ಕನ್ನಡದ ಅದ್ಯಾವ ನಟನಿಗೂ ಈ ಹಿಂದೆ ಈ ಮಟ್ಟಿಗೆ ಪರಭಾಷೆಗಳಲ್ಲಿ ಇಷ್ಟೊಂದು ಅದ್ದೂರಿಯ ಸ್ವಾಗತ ಸಿಕ್ಕಿರಲಿಲ್ಲ.
ಆದರೆ ಇದೀಗ ಕೆಜಿಎಫ್ ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್ ಇಂಡಿಯನ್ ಸ್ಟಾರ್ ಆಗಿದ್ದಾರೆ.
ಹಾಗಂತ ಕೆಜಿಎಫ್ ಪ್ರಾರಂಭವಾದ ದಿನಗಳಲ್ಲಿ ಈ ಚಿತ್ರ ಇಷ್ಟೊಂದು ಕುತೂಹಲ ಕೆರಳಿಸಬಹುದು ಎಂದು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ.
ಇದೊಂದು ವಿಭಿನ್ನ ಚಿತ್ರ, ಬೇರೆಯದೇ ರೇಂಜ್ ಚಿತ್ರ ಎಂದು ಯಶ್ ಪದೇ ಪದೇ ಹೇಳಿದರೂ ಯಾರೊಬ್ಬರೂ ಕಿವಿಗೆ ಹಾಕಿಕೊಂಡಿರಲಿಲ್ಲ. ಯಾವಾಗ ಟೀಸರ್ ಬಿಡುಗಡೆಯಾಯ್ತೋ, ಕೆಜಿಎಫ್ ಹವಾ ಪ್ರಾರಂಭವಾಯ್ತು.
ಹಿಂದಿ, ತೆಲುಗು, ತಮಿಳು ಭಾಷೆಗಳಿಗೆ ಡಬ್ ಆಗುತ್ತಿರುವ ಚಿತ್ರದ ಹಿಂದೆ ಘಟಾನುಘಟಿಗಳು ಕಾಣಿಸಿಕೊಂಡರು.
ಹಿಂದಿಯಲ್ಲಿ ನಟ , ನಿರ್ದೇಶಕ ಫರ್ಹಾನ್ ಅಖ್ತರ್ ಅವರ ಎಕ್ಸೆಲ್ ಎಂಟರ್ ಟೈನ್ ಮೆಂಟ್ ಸಂಸ್ಥೆ ಕೆಜಿಎಫ್ ಹಿಂದೆ ನಿಂತರೆ, ತೆಲುಗಿನಲ್ಲಿ ರಾಜಮೌಳಿ ಅವರ ವರಾಹಿ ಸಂಸ್ಥೆ ಹಾಗೂ ತಮಿಳಿನಲ್ಲಿ ವಿಶಾಲ್ ಹಕ್ಕುಗಳು ಪಡೆದುಕೊಂಡಿದ್ದಾರೆ.
ಇನ್ನೇನು ಚಿತ್ರ ಬಿಡುಗಡೆಯಾಗಬೇಕು ಅನ್ನುವಷ್ಟರಲ್ಲಿ ಸಂಕಷ್ಟ ಎದುರಾಗಿದೆ. ಅತ್ತ ತಮಿಳುನಾಡಿನಲ್ಲಿ ಡಬ್ಬಿಂಗ್ ಚಿತ್ರ ಇಲ್ಯಾಕೆ ಎಂದು ಕ್ಯಾತೆ ಪ್ರಾರಂಭವಾಗಿದೆ. ಕನ್ನಡದಲ್ಲಿ ಡಬ್ಬಿಂಗ್ ಅವಕಾಶವಿಲ್ಲ ಅಂದ ಮೇಲೆ, ಕನ್ನಡದ ಡಬ್ಬಿಂಗ್ ನಮಗ್ಯಾಕೆ ಅನ್ನುವ ಮಾತು ಕೇಳಿ ಬಂದಿದೆ.
ಮತ್ತೊಂದು ದುಷ್ಮನ್ ಕಿದರ್ ಹೇ ಅಂದ್ರೆ ಬಗಲ್ ಮೇ ಹೇ ಅನ್ನುವಂತೆ, ಕನ್ನಡದ ಹುಡುಗನ ಚಿತ್ರಕ್ಕೆ ಕನ್ನಡಿಗನೇ ಅಡ್ಡಿಯಾಗಿದ್ದರೆ.
ನ್ಯಾಯಾಲಯಕ್ಕೆ ಹೋಗುವ ಎಲ್ಲಾ ಅಧಿಕಾರ ಅವರಿಗಿತ್ತು, ಆದರೆ ಅದು ಚಿತ್ರ ಪ್ರಾರಂಭವಾದ ಸಂದರ್ಭದಲ್ಲೋ, ಟೀಸರ್ ಬಿಡುಗಡೆಯಾದ ತಕ್ಷಣವೋ ಹೋಗಬೇಕಾಗಿತ್ತು. ಆದರೆ ಬದಲಾಗಿ ಚಿತ್ರ ಬಿಡುಗಡೆಗೆ ಇನ್ನೇನು ಕೆಲವೇ ಗಂಟೆಗಳು ಅನ್ನುವಷ್ಟರಲ್ಲಿ ತಡೆಯಾಜ್ಞೆ ತಂದಿರುವುದು ಸರಿಯಲ್ಲ.
ನಿರ್ಮಾಪಕರ ಬಳಿ ಬೇಜಾನ್ ದುಡ್ಡಿರಬಹುದು, ಆದರೆ ಯಶ್ ಹಾಗೂ ಚಿತ್ರ ತಂಡದ ಶ್ರಮಕ್ಕೂ ಬೆಲೆ ಕೊಡಬೇಕಾಗಿತ್ತು. ಕನ್ನಡದ ಹುಡುಗನೊಬ್ಬ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಾನೆ ಅಂದಾಗ ಬೆನ್ನು ತಟ್ಟಬೇಕಿತ್ತು ಹೊರತು ಕಾಲೆಳೆಯಬಾರದಿತ್ತು.
ಮತ್ತೊಂದು ಕಡೆ ಕೆಜಿಎಫ್ ಚಿತ್ರಕ್ಕೆ ಸಂಕಷ್ಟ ಬರಲು ದೇವರ ಮುನಿದಿರುವುದೇ ಕಾರಣ ಎನ್ನಲಾಗುತ್ತಿದೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪ್ರದಾಯ ಮುರಿದು ಯಶ್ ಬಂದಿರುವುದರಿಂದಲೇ ಈ ಸಮಸ್ಯೆ ಉಂಟಾಗಿದೆಯಂತೆ ಅನ್ನುವುದು ಆಸ್ತಿಕರ ಮಾತು.
ಅದರ ಮಾಹಿತಿ ಈ ಲಿಂಕ್ ನಲ್ಲಿದೆ.
ಹೆಲಿಕಾಪ್ಟರ್ ಮೂಲಕ ಕುಕ್ಕೆ ಪ್ರವೇಶ : ಯಶ್ ಗೆ ಕಾದಿದೆಯೇ ಸಂಕಷ್ಟ…?
ಏನಿವೇ ಚಿತ್ರ ತಂಡ ನಾಳೆ ಚಿತ್ರ ಬಿಡುಗಡೆ ಮಾಡ್ತೀವಿ ಅಂದಿದೆ. ಒಳ್ಳೆಯದಾಗ್ಲಿ ಅನ್ನುವುದೇ ನಮ್ಮೆಲ್ಲರ ಹಾರೈಕೆ.
Discussion about this post