ಸಂಜೆ 5.14 ರಿಂದ 5.17ರ ಅವಧಿಯ ಮೂರು ನಿಮಿಷ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಲಿದೆ. ಕಳೆದ ವರ್ಷ ಪ್ರಕೃತಿಯಲ್ಲಾದ ಬದಲಾವಣೆಗಳಿಂದ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿರಲಿಲ್ಲ.
ಬೆಂಗಳೂರು : ಮಕರ ಸಂಕ್ರಾತಿಯ ಕೌತುಕ ಎಂದೇ ಬಣ್ಣಿಸಲಾಗಿರುವ ಸೂರ್ಯರಶ್ಮಿ ಅಭಿಷೇಕ ಇಂದು ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಸಂಜೆ 5.14 ರಿಂದ 5.17ರ ಅವಧಿಯಲ್ಲಿ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಲಿದೆ. ಕೊರೋನಾ ಆತಂಕದ ಕಾರಣ ಈ ಬಾರಿಯೂ ಸಾರ್ವಜನಿಕರಿಗೆ ಸೂರ್ಯಾಭಿಷೇಕ ನೋಡುವ ಭಾಗ್ಯ ಇರೋದಿಲ್ಲ.
ಈ ಹಿಂದಿನ ವರ್ಷಗಳಲ್ಲಿ ದೇವಾಲಯದ ಮುಂಭಾಗದಲ್ಲಿ ದೊಡ್ಡ ಪರದೆ ಅಳವಡಿಸಿ ಸಾರ್ವಜನಿಕರಿಗೆ ಈ ಅಪರೂಪದ ಕ್ಷಣವನ್ನು ತುಂಬಿಕೊಳ್ಳಲು ಅವಕಾಶ ನೀಡಲಾಗುತ್ತಿತ್ತು. ಆದರೆ ಕೊರೋನಾ ಮಾರ್ಗಸೂಚಿ ಜಾರಿಯಲ್ಲಿರುವ ಕಾರಣ ಈ ಬಾರಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಆದರೆ ಜನವರಿ 15 ರಂದು ಭಕ್ತರಿಗೆ ಗವಿಗಂಗಾಧರೇಶ್ವರನ ದರ್ಶನಕ್ಕೆ ಅವಕಾಶವಿದ್ದು, ಎರಡು ಡೋಸ್ ಪಡೆದ ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ಕೊಡಬಹುದಾಗಿದೆ.
Discussion about this post