ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಶುಭಾರಂಭ ಮಾಡಿದೆ. ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾರತ ಚೊಚ್ಚಲ ಪದಕ ಮುಡಿಗೇರಿಸಿಕೊಂಡಿದೆ. 49 ಕೆಜಿ ವಿಭಾಗದ ಮಹಿಳಾ ವೇಟ್ ಲಿಫ್ಟಿಂಗ್ ನಲ್ಲಿ ಮೀರಾ ಬಾಯಿ ಚಾನು ಬೆಳ್ಳಿ ಗೆದ್ದಿದ್ದಾರೆ.
ಈ ಮೂಲಕ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ವೇಟ್ ಲಿಫ್ಟರ್ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೀನಾದ ಝಿಹುಯಿ ಸ್ನಾಚ್ ಹಾಗೂ ಕ್ಲೀನ್ ಮಚ್ಚು ಜೆರ್ಕ್ ಎರಡೂ ವಿಭಾಗದಲ್ಲೂ ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ.
ಚಾನು 84 ಮತ್ತು 87 ಕೆಜಿಯನ್ನು ಯಶಸ್ವಿಯಾಗಿ ಎತ್ತಿದರು. ಆದರೆ 89 ಕೆಜಿ ಭಾರ ಎತ್ತಲು ವಿಫಲರಾದರು. ಹೀಗಾಗಿ ಚೀನಾದ ಝಿಹುಯಿ ನಂತರದ ಸ್ಥಾನವನ್ನು ಪಡೆದರು.
ಇದನ್ನೂ ಓದಿ : ಟೋಕಿಯೋ 2020 : ಭಾರತಕ್ಕೆ ಮತ್ತೊಂದು ಶುಭ ಸುದ್ದಿ : ಕ್ವಾರ್ಟರ್ ಫೈನಲ್ ಪ್ರವೇಶಿಸಿದ ದೀಪಿಕಾ – ಪ್ರವೀಣ್ ಜೋಡಿ
ಇದಕ್ಕೂ ಮುನ್ನ ಭಾರತದ ಹಾಕಿ ತಂಡ ನ್ಯೂಜಿಲೆಂಡ್ ಅನ್ನು ಮಣಿಸಿತ್ತು. ಬಿಲ್ಲುಗಾರಿಕೆಯಲ್ಲಿ ಅರ್ಚನ ಹಾಗೂ ಪ್ರವೀಣ್ ಕೂಡಾ ಸಾಧನೆ ಮಾಡಿದ್ದರು. 10 ಮೀಟರ್ ನ ಪುರುಷರ ಏರ್ ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಸೌರಭ್ ಜೌಧರಿ ಫೈನಲ್ ಪ್ರವೇಶಿಸಿದ್ದಾರೆ.
ಇದನ್ನೂ ಓದಿ : ಟೋಕಿಯೋ 2020 : ಭಾರತ ಹಾಕಿ ತಂಡಕ್ಕೆ ರೋಚಕ ಜಯ
ಹೀಗಾಗಿ ಈ ಬಾರಿ ಭಾರತ ಸಾಕಷ್ಟು ಪದಕಗಳನ್ನು ನಿರೀಕ್ಷಿಸುತ್ತಿದೆ. ಇಂದು ಸ್ಮರಣೀಯ ಗಳಿಗೆಯಲ್ಲಿ ಬೆಳ್ಳಿ ಪದಕ ಗಳಿಸುವ ಮೂಲಕ ಚಾನು ಅವರು ಒಲಿಂಪಿಕ್ ಗೇಮ್ ನ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಪದಕ ಗಳಿಸಿದ ಎರಡನೇ ಭಾರತೀಯರಾಗಿದ್ದಾರೆ. 2000ನೇ ಇಸವಿಯಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಒಲಿಂಪಿಕ್ ಗೇಮ್ ನಲ್ಲಿ 69 ಕೆ ಜಿ ವಿಭಾಗದಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗಳಿಸಿದ್ದರು.
Discussion about this post