Advertisements

ಕೆಜಿಎಫ್ ಹಂಚಿಕೆ ಹಕ್ಕು ಪಡೆದುಕೊಂಡ ರವೀನಾ ಟಂಡನ್ ಗಂಡ.

ಯಶ್ ನಟನೆಯ ‘ಕೆಜಿಎಫ್’ ಚಿತ್ರ ನ.16ರಂದು ಬಿಡುಗಡೆ ಆಗಲಿದೆ. ಈ ಬಾರಿ ಯಶ್ ನಟನೆಯ ಸಿನಿಮಾ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲೂ ತೆರೆಕಾಣುತ್ತಿರುವುದು ವಿಶೇಷ.

ವಿಶೇಷ ಅಂದರೆ ಬಾಲಿವುಡ್ನ ಖ್ಯಾತ ವಿತರಕ ಅನಿಲ್ ತಡಾನಿ ‘ಕೆಜಿಎಫ್’ ಚಿತ್ರದ ಹಿಂದಿ ಅವತರಣಿಕೆಯ ಹಂಚಿಕೆ ಹಕ್ಕನ್ನು ಪಡೆದಿದ್ದಾರೆ.

ಅನಿಲ್ ಜೊತೆ ಮಾತುಕತೆ ನಡೆಸಲು, ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಂಗದೂರು, ಕಾರ್ತಿಕ್ ಗೌಡ ಮುಂಬೈಗೆ ತೆರಳಿದ್ದರು. ಚಿತ್ರದ ಹಂಚಿಕೆ ಬಗೆಗಿನ ಮಾತುಕತೆ ಯಶಸ್ವಿಯಾಗಿದ್ದು, ಹಿಂದಿ ಭಾಷೆಯಲ್ಲಿ ಚಿತ್ರವನ್ನು ವಿತರಣೆ ಮಾಡಲು ಅನಿಲ್ ಒಪ್ಪಿಕೊಂಡಿದ್ದಾರಂತೆ.

ಬಾಲಿವುಡ್ ನಲ್ಲಿ ಅನಿಲ್ ಗೆ ದೊಡ್ಡ ಮಟ್ಟದ ಹೆಸರಿದ್ದು, ಹಿಂದಿಯಲ್ಲಿ ‘ಕೆಜಿಎಫ್’ಗೆ ದೊಡ್ಡ ಓಪನಿಂಗ್ ಸಿಗುವ ಸಾಧ್ಯತೆ ಇದೆ.

raveena tandon

ಅಂದಹಾಗೆ, ಅನಿಲ್ ಬಾಲಿವುಡ್ನ ಖ್ಯಾತ ನಟಿ ರವೀನಾ ಟಂಡನ್ ಅವರ ಪತಿ.

Advertisements

Leave a Reply

%d bloggers like this: