Advertisements

ಶಶಿ ಗೆಲುವಿನ ಹಿಂದಿನ ಮಹಾರಹಸ್ಯ ಬಯಲು…!

ಬಿಗ್ ಬಾಸ್ ಗೆಲ್ಲಬೇಕು ಅಂದರೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಪ್ರಚಾರ ಮಾಡಬೇಕು ಅನ್ನುವ RJ ರಶ್ಮಿ ಮಾತಿನಲ್ಲಿ ಸತ್ಯಾಂಶವಿದೆ.

ಈ ಹಿಂದೆ ಸಾಮಾಜಿಕ ಜಾಲ ತಾಣ ಅಷ್ಟೊಂದು ಪ್ರಭಾವಶಾಲಿಯಾಗಿರಲಿಲ್ಲ. 2014ರ ಚುನಾವಣೆಯಲ್ಲಿ ಮೋದಿ ಸಾಮಾಜಿಕ ಜಾಲತಾಣವನ್ನು ಚೆನ್ನಾಗಿ ಬಳಸಿಕೊಂಡರೋ ಅಂದಿನಿಂದ ಸಾಮಾಜಿಕ ಜಾಲತಾಣ ಸಿಕ್ಕಾಪಟ್ಟೆ ಪ್ರಭಾವ ಬೀರಲಾರಂಭಿಸಿದೆ. ಅವಕಾಶ ಕೊಟ್ಟರೆ ಸಂವಿಧಾನವನ್ನೇ ಬದಲಾಯಿಸುವ ಮಟ್ಟಿಗೆ ಅಪಾಯಕಾರಿಯಾಗಿ ಸಾಮಾಜಿಕ ಜಾಲತಾಣ ಬೆಳೆದು ನಿಂತಿದೆ.

ಶಶಿ ಗೆಲುವಿನಲ್ಲೂ ಆಗಿದ್ದು ಹೀಗೆ. ಸಾಮಾನ್ಯ ರೈತನಾಗಿ ಮನೆಯೊಳಗಡೆ ಹೋದ ಶಶಿ ಹಿಂದೆ ಅದ್ಭುತ Social media team ಇತ್ತು.

ಅತ್ತ ಮನೆಯೊಳಗಡೆ ಹೋಗುತ್ತಿದ್ದಂತೆ ಫೇಸ್ ಬುಕ್, ಟ್ವೀಟರ್, ಇನ್ಸ್ಟಾ ಹೀಗೆ ಇರೋ ಬರೋ ಕಡೆ ಸಿಕ್ಕಾಪಟ್ಟೆ ಕೆಲಸ ಪ್ರಾರಂಭಿಸಿತ್ತು. ಬರೋ ನೆಗೆಟಿವ್ ಕಮೆಂಟ್ ಗಳಿಗೆ ಉತ್ತರಿಸುವ ಕೆಲಸಗಳು ನಡೆಯಿತು.

ಸಾವಿರ ನೂರರ ಲೆಕ್ಕದಲ್ಲಿ ಫಾಲೋವರ್ ಗಳನ್ನು ಹೊಂದಿದ್ದ ಖಾತೆಗೆ ಲಕ್ಷಾಂತರ ಮಂದಿ ಅಭಿಮಾನಿಗಳು ಹುಟ್ಟಿಕೊಂಡರು. ಶಶಿ ಗೆಲುವಿಗಾಗಿ ಪೂಜೆ ಸೇರಿದಂತೆ ಅನೇಕ ಕೆಲಸಗಳು ನಡೆಯಿತು. ಗಿಮಿಕ್ ಗಳನ್ನು ನಂಬಿದ ಮಂದಿ ಶಶಿ ಅದ್ಭುತ ಆಟಗಾರ ಅನ್ನುವ ಸೀಲ್ ಒತ್ತಿದರು.

ಶಶಿ ನಾಮಿನೇಟ್ ಆಗಿದ್ದಾರೆ ಅಂದರೆ ಸಾಕು, ಅವರ ಪರವಾಗಿ ಮಾತನಾಡುವ ಸಾವಿರ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುತ್ತಿದ್ದರು. ಅವೆಲ್ಲವೂ ಕೂಡಾ ಶಶಿ ಪರವಾಗಿದ್ದ Social media war room ನ ತಂತ್ರವಾಗಿತ್ತು.

ಬಿಗ್ ಬಾಸ್ ಮನೆಯಲ್ಲಿ ಶಶಿ ವಿರುದ್ಧ ಯಾರಾದ್ರೂ ಬೆಂಕಿ ಕಾರಿದರೆ ಸಾಕು, ಅವರ ವಿರುದ್ಧ ಜನಾಭಿಪ್ರಾಯ ಸಂಗ್ರಹ ಸದ್ದಿಲದೆ ನಡೆಯುತ್ತಿತ್ತು.

ಶಶಿ, ಕವಿತಾ ಸಲುವಾಗಿ ಕೈ ಮುರಿದುಕೊಂಡ ವೇಳೆ ಅದೊಂದು ದೊಡ್ಡ ವಿಷಯವನ್ನಾಗಿ ವೀಕ್ಷಕರು ಪರಿಗಣಿಸಿದರು. ಆದರೆ ಅದನ್ನು ಮರೆ ಮಾಚುವ ಕೆಲಸವೂ ಜೋರಾಗಿ ನಡೆದಿತ್ತು.

ಇನ್ನ ಶಶಿ ಪೈನಲ್ ಗೆ ಬರುತ್ತಿದ್ದಂತೆ ಆಯಾ ಕಟ್ಟಿನ ಜಾಗಗಳಲ್ಲಿ ಫ್ಲೆಕ್ಸ್ ಬ್ಯಾನರ್ ಗಳು ಎದ್ದು ನಿಂತಿತ್ತು.

ಹಾಗೆಲ್ಲಾ ಅಭಿಮಾನಿಗಳು ಶಶಿ ಪರವಾಗಿ ಬ್ಯಾನರ್ ಹಾಕುತ್ತಿದ್ದರೆ, ಪ್ರಥಮ್ ಪರವಾಗಿ ಹೈವೇಗಳಲ್ಲಿ ಹೋಲ್ಡಿಂಗ್ ಎದ್ದು ನಿಲ್ಲಬೇಕಾಗಿತ್ತು. ಆ ಮಟ್ಟಿನ ಹವಾ ಸೃಷ್ಟಿಸಿದ ಹಿರಿಮೆ ಅವರದ್ದು.

ನವೀನ್ ಅವರಿಗೂ ಅಭಿಮಾನಿಗಳ ಸಂಖ್ಯೆ ಕಡಿಮೆ ಇರಲಿಲ್ಲ. ಶಶಿಯೊಬ್ಬರನ್ನು ಬಿಟ್ಟರೆ ಮತ್ಯಾರ ಪರವಾಗಿಯೂ ಫ್ಲೆಕ್ಸ್ ಬರಲೇ ಇಲ್ಲ.ಅಲ್ಲಿಗೆ ಶಶಿಯ ಗೆಲುವಿನ ಗುಟ್ಟೇನು ಅನ್ನುವುದು ಗೊತ್ತಾಗಿದೆ.

ಆದರೆ ರಶ್ಮಿ ತನ್ನದೇ ಸಾಮಾಜಿಕ ಜಾಲತಾಣದ ಹಿಂಬಾಲಕರನ್ನು ನಂಬಿಕೊಂಡರು. ನನಗೆ ಅಭಿಮಾನಿಗಳ ಹಾರೈಕೆ ಇದೆ, ಆರ್.ಜೆ. ಆಗಿದ್ದ ಕಾರಣಕ್ಕೆ ಜನ ಬೆಂಬಲಿಸುತ್ತಾರೆ ಎಂದು ನಂಬಿದರು.

ರಶ್ಮಿ ಪರವಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಷ್ಟು ಗ್ರೂಪ್, ಪೇಜ್ ಗಳು ಕ್ರಿಯೇಟ್ ಆಗಿತ್ತು, ಆದರೆ ಅದು ಶಶಿ ಹೆಸರಿನ ವಿರುದ್ಧ ಸೆಣಸುವಲ್ಲಿ ವಿಫಲವಾಯ್ತು.

ಇನ್ನು ನವೀನ್ ಸಜ್ಜು ಕಥೆಯೂ ಹೀಗೆ ಆಯ್ತು. ಹಾಡುಗಾರ, ಕರ್ನಾಟಕಕ್ಕೆ ಪರಿಚಯವುಳ್ಳವ ಅನ್ನುವ ಗುಂಗಿತ್ತು. ಅವರ ಸ್ನೇಹಿತರು, ಅಭಿಮಾನಿಗಳು ತಮ್ಮ ತಮ್ಮ ಪಾಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದರೆ ಹೊರತು, ಸಂಘಟಿತ ಪ್ರಯತ್ನ ಆಗಲಿಲ್ಲ. ನಿಜವಾಗಿಯೂ ಫೈನಲ್ ನಲ್ಲಿ ಗೆಲ್ಲುವ ತಾಕತ್ತು ಸಜ್ಜುವಿಗಿತ್ತು. ಆದರೆ Social media war room ನ ತಂತ್ರದ ಮುಂದೆ ಪ್ರತಿಭೆ ಸೋಲಬೇಕಾಯ್ತು.

ಧನ್ ರಾಜ್ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ.

ಇದೀಗ ಬಿಗ್ ಬಾಸ್ ಕಾರ್ಯಕ್ರಮ ಆಯೋಜಕರು ತಲೆ ಕೆಡಿಸಿಕೊಂಡಿದ್ದಾರೆ. ಮುಂದಿನ ಸೀಸನ್ ಹಣೆ ಬರಹವನ್ನು ಸಾಮಾಜಿಕ ಜಾಲತಾಣವೇ ಬರೆಯುತ್ತದೆ ಅನ್ನುವುದಾದರೆ ಕಷ್ಟ, ಇದಕ್ಕಾಗಿ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು ಎಂದು.

ಚುನಾವಣೆ ಬಂತು ಅಂದರೆ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣದ ನಿರ್ವಹಣೆ ಸಲುವಾಗಿ ಕೋಟಿ ಕೋಟಿ ರೂಪಾಯಿ ಸುರಿಯುತ್ತದೆ. ಸಾಮಾಜಿಕ ಜಾಲತಾಣ ನಿರ್ವಹಣೆಯಲ್ಲಿ ಗೆದ್ದವರೇ ಗದ್ದುಗೆ ಏರುವ ಕಾಲ ಇದಾಗಿರುವಾಗ ಬಿಗ್ ಬಾಸ್ ಅದ್ಯಾವ ಲೆಕ್ಕ.

ಏನಿವೇ ಶಶಿ ಗೆದ್ದಿದ್ದಾರೆ, ಕೊಟ್ಟ ಭರವಸೆಯನ್ನು ಈಡೇರಿಸುವ ಕಾಲ ಯಾವಾಗ ಬರುತ್ತದೆಯೋ ಕಾಯೋಣ. ಯಾಕೆಂದರೆ ಅವರು ಗೆದ್ದಿರುವ ಕರ್ನಾಟಕದ ಜನತೆಯ ಮೊಬೈಲ್ ಕಾಸಿನಿಂದ.

Advertisements

One Comment on “ಶಶಿ ಗೆಲುವಿನ ಹಿಂದಿನ ಮಹಾರಹಸ್ಯ ಬಯಲು…!

  1. Pingback: ಭೇಷ್ ಕವಿತಾ :ಬಿಗ್ ಬಾಸ್ ಮನೆಯ ಬ್ಯಾಡ್ ಬಾಯ್ ವಿರುದ್ಧ ಕಾನೂನು ಹೋರಾಟ ಶುರುವಿಟ್ಟ ಚಿನ್ನು – torrentspree

Leave a Reply

%d bloggers like this: