ಮಂಗಳೂರು : ಬಿಗ್ ಬಾಸ್ ಸ್ಪರ್ಧಿ ಶುಭ ಪೂಂಜಾ ವಿವಾಹ ಈ ಹಿಂದೆಯೇ ನೆರವೇರಬೇಕಿತ್ತು. ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ವಿವಾಹ ಕಾರ್ಯಕ್ರಮ ಬಿಗ್ ಬಾಸ್ ಮುಗಿದ ಬಳಿಕ ಎನ್ನಲಾಗಿತ್ತು. ಆದರೆ ಆದ್ಯಾಕೋ ಕಾಲ ಕೂಡಿ ಬಂದಿರಲಿಲ್ಲ. ಈ ನಡುವೆ ಅದ್ದೂರಿಯಾಗಿ ವಿವಾಹ ಮಾಡಿಕೊಳ್ಳಲು ಬಯಸಿದ್ದ ಶುಭ ಇದಕ್ಕಾಗಿ ಸಿದ್ದತೆಗಳನ್ನು ಕೂಡಾ ಮಾಡಿಕೊಂಡಿದ್ದರು.
ಆದರೆ ಕೊರೋನಾ ಮೂರನೇ ಅಲೆಯ ಕಾರಣದಿಂದ ಮತ್ತೆ ಲಾಕ್ ಡೌನ್ ಭೀತಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ಶುಭ ಪೂಂಜಾ ಸರಳವಾಗಿ ವಿವಾಹವಾಗಿದ್ದಾರೆ.ಮಜಲಬೆಟ್ಟುಬೀಡುವಿನಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನೆರವೇರಿದ್ದು,ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರು ಮಾತ್ರ ಉಪಸ್ಥಿತರಿದ್ದರು. ಈ ಬಗ್ಗೆ ಶುಭ ಅವರೇ ಬರೆದುಕೊಂಡಿದ್ದು. ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು, ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ ಅಂದಿದ್ದಾರೆ.
Discussion about this post