ಯಾರು ಹಿತವರು ನಿಮಗೆ … ಇವರೇ ಈ ಬಾರಿ ಬಿಗ್ ಬಾಸ್ ಮನೆಗೆ ಹೋದವರು…

ಮನುಷ್ಯನ ಮುಖವಾಡವನ್ನು ಬಯಲು ಮಾಡುವ ರಿಯಾಲಿಟಿ ಶೋ ಬಿಗ್ ಬಾಸ್ 6ನೇ ಅವೃತ್ತಿಗೆ ಕಾಲಿಟ್ಟಿದೆ. ಕಿಚ್ಚ ನಡೆಸಿಕೊಡುತ್ತಿರುವ ಅದ್ಭುತ ಕಾರ್ಯಕ್ರಮಕ್ಕೆ 18 ಮಂದಿ ಬಲಗಾಲಿಟ್ಟು ಪ್ರವೇಶಿಸಿದ್ದಾರೆ.

ಕೆಲವರು ಒಳ್ಳೆ ಹುಡುಗ ಪ್ರಥಮ್ ನನ್ನು ನೆನಪಿಸಿದರೆ, ಮತ್ತೆ ಕೆಲವರು ಚಂದನ್ ಶೆಟ್ಟಿಯನ್ನು ನೆನಪಿಸಿದ್ರು. ಕೆಲವರ ಮೂತಿ ರಂಪಾಟ ರಾಣಿಯಂತೆ ಕಾಣಿಸಿದರೆ, ಮತ್ತೆ ಕೆಲವರು ಜಡೆ ಜಗಳಕ್ಕೆ ಕಾದವರಂತೆ ಗೋಚರಿಸಿದ್ದಾರೆ.

ಯಾರು ಏನು ಅನ್ನುವುದು ಇನ್ನೊಂದು ವಾರದಲ್ಲಿ ಗೊತ್ತಾಗಲಿದೆ. ಹಾಗದರೆ ಈ ಬಾರಿ ಮನೆಗೆ ಹೋದವರು ಯಾರು ಅವರ ಪರಿಚಯ ಇಲ್ಲಿದೆ.

 

 1. ಸೋನು ಪಾಟೀಲ್, ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ಫೇಸ್. ಉತ್ತರ ಕರ್ನಾಟಕವನ್ನು ಟ್ರಂಪ್ ಕಾರ್ಡ್ ಆಗಿ ಪ್ರಯೋಗಿಸಿದ್ದಾರೆ. ಮಾತಿನ ವರಸೆ ನೋಡಿದರೆ ಶೀಘ್ರದಲ್ಲೇ ಗೇಟ್ ಪಾಸ್ ಗ್ಯಾರಂಟಿ ಅನ್ನುವಂತಿದೆ. ತನ್ನತನವನ್ನು ಮರೆತು ಆಡುತ್ತಿದ್ದಾರೆ ಅನ್ನುವುದೇ ಮೈನಸ್ ಪಾಯಿಂಟ್. ಬೋಲ್ಡ್ ಆಗಿದ್ದರೆ ಚೆಂದ. ಒವರ್ ಸ್ಮಾರ್ಟ್ ಆದರೆ ಕಷ್ಟ.

Sonu patil

 

 1. ಆ್ಯಂಡ್ರೋ, ಗಾತ್ರ ನೋಡಿದರೆ ಗೊತ್ತಾಗುತ್ತದೆ ತಿಂಡಿ ಪೋತ ಅಂತಾ. 140 ಕೆಜಿ ತೂಗುವ ಮಿನಿ ಬುಲೆಟ್ ಪ್ರಕಾಶ್. ತೂಕ ಕಡಿಮೆ ಮಾಡುವ ಉದ್ದೇಶದಿಂದ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ.

Andro

 1. ಜಯಶ್ರೀ, ಕನ್ನಡಿಗರಿಗೆ ಚಿರಪರಿಚಿತ ಹೆಸರು. ಮಾಯಾಮೃಗ ಧಾರಾವಾಹಿ ಮೂಲಕ ಕನ್ನಡಿಗರಿಗೆ ಪರಿಚಯವಾದ ಪ್ರತಿಭೆ.ಮಾತು ಜಾಸ್ತಿ, ತಾಳ್ಮೆ ಪರೀಕ್ಷಿಸಲು ಮುಂದಾದರೆ ಕೆರಳಿ ಕೆಂಡವಾಗುವ ಬುದ್ದಿ. ಬಿಗ್ ಬಾಸ್ ಮನೆಯಲ್ಲಿ 50ಕ್ಕಿಂತ ಹೆಚ್ಚು ದಿನ ನಿಲ್ಲುವುದಕ್ಕೆ ಯಾವುದೇ ತೊಂದರೆ ಇಲ್ಲ.

Jayashree

 1. ಎಂ.ಜೆ. ರಾಕೇಶ್, ಪ್ರೊ. ಉಲ್ಫತ್ ಸುಲ್ತಾನ್ ಎಂದೇ ಫೇಮಸ್, ರಾಜಸ್ತಾನಿಯಾಗಿದ್ದರು, ಹುಟ್ಟಿದ್ದು  ಬೆಳೆದಿದ್ದು ಬೆಂಗಳೂರಿನಲ್ಲಿ, ಸೇವಿಸಿದ್ದು ಕನ್ನಡದ ಗಾಳಿ, ತಿಂದಿದ್ದು ಕನ್ನಡದ ಅನ್ನ. 350 ಗರ್ಲ್ ಪ್ರೆಂಡ್ ಗಳನ್ನು ಸಂಪಾದಿಸಿದ ಹಿರಿಮೆ. ಬಿಬಿಎಂಪಿ ಚುನಾವಣೆ ನಿಲ್ಲುವ ಸಿದ್ದತೆಯಲ್ಲಿದ್ದಾರೆ. ಅದಕ್ಕಿಂತ ಮುಂಚೆ ಬಿಗ್ ಬಾಸ್ ಮನೆಯ ರಾಜಕೀಯ ಅರ್ಥವಾದರೆ ಪುಣ್ಯ. ಅಭಿಮಾನಿಗಳ ವರ್ಗ ದೊಡ್ಡದಿದೆ. ಬಿಗ್ ಬಾಸ್ ಗೆ ರಾಕೇಶ್ ರಾಕೆಟ್ ಮಾತುಗಳು ಬೇಸರ ಉಂಟು ಮಾಡಲಾರದು.

MJ Rakesh

 1. ಮುರುಳಿ, ಕೇಬಲ್ ಮುರಳಿ ಈಗ ಗ್ಲೋಬಲ್ ಮುರುಳಿ, ಅಡುಗೆ ಬಾರದಿದ್ದರೂ ಅಡುಗೆ ಕಾರ್ಯಕ್ರಮವನ್ನು ಅದ್ಭುತವಾಗಿ ನಡೆಸಿಯೇ ಫೇಮಸ್ ಆಗಿದ್ದಾರೆ. 6 ಸಾವಿರ ಅಡುಗೆಯ ರುಚಿ ನೋಡಿದ ದಾಖಲೆ ಇವರದ್ದು. ಮುರಳಿ ಹೇಗೆ ಅನ್ನುವುದು ತುಂಬಾ ಜನರಿಗೆ ಗೊತ್ತಿಲ್ಲ. ಎಲ್ಲವೂ ಆಟದ ಮೇಲೆ ನಿಂತಿದೆ. ಫೇಸ್ ಬುಕ್ ವಿಡಿಯೋಗೆ ಲಕ್ಷ ಲಕ್ಷ ಲೈಕ್ ಬರಬಹುದು, ಆದರೆ ಬಿಗ್ ಬಾಸ್ ಮನೆಯಲ್ಲಿ ಕೂತು ವೀಕ್ಷಕರ ಮನ ಗೆಲ್ಲುವುದು ಅಡುಗೆ ರುಚಿ ನೋಡಿದಷ್ಟು, ಫೇಸ್ ಬುಕ್ ಲೈಕ್ ಪಡೆದಷ್ಟು ಸುಲಭವಲ್ಲ.

Murali

 1. ಅಕ್ಷತಾ ಪಾಂಡವಪುರ, ಅದ್ಭುತ ರಂಗ ಕಲಾವಿದೆ. ರಂಗವೇರಿದರೆ ಮಂತ್ರ ಮುಗ್ಧಗೊಳಿಸುವ ತಾಕತ್ತಿದೆ. ನಾಟಕಗಳಲ್ಲಿ ಅಭಿನಯಿಸಬಹುದು, ಬಿಗ್ ಬಾಸ್ ಮನೆಯ ನಾಟಕವೇ ಬೇರೆ. ಮಂಡ್ಯ ಜಿಲ್ಲೆಯ ಪುಟ್ಟ ಗ್ರಾಮದ ಸಾಧಾರಣ ಕುಟುಂಬದಲ್ಲಿ ಹೆಣ್ಣಾಗಿ ಜನಿಸಿದ ಹುಡುಗಿ ಎಲ್ಲರ ಹಾಗೆ ಕನಸು ಕಾಣುತ್ತಾ ಮುಂದೆ ಬಂದಿದ್ದಾರೆ.ನೀನಾಸಂ ನಂತರ ದೆಹಲಿಯ NSD ಗೆ ಸುತ್ತಿ ಬಂದಿದ್ದಾರೆ. ‘ಪಲ್ಲಟ’ ಚಿತ್ರದ ನಟನೆಗಾಗಿ ರಾಜ್ಯಪ್ರಶಸ್ತಿ ಪಡೆದ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ, ‘ಇಬೆಲ್ಲ’ ಶೀರ್ಷಿಕೆಯ ಮಹಿಳಾಪ್ರಧಾನ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಾಯಕಿಯಾಗ್ತಾರ ಗೊತ್ತಿಲ್ಲ. ಮುಖವಾಡದೊಳಗಿನ ಮುಖ ಅನಾವರಣಕ್ಕೆ ಕಾಯುತ್ತಿದ್ದಾರೆ

Akshatha Pandavapura

 1. ರಕ್ಷಿತಾ ರೈ ಮಂಗಳೂರಿನ ಮುಗ್ದ ಹುಡುಗಿ, ಎಂ.ಎಸ್. ಧೋನಿಯ ದೊಡ್ಡ ಅಭಿಮಾನಿ. ಕ್ರಿಕೆಟರ್ ಆಗುವ ಕನಸು ಹೆಮ್ಮರವಾಗಿದೆ. ಮನೆ ಬಿಟ್ಟು ಬಂದು 9 ವರ್ಷವಾಗಿದೆ. ತಂದೆ ತಾಯಿ ಜೊತೆ ಮಾತಿಲ್ಲ. ತಮ್ಮನೇ ಸಂಬಂಧಕ್ಕೆ ಸೇತುವೆ. ಸೆಂಟಿಮೆಂಟ್ ಸ್ಟೋರಿ ಕಂಡು ಕನ್ನಡಿಗರು ಕರಗಬೇಕೇ ಹೊರತು, ಆಗಮನದ ಬಾಗಿಲು, ನಿರ್ಗಮನಕ್ಕಾಗಿ ಕಾದು ಕುಳಿತಿದೆ, ಮನೆಯೊಳಗಿರುವ ಅನುಭವಸ್ಥರ ಮುಂದೆ ಚಿಕ್ಕ ಹುಡುಗಿ ಪಾರಾಗುವುದು ಕಷ್ಟ. ಬಿಗ್ ಬಾಸ್ ಮನೆ ನೋಡಿದಷ್ಟು ಸುಲಭವಲ್ಲ. ಬಿಗ್ ಬಾಸ್ ಕೊಡುವ ಟಾಸ್ಕ್ ಗೆಲ್ಲಬಹುದು. ಆದರೆ ಬೇರೆ ಸ್ಪರ್ಧಿಗಳು ಮನೆಯ ಮೂಲೆಯಲ್ಲಿ ಕೂತು ರಚಿಸುವ ವ್ಯೂಹಗಳನ್ನು ಗೆಲ್ಲುವುದು ಈಕೆಗೆ ಕಷ್ಟವಾಗಬಹುದು.

Rakshitha Rai

 1. Rapid ರಶ್ಮಿ, ಕರ್ನಾಟಕದ ಅಭಿಮಾನಿಗಳ ಓಟುಗಳೇ ಸಾಕು ಫೈನಲ್ ದಾರಿ ಹೂವಿನ ಹಾಸಿಗೆಯಾಗಲು. ಫಿಲ್ಟರ್ ಇಲ್ಲದ ಮಾತುಗಳೇ ಜನರ ಮನ ಗೆಲ್ಲಲಿದೆ. ಮಾತಿನಲ್ಲೇ ವಿವಾದ ಸೃಷ್ಟಿಸುವ ತಾಕತ್ತು, ಕಲೆ ರಕ್ತದಲ್ಲೇ ಇದೆ. ಫೈನಲ್ ವೇದಿಕೆ ಏರುವ ಎಲ್ಲಾ ಆರ್ಹತೆಗಳಿದೆ. ಈ ಮಟ್ಟದ ಸಾಧನೆಯ ಹಿಂದೆ ಶ್ರಮವಿದೆ.

Rapid Rashmi

 1. ಆಡಮ್ ಪಾಶಾ ,ಬೆಂಗ್ಳೂರಿನ ಮೊದಲ Drag Queen ಅನ್ನುವ ಹಿರಿಮೆ. ಒಪನ್ ಆಗಿ ನಾನೊಬ್ಬ ಗೇ ಅನ್ನುವ ಮೂಲಕ, ಆ ವರ್ಗವನ್ನು ಪ್ರತಿನಿಧಿಯಾಗಿ ಮನೆ ಪ್ರವೇಶಿಸಿದ್ದಾರೆ. ಕನ್ನಡಿಗರ ಮನಸ್ಸು ಗೆಲ್ಲುವ ತಾಕತ್ತಿದೆ. ಟಾಸ್ಕ್ ಗಳೇ ಅವರ ಭವಿಷ್ಯವನ್ನು ನಿರ್ಧರಿಸಲಿದೆ.

Adam pasha

 1. ಕವಿತಾಗೌಡ, ಸೀರಿಯಲ್ ಪ್ರಿಯರಿಗೆ ಚಿನ್ನು ಎಂದೇ ಪರಿಚಯ. ಭರತನಾಟ್ಯ ಪ್ರಿಯೆ. ಮಲ್ಲೇಶ್ವರಂ ಹುಡುಗಿ. ಶ್ರೀನಿವಾಸ ಕಲ್ಯಾಣ ಅನ್ನುವ ಸಿನಿಮಾದಲ್ಲಿ ನಟಿಸಿ ಜನರಿಗೆ ಹತ್ತಿರವಾಗಿದ್ದಾರೆ. ಕವಿತಾಗೌಡ ಅವರಿಗಿರುವ ಫೇಮಸ್ ನೋಡಿದರೆ ಬಿಗ್ ಬಾಸ್ ಮನೆಯ ಎಂಟ್ರಿ ಗೇಟ್ ದರ್ಶನ ಶೀಘ್ರದಲ್ಲಿ ಆಗಲಾರದು.

Kavitha Gowda

 1. ಎಬಿ ರವಿ. ಪರಿಚಯ ಹೇಳಲು ಹೆಸರು ಸಾಕು. ಕರ್ನಾಟಕ ಹಾಗೂ ಭಾರತದ ಹೆಸರನ್ನು ಅಂತರ ರಾಷ್ಟ್ರೀಯ ಮಟ್ಟಕ್ಕೆ ಒಯ್ದವರು. ಗೆದ್ದ ಪದಕಗಳನ್ನು ನೆನಪಿಟ್ಟುಕೊಳ್ಳುವುದೇ ಕಷ್ಟ. ಬಾಡಿ ಬಿಲ್ಡಿಂಗ್ ಚಾಂಪಿಯನ್‍ ರವಿ ಎಂಟ್ರಿಯಿಂದ ಚಿನ್ನದ ಗಣಿಯ ಊರು ಖುಷಿ ಪಟ್ಟಿದೆ. ಬಾಡಿ ಬಿಲ್ಡಿಂಗ್ ನಲ್ಲಿ ರವಿ ಪಡೆದಿಲ್ಲದ ಪ್ರಶಸ್ತಿ ಯಾವುದಿದೆ ಹೇಳಿ. ಕಟಾರಿ ಪಾಳ್ಯದ ಬಾಡಿ ಬಿಲ್ಡರ್ ನನ್ನು ಕನ್ನಡಿಗರು ಹೇಗೆ ಸ್ವೀಕರಿಸುತ್ತಾರೆ ಅನ್ನುವ ಕುತೂಹಲವಿದೆ.

AB Ravi

 1. ಶಶಿಕುಮಾರ್, ಕೋಲಾರ ಚಿಂತಾಮಣಿಯ ಮಣ್ಣಿನ ಮಗ. ಕೃಷಿಯಲ್ಲಿ ಎಂಎಸ್ಸಿ,ಬಿಎಸ್ಸಿ ಮಾಡಿರುವ ಶಶಿಕುಮಾರ್, ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಕೈ ತುಂಬಾ ಸಂಬಳ ಪಡೆಯಬಹುದಿತ್ತು. ಆದರೆ ಕರೆದಿದ್ದು ಭೂ ತಾಯಿ. ಹೀಗಾಗಿ ಪ್ರಗತಿಪರ ಕೃಷಿಕನಾಗುವ ಪಣ ತೊಟ್ಟಿದ್ದಾರೆ. ಒಂದಿಷ್ಟು ಜಮೀನನ್ನು ಲೀಸ್ ಪಡೆದುಕೊಂಡು ಕೃಷಿ ಮಾಡುತ್ತಿದ್ದಾರೆ. ಮಾಡರ್ನ್ ರೈತ, ಮಲ್ಟಿ ಟ್ಯಾಲೆಂಟೆಡ್ ಕಾಮನ್ ಮ್ಯಾನ್ ಶಶಿಕುಮಾರ್.

ಕೈಯಲ್ಲಿ ಕೆಸರಿದ್ದರೂ, ಚಾಕಲೇಟ್ ಹಿರೋ ಆಗಲು ಅಡ್ಡಿಯಿಲ್ಲ. ಲವ್ವರ್ ಬಾಯ್ ಲುಕ್ ಇರುವ ಕಾರಣದಿಂದ ಬಿಗ್ ಬಾಸ್ ಮನೆಯಲ್ಲಿ ಒಂದಿಷ್ಟು ದಿನ ಉಳಿಯುವ ಸಾಧ್ಯತೆ ಹೆಚ್ಚಿದೆ. ಮಾತ್ರವಲ್ಲದೆ ಕೃಷಿಕ ಅನ್ನುವ ಕಾರಣದಿಂದ ಕನ್ನಡಿಗರು ಪ್ರೀತಿ ತೋರಿಸುವ ಸಾಧ್ಯತೆಯೂ ಇದೆ. ಬಿಗ್ ಬಾಸ್ ಮನೆಯ ಆಳ ಅಗಲವನ್ನು ಅಧ್ಯಯನ ಮಾಡಿ ಬಂದಿದ್ದಾರೆ. ಹೀಗಾಗಿ ಬಂದಷ್ಟೇ ವೇಗದಲ್ಲಿ ಹಿಂತಿರುಗುವ ಸಾಧ್ಯತೆಗಳಿಲ್ಲ.

Shashikumar

 1. ರೀಮಾ, ಪುತ್ತೂರಿನ ಮುತ್ತು, ಸಾಫ್ಟ್ ವೇರ್ ಎಂಜಿನಿಯರ್. ಕ್ಯೂಟ್ ಬಟ್ ಸೈಕೋ. ಮನೆಯ ಸದಸ್ಯರನ್ನು ಅರ್ಥ ಮಾಡಿಕೊಳ್ಳುವಷ್ಟು ಹೊತ್ತಿಗೆ ಕೋಡಿಂಗ್ ಕೈ ಕೊಟ್ಟರೆ ಅಚ್ಚರಿ ಇಲ್ಲ. ಟೆಸ್ಟಿಂಗ್ ಅಬಿ ಬಾಕಿ ಹೇ ಅನ್ನುವಷ್ಟರಲ್ಲಿ ಸುದೀಪ್ ಎಲಿಮಿನೇಷನ್ ಬಟನ್ ಆನ್ ಮಾಡುವ ಸಾಧ್ಯತೆಗಳು ಹೆಚ್ಚಿದೆ. ಬಿಗ್ ಬಾಸ್ ಮನೆಯಲ್ಲಿ ಮನೋರಂಜನೆ ಪ್ರಮುಖ ಪಾತ್ರ ವಹಿಸುವುದರಿಂದ ಕಂಪ್ಯೂಟರ್ ಗೆದ್ದ ಹುಡುಗಿಗೆ ಕನ್ನಡಿಗರನ್ನು ಗೆಲ್ಲುವುದು ಕಷ್ಟವಾಗಬಹುದು. ಸಾಫ್ಟ್ ವೇರ್ ಕ್ಷೇತ್ರದ ಮಂದಿಯೇ ಈಕೆಯ ಕೈ ಹಿಡಿಯಬೇಕು.

Reema

 1. ನವೀನ್ ಸಜ್ಜು, ಫೈನಲ್ ಪ್ರವೇಶಿಸಿ ವಿನ್ನರ್ ಅಂದುಕೊಂಡರೂ ಅಚ್ಚರಿ ಪಡಬೇಕಾಗಿಲ್ಲ. ವಿನ್ನರ್ ಆಗುವ ಎಲ್ಲಾ ಆರ್ಹತೆಗಳಿದೆ. ಅದ್ಭುತ ಹಾಡುಗಾರ, ಜ್ಯೂನಿಯರ್ ಅಶ್ವಥ್ ಅನ್ನುವ ಕಿರೀಟ, ಅದಕ್ಕಿಂತಲೂ ಒಂದು ತುತ್ತಿನ ಊಟಕ್ಕಾಗಿ ಪರದಾಡಿದ ಕಷ್ಟ ಜೀವಿ. ಕನ್ನಡಿಗರ ಹೃದಯ ಈಗಾಗಲೇ ಗೆದ್ದಿರುವುದರಿಂದ ಬಿಗ್ ಬಾಸ್ ಮನೆಯ ನೀತಿ ನಿಯಮ ಅನುಸರಿಸಿದರೆ ಸಾಕು. ಚಂದನ್ ಶೆಟ್ಟಿಯನ್ನು ಫಾಲೋ ಮಾಡುವ ಎಲ್ಲಾ ಲಕ್ಷಣಗಳಿದೆ. ನವೀನ್ ಸಜ್ಜು ಹೇಗಿದ್ದಾರೋ..ಹಾಗೇ ಇದ್ದರೆ ಕನ್ನಡಿಗರು ಮತ್ತೊಮ್ಮೆ ಮನ ಸೋಲುವುದು ಗ್ಯಾರಂಟಿ.

Navven Sajju

 1. ಸ್ನೇಹ ಅಚಾರ್ಯ ಡಾನ್ಸರ್, ನಟಿ, ನಿರೂಪಕಿ ಅನ್ನುವ ಪಟ್ಟವಿದೆ. ಸಿನಿಮಾವೊಂದರಲ್ಲಿ ಮಾಡಿದ ಅನುಭವವಿದೆ. ಮದುವೆಗೆ ತಯಾರಾಗಿರುವ ಹುಡುಗಿ. ವೇದಿಕೆಯಿಂದ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ಶೈಲಿ ನೋಡಿದರೆ ಮದುವೆಯಾಗಿ ತಡವೇಕೆ ಎಂದು ಜನ ಹೇಳುವ ಸಾಧ್ಯತೆಗಳು ಹೆಚ್ಚಿದೆ. ಹಾಗಂತ ಊಹೆ ಮಾಡುವುದು ಕಷ್ಟ, ಮನೆಯೊಳಗೆ ಹೋದ ಮೇಲೆ ಏನು ಬೇಕಾದರೂ ಆಗಬಹುದು.

Sneha Acharaya

 1. ಆನಂದ್ ಮಾಲಗತ್ತಿ… ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿಯ ನಿವಾಸಿ. BMTCಯಲ್ಲಿ ಕಂಡಕ್ಟರ್. ಬೆಂಗಳೂರಿನ ಡಿಪೋ 38ರ ಸುತ್ತ ಮುತ್ತ ಅಂದರೆ ಅತ್ತಿಬೆಲೆ ದಾರಿಯಲ್ಲಿ ಇವರನ್ನು ನೋಡಿರುವ ಸಾಧ್ಯತೆಗಳಿದೆ. 25 ವರ್ಷದ ಯುವಕ. ಸಹೋದ್ಯೋಗಿಯನ್ನೇ ಪ್ರೀತಿಸಿದ ಮದುವೆಯಾದ ರಸಿಕ.

ಈಗ್ಲೇ ಜನ ಒಳ್ಳೆ ಹುಡುಗ ಪ್ರಥಮನ ಸಂಬಂಧಿಕ ಪಟ್ಟ ಕಟ್ಟಿದ್ದಾರೆ. ತನ್ನತನವನ್ನು ರೂಢಿಸಿಕೊಂಡರೆ, ಒಂದಿಷ್ಟು ದಿನ ಮನೆಯಲ್ಲಿ ಉಳಿಯುವ ತಾಕತ್ತಿದೆ. ಜನ ಸಾಮಾನ್ಯ ಅನ್ನುವ ಪ್ರೀತಿಯಿಂದ ಕನ್ನಡಿಗರು ಕೆಲವು ವಾರದ ಬದಲಿಗೆ ಹಲವು ವಾರ ಕೈ ಹಿಡಿದರೆ ಅಚ್ಚರಿ ಇಲ್ಲ. ಒಂದು ವಾರ ಕಳೆಯುವಷ್ಟರಲ್ಲಿ ಅಭಿಮಾನಿ ಬಳಗ ಕಟ್ಟಿಕೊಂಡರೆ ಅಚ್ಚರಿ ಇಲ್ಲ. ಬಿಗ್ ಬಾಸ್ ಮನೆಗೆ ಎಂಟ್ರಿ ಟಿಕೆಟ್ ತಗೊಂಡ್ರು BMTC ಕಂಡಕ್ಟರ್‍ ಆನಂದ್… ಜನ ಟಿಕೆಟ್ ಕೊಡ್ತಾರ ಗೊತ್ತಿಲ್ಲ.

Ananad Malagathhi

 1. ನಯನಾ ಪುಟ್ಟ ಸ್ವಾಮಿ, ರಿಯಾಲಿಟಿ ಶೋ ಹೊಸ ಹೆಸರಲ್ಲ. ಮದುವೆಯನ್ನು adventure ಆಗಿ ತೆಗೆದುಕೊಂಡ ಹುಡುಗಿ. ದಾಂಪತ್ಯ ಜೀವನ ರಸ ಘಳಿಗೆ ಸವಿಯುವ ಹೊತ್ತಿಗೆ ಬಿಗ್ ಬಾಸ್ ಕರೆದಿದೆ. ಮದುವೆಯಾದ 3 ತಿಂಗಳಲ್ಲಿ ವಿರಹ ವೇದನೆ ಬಂದಿದೆ. Adventure ಕ್ಷೇತ್ರದಲ್ಲಿ ಸಾಕಷ್ಟು ಸಾಹಸ ಮಾಡಿರುವ ಹುಡುಗಿಗೆ. ಬಿಗ್ ಬಾಸ್ ಕೊಟ್ಟ ಕಾಸಿನಲ್ಲಿ ದೇಶ ಸುತ್ತುವ ಹುಚ್ಚಿದೆ. ಪಾರ್ಟಿ ಹುಚ್ಚು ಹೆಚ್ಚಿದೆಯಂತೆ.

ಸಿನಿಮಾ, ಸೀರಿಯಲ್ ಗಳಲ್ಲಿ ಕ್ಯಾಮಾರ ಎದುರಿಸಿದ ಅನುಭವವಿದೆ. ಟಾಸ್ಕ್ ಗಳನ್ನು ನಿಭಾಯಿಸುವ ತಾಕತ್ತಿದೆ. ವೀಕ್ಷಕ ಪ್ರಭುಗಳು ತುಂಬಾ ದಿನ ಸಹಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ. ವಿರಹ ವೇದನೆ ಯಾಕೆ ಮೇಡಂ ಅಂದ್ರು ಅಚ್ಚರಿ ಇಲ್ಲ. ಫೇವರಿಟ್ ಅನ್ನಿಸಿಕೊಳ್ಳುವ ಸಾಧ್ಯತೆ ವಿರಳ.

Nayana Puttaswamy

 1. ಧನ ರಾಜ್ , ಕರಾವಳಿಯ ಹುಡುಗ. ಕುಂದಾಪುರದಿಂದ ಬಂದು ಬೆಂಗಳೂರಿನಲ್ಲಿ ನೆಲೆ ಹುಡುಕುತ್ತಿದ್ದಾರೆ. ಪ್ರತಿಭೆ ತುಂಬಿದೆ, ಆದರೆ ಅದೃಷ್ಟ ಅನ್ನುವುದು ಬಾಗಿಲು ತೆರೆದಿಲ್ಲ. ಕನ್ನಡದ ನಟರು ಹಾಗೂ ರಾಜಕಾರಣಿಗಳನ್ನು ನಾಚಿಸುವಂತೆ ಮಿಮಿಕ್ರಿ ಮಾಡಬಲ್ಲ ತಾಕತ್ತಿದೆ. ಕಂಠ ಅದ್ಭುತವಾಗಿದೆ ಆದರೆ ಅದು ಕಾಂಚಾಣ ತಂದುಕೊಡಲಿಲ್ಲ. ನಟ, ಡಬ್ಬಿಂಗ್, ವಾಯ್ಸ್ ಓವರ್‍ ಆರ್‍ಟಿಸ್ಟ್ ಧನರಾಜ್ 10 ವರ್ಷ ಪ್ರೀತಿಸಿ 7 ವರ್ಷದ ಹಿಂದೆ ಮದುವೆಯಾಗಿದ್ದಾರೆ. ಪತ್ನಿ ಸಾಫ್ಟ್ ವೇರ್ ಇಂಜಿನಿಯರ್.

ಮನೆಯಲ್ಲಿ ರಂಜಿಸುವ ತಾಕತ್ತಿದೆ, ಆದರೆ ಟಾಸ್ಕ್ ಗಳನ್ನು ಹೇಗೆ ನಿಭಾಯಿಸುತ್ತಾರೆ ಅನ್ನುವುದು ಗೊತ್ತಿಲ್ಲ. ಕನ್ನಡಿಗರು ಕೈ ಹಿಡಿಯುವ ಎಲ್ಲಾ ಸಾಧ್ಯತೆಗಳಿದೆ.

Dhanraj

 

 

Advertisements

3 Comments on “ಯಾರು ಹಿತವರು ನಿಮಗೆ … ಇವರೇ ಈ ಬಾರಿ ಬಿಗ್ ಬಾಸ್ ಮನೆಗೆ ಹೋದವರು…

 1. Pingback: ನಾನು ಕನ್ನಡದವಳು, ಕರ್ನಾಟಕದವಳು : ಅನಿತಾ ಕುಮಾರಸ್ವಾಮಿ :ಪತಿ ಪತ್ನಿಯ ಹೇಳಿಕೆಗೆ ತಾಳೆಯೇ ಇಲ್ಲ – torrentspree

 2. Pingback: ಭೇಷ್ ಕವಿತಾ :ಬಿಗ್ ಬಾಸ್ ಮನೆಯ ಬ್ಯಾಡ್ ಬಾಯ್ ವಿರುದ್ಧ ಕಾನೂನು ಹೋರಾಟ ಶುರುವಿಟ್ಟ ಚಿನ್ನು – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: