ಬೆಂಗಳೂರು : ಕೊರೋನಾ ಸೋಂಕಿನ ಎರಡನೆಯ ಅಲೆಯ ಕರ್ನಾಟಕದಲ್ಲಿ ಏರಲಾರಂಭಿಸಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಏರುತ್ತಿದೆ.
ಈ ನಡುವೆ ನಟ ದೇವರಾಜ್ ಮನೆಗೂ ಕೊರೋನಾ ಸೋಂಕಿನ ಕಂಟಕ ಪ್ರಾರಂಭವಾಗಿದೆ. ನಟ ಪ್ರಜ್ವಲ್ ದೇವರಾಜ್ ಹಾಗೂ ಸೊಸೆ ರಾಗಿಣಿ ಕೊರೋನಾ ಸೋಂಕಿತರಾಗಿದ್ದಾರೆ.
ಈ ಬಗ್ಗೆ ಪ್ರಜ್ವಲ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ನಮಗಿಬ್ಬರಿಗೆ ಕೊರೋನಾ ಸೋಂಕು ತಗುಲಿದೆ. ವೈದ್ಯರು ಸೂಚಿಸಿರುವ ಮೆಡಿಸಿನ್ ತೆಗೆದುಕೊಳ್ಳುತ್ತಿದ್ದೇವೆ. ಇಬ್ಬರೂ ಜೊತೆಯಾಗಿದ್ದು ಯಾರು ಕೂಡಾ ಆತಂಕಕ್ಕೆ ಒಳಗಾಗಬೇಕಾಗಿಲ್ಲ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು ಅಂದಿದ್ದಾರೆ.
ಫೆಬ್ರವರಿ 5 ರಂದು ಪ್ರಜ್ವಲ್ ಅಭಿನಯದ ಇನ್ಸ್ ಪೆಕ್ಟರ್ ವಿಕ್ರಮ ಬಿಡುಗಡೆಯಾಗಿತ್ತು. ಆಗ ಕೊರೋನಾ ಅಬ್ಬರ ಒಂದಿಷ್ಟು ಕಡಿಮೆಯಾಗಿತ್ತು. ಹಾಗಾಗಿ ಕೊರೋನಾ ನಿಯಮಗಳ ಉಲ್ಲಂಘನೆಯಾಗಿದ್ದರೂ ಯಾರೊಬ್ಬರೂ ತಲೆ ಕೆಡಿಸಿಕೊಂಡಿರಲಿಲ್ಲ.
ಈ ನಡುವೆ ಎರಡನೇ ಅಲೆಯ ಹೊಡೆತಕ್ಕೆ ಸೆಲೆಬ್ರೆಟಿಗಳೇ ಹೆಚ್ಚಾಗಿ ಸಿಲುಕಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಸಿಂಪಲ್, ಕೊರೋನಾ ನಿಯಮಗಳನ್ನು ಉಲ್ಲಂಘಿಸುವುದರಲ್ಲಿ ಇವರೇ ಮೊದಲ ಸಾಲಿನಲ್ಲಿದ್ದಾರೆ.
ಮಾಸ್ಕ್, ಸಾಮಾಜಿಕ ಅಂತರಗಳಿಲ್ಲದೆ ಸಿನಿಮಾ ಪ್ರಚಾರದ ಕಾರ್ಯಗಳು ನಡೆದರೆ ಇನ್ನೇನು ಆಗಲು ಸಾಧ್ಯ. ಸೆಲೆಬ್ರೆಟಿಗಳು ಕಾಸಿರುವ ಮಂದಿ ದುಬಾರಿ ಚಿಕಿತ್ಸೆಯಾದರೂ ಪಡೆಯುತ್ತಾರೆ. ಆದರೆ ಬಡವರ ಕಥೆಯೇನಾಗಬೇಕು ಹೇಳಿ.
ಮೊದಲ ಅಲೆಯ ಸಂದರ್ಭದಲ್ಲಿ ಬೆಡ್ ಗಳು ಸಿಗದೇ ಬಡವರು ಪರದಾಡಿದ್ದನ್ನು ಎಲ್ಲರೂ ಮರೆತು ಬಿಟ್ಟಿರುವುದೇ ಈ ಎಲ್ಲಾ ಎಡವಟ್ಟುಗಳಿಗೆ ಕಾರಣ.
Discussion about this post