕ್ತಾಯವಾಗುತ್ತಿದೆ. ಇಂದು ಸೀಸನ್ 6ಕ್ಕೆ ಕಾರ್ಯಕ್ರಮದ ಸಾರಥಿ ಕಿಚ್ಚ ಸುದೀಪ್ ಮಂಗಳ ಹಾಡಲಿದ್ದಾರೆ. ಬಹುತೇಕ ನವೀನ್ ಅವರೇ ಮೇಲುಗೈ ಸಾಧಿಸುವುದು ಖಚಿತಗೊಂಡಿದೆ.

ಈ ನಡುವೆ ಫೈನಲ್ ಕಾರ್ಯಕ್ರಮದ ಮೊದಲ ದಿನ ಅಂದರೆ ಶನಿವಾರ ರಶ್ಮಿ ಮತ್ತು ಅಂಡಿ ಮನೆಯಿಂದ ಹೊರಗೆ ಬಂದಿದ್ದಾರೆ.

ರಶ್ಮಿಯವರನ್ನು ವೇದಿಕೆಗೆ ಬರ ಮಾಡಿಕೊಂಡ ಕಿಚ್ಚ ಸುದೀಪ್, ಸುಖ ಕಷ್ಟವನ್ನು ಮಾತನಾಡಿದ್ದಾರೆ. ಜೊತೆಗೆ ರಶ್ಮಿ ಬಿಗ್ ಬಾಸ್ ಮನೆಯಲ್ಲಿ ಕಳೆದ ದಿನಗಳ VT ಯನ್ನು ಕೂಡಾ ತೋರಿಸಿದ್ದಾರೆ.

ನೇರ ಖಾರ ಎಂದು ಹಾರುತ್ತಿದ್ದ ರಶ್ಮಿ VT ನೋಡಿ ಕಣ್ಣೀರು ಹರಿಸಿದರು. ನೇರ ಖಾರ ಅನ್ನುವುದು ಬರೀ ತೋರ್ಪಡಿಕೆ, ಒಳಗಡೆ ಅಡಗಿರುವ ರಶ್ಮಿಯೇ ಬೇರೆ ಅನ್ನುವುದಕ್ಕೆ ಅವರ ಕಣ್ಣೀರು ಸಾಕ್ಷಿಯಾಯ್ತು. ಹೊರ ಪ್ರಪಂಚಕ್ಕೆ ಅವರು ಬೇರೆ ಎನೋ ತೋರಿಸಲು ಹೊರಟಿದ್ದಾರೆ ( ದಶಕಗಳ ಕಾಲ ಮಾಡಿದ ಸಂಗೀತ ಅಭ್ಯಾಸವನ್ನೇ ಸೈಡಿಗಿಟ್ಟವರು, ಅದ್ಭುತ ಕಂಠವಿದ್ದರೂ, ಸಂಗೀತ ಜ್ಞಾನವಿದ್ದರು ಮತ್ತೇನೋ ಮಾಡಲು ಹೊರಟವರು)

ಆದರೆ ಇದೇ VT ಯಲ್ಲಿ ನಯನಾ ಅವರು ಈ ಹಿಂದೆ ಹೇಳಿದ್ದ ಮಾತು ರಶ್ಮಿಯವರನ್ನು ತೀರಾ ಘಾಸಿಗೊಳಿಸಿತ್ತು.

ಸುದೀಪ್ ಅವರು ಈ VT ಯಲ್ಲಿ ಇರಬಾರದಿತ್ತು ಅನ್ನಿಸುವ ಕಟೆಂಟ್ ಯಾವುದು ಎಂದು ಪ್ರಶ್ನಿಸಿದರೆ, ನಿಜವಾಗಿ ಯಾವ ಕಸದ ತೊಟ್ಟಿಯಿಂದ ಬಂದ್ಲೋ ಅನ್ನುವ ಮಾತು ಅಲ್ಲಿರಬಾರದಿತ್ತು. ಮನುಷ್ಯರೋ ಇರೋ ಜಾಗ ಅಲ್ಲ ಕಸದ ತೊಟ್ಟಿ, ಮನುಷ್ಯರೋ ಇರೋ ಜಾಗ, ಪ್ರಪಂಚವೇ ಬೇರೆ. ನಾನು ಕಸದ ತೊಟ್ಟಿಯಿಂದ ಬಂದಿದ್ದೇನೆ ಅನ್ನುವುದಾದರೇ ಅವರು ಕೂಡಾ ಅಲ್ಲಿಂದನೇ ಬಂದಿರಬೇಕು ಅನ್ನುವ ಮೂಲಕ, ನಯನಾ ಪುಟ್ಟಸ್ವಾಮಿ ಕೂಡಾ ಕಸದ ತೊಟ್ಟಿಯಿಂದಲೇ ಬಂದವರು ಎಂದು ಚುಚ್ಚಿದರು.

ಈ ವೇಳೆ ಗ್ಯಾಲರಿಯಲ್ಲಿ ಕೂತಿದ್ದ ನಯನಾ ಅಯ್ಯೋ ಯಾಕಾದರೂ ಈ ಮಾತನ್ನು ನಾನು ಹೇಳಿದೆ ಎಂದು ಪೆಚ್ಚು ಮೋರೆ ಹಾಕಿಕೊಂಡರು, ಮಾತ್ರವಲ್ಲದೆ ನಾನೇ ಆ ಮಾತನ್ನು ಹೇಳಿದ್ದು ಎಂದು ದಿಟ್ಟವಾಗಿ ಪಕ್ಕದಲ್ಲಿದ್ದವರಿಗೆ ಸ್ಪಷ್ಟಪಡಿಸಿದರು.

ಹಾಗಂತ ರಶ್ಮಿ ನಯನಾ ಹೇಳಿದ ಮಾತುಗಳಿಗೆ ಅಷ್ಟೊಂದು ರಿಯಾಕ್ಟ್ ಮಾಡೋ ಅಗತ್ಯ ಇರಲಿಲ್ಲ. ಮನೆಗೆ ಬಂದು Voot ನಲ್ಲಿ ಎಪಿಸೋಡ್ ನೋಡಿ, ನಾನು ಹೇಗೆ ಆ ಸಂದರ್ಭದಲ್ಲಿ ಹಾರಾಡಿದ್ದೆ. ಉಳಿದವರಿಗೆ ಎಷ್ಟೊಂದು ಕಾಟ ಕೊಟ್ಟಿದ್ದೆ, ಅನ್ನುವುದನ್ನು ತಿಳಿದ ಬಳಿಕ ರಿಯಾಕ್ಟ್ ಮಾಡಬೇಕಿತ್ತು.

ಆ ದಿನ ನಯನಾ ಆ ಮಾತುಗಳನ್ನು ಆಡುವುದಕ್ಕೂ ಕಾರಣವಿತ್ತು. ಟಾಸ್ಕ್ ನಲ್ಲಿ ರಶ್ಮಿ ಅಬ್ಬರಿಸಿದ ರೀತಿ ವಿಚಿತ್ರವಾಗಿತ್ತು. ಉಳಿದವರಿಗೆ ರಶ್ಮಿ ಕೊಟ್ಟ ಕಾಟ ನೋಡಿ ವೀಕ್ಷಕರೇ ಬೇಸರಿಸಿಕೊಂಡಿದ್ದರು. ಹೀಗಾಗಿ ನಯನಾ ತಮಗಾದ ನೋವಿನಿಂದ ರಶ್ಮಿಯನ್ನು ಹಾಗೇ ಅಂದಿದ್ದರು.

ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ರಶ್ಮಿ ಹೇಳಿದ್ದು, ಯಾರ ತಂಟೆಗೂ ಹೋಗಲ್ಲ, ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು. ಬೇರೆಯವರು ಕೈ ಕಟ್ಟಿಕೊಂಡು ಕೂತಿರುತ್ತಾರೆಯೇ, ಅವರ ತಂಟೆಗೆ ಹೋದರೆ ಅವರೂ ಬಿಡುವುದಿಲ್ಲ. ಹಾಗಾಗಿಯೇ ಕಸದ ತೊಟ್ಟಿ ವಿಚಾರ ಬಂದಿದೆ.

ರಶ್ಮಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಬದಲಾಗುತ್ತಾರೆ ಅನ್ನುವ ನಿರೀಕ್ಷೆ ಇತ್ತು. ಅದು ಸುಳ್ಳಾಗಿದೆ. ಅವತ್ತು ಮುರಳಿ ಹೇಳಿದ್ದ ಮಾತನ್ನು ರಶ್ಮಿಗೆ ಮತ್ತೆ ನೆನಪಿಸಿಕೊಳ್ಳುವುದು ಬೆಟರ್.

ಮಾತನಾಡುವ ರೀತಿ ಸರಿ ಇದೆ, ಅದೆ ಅದನ್ನು ಹೇಳುವ ವಿಧಾನ ಸರಿ ಇಲ್ಲ ಎಂದು ಮುರಳಿ ರಶ್ಮಿಯನ್ನು ಎಚ್ಚರಿಸಿದ್ದರು. ಅದನ್ನು ರಶ್ಮಿ ಮರೆತಿದ್ದಾರೆ ಅನ್ನುವುದು ಬಿಗ್ ಬಾಸ್ ವೇದಿಕೆಯಲ್ಲೇ ಸಾಬೀತಾಯ್ತು.

ಮಾತು ಮಾತಿಗೂ ನನ್ನ ಅಭಿಮಾನಿಗಳು ಅನ್ನುತ್ತಿದ್ದ ರಶ್ಮಿಯನ್ನು ಇನ್ಮುಂದೆ ಅಭಿಮಾನಿಗಳೇ ಕಾಪಾಡಬೇಕು.

Advertisements

One Comment on “ರಶ್ಮಿ V/S ನಯನ : ಕಸದ ತೊಟ್ಟಿಯಿಂದ ಬಂದವರಾರು…? ಮಹಾಮನೆಯಲ್ಲೊಂದು ಮಹಾ ಪ್ರಶ್ನೆ

  1. Pingback: ಭೇಷ್ ಕವಿತಾ :ಬಿಗ್ ಬಾಸ್ ಮನೆಯ ಬ್ಯಾಡ್ ಬಾಯ್ ವಿರುದ್ಧ ಕಾನೂನು ಹೋರಾಟ ಶುರುವಿಟ್ಟ ಚಿನ್ನು – torrentspree

Leave a Reply

%d bloggers like this: