ಮದುವೆಗೂ ಮುಂಚೆ Deepika Padukone ಬುರ್ಖಾ ಧರಿಸಿ ಓಡಾಡುತ್ತಿದ್ದೆ ಅನ್ನೋ ಶಾಕಿಂಗ್ ವಿಚಾರ ಬಹಿರಂಗವಾಗಿದೆ. ಬಾಲಿವುಡ್ ನಟಿ Deepika Padukoneಯ ಬುರ್ಖಾ ರಹಸ್ಯವನ್ನು ಅವರ ಆತ್ಮೀಯರೇ ರೀವಿಲ್ ಮಾಡಿದ್ದಾರೆ. ಜೊತೆಗೆ ಅದಕ್ಕೆ ಕಾರಣವನ್ನೂ ಕೂಡಾ ಕೊಟ್ಟಿದ್ದಾರೆ.
2018ರ ನವೆಂಬರ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಜೋಡಿ ಇದೀಗ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಮದುವೆಯ ದಿನಗಳನ್ನು ಡಿಸೈನರ್ ಒಬ್ಬರು ನೆನಪಿಸಿಕೊಂಡಿದ್ದಾರೆ. ದೀಪಿಕಾ ಮತ್ತು ರಣವೀರ್ 2018ರ ನವೆಂಬರ್ನಲ್ಲಿ ಮದುವೆ ಆಗುತ್ತಾರೆ ಅನ್ನುವ ಸುದ್ದಿ ಬಹಿರಂಗವಾಗಿತ್ತು. ಹೀಗಾಗಿ ಮಾಧ್ಯಮಗಳ ಕಣ್ಣು ತಪ್ಪಿಸಿ ಓಡಾಡುವುದಕ್ಕೆ ಅವರಿಗೆ ಸಾಧ್ಯವೇ ಇರಲಿಲ್ಲ.
ಹೀಗಾದ್ರೆ ಮದುವೆ ತಯಾರಿ ಮಾಡುವುದು ಛಾಲೆಂಜ್ ಆಗಿತ್ತು. ಬಟ್ಟೆ, ಬಂಗಾರ ಎಂದು ಹಲವು ಅಂಗಡಿ ಸುತ್ತಾಡಲು ಸಾಧ್ಯವೇ ಇರಲಿಲ್ಲ. ಈ ವೇಳೆ ಡಿಸೈನರ್ ಸಬ್ಯಸಾಚಿ ಕೊಟ್ಟ ಸಲಹೆ ದೀಪಿಕಾ ಅವರಿಗೆ ಹಿಡಿಸಿದೆ. ಬುರ್ಖಾ ಧರಿಸಿ ಓಡಾಡಿದ್ರೆ ಯಾರೂ ಕೂಡಾ ಗುರ್ತು ಹಿಡಿಯೋದಿಲ್ಲ ಎಂದು ಸಲಹೆ ಕೊಟ್ಟ ಸಬ್ಯಸಾಚಿ ತಾವೇ ದೀಪಿಕಾ ಸಲುವಾಗಿ ಬುರ್ಖಾ ಡಿಸೈನ್ ಮಾಡಿದ್ದಾರೆ. ಬೇರೆ ಅವರು ಈ ಜೋಡಿಯ ಮದುವೆ ಕಾಸ್ಟ್ಯೂಮ್ ವಿನ್ಯಾಸಗೊಳಿಸಿದ್ದರು. ಆ ವೇಳೆ ಬುರ್ಕಾ ಧರಿಸುವುದು ದೀಪಿಕಾ ಪಡುಕೋಣೆ ಅವರಿಗೆ ಅನಿವಾರ್ಯ ಆಗಿತ್ತು.
ಅಂದ ಹಾಗೇ Deepika Padukone ಅವರ ಬುರ್ಖಾ ರಹಸ್ಯವನ್ನು ಬಹಿರಂಗ ಮಾಡಿದ್ದು ಕೂಡಾ ಇದೇ ಸಬ್ಯಸಾಚಿ, ಮಾಧ್ಯಮವೊಂದಕ್ಕೆ ಕೊಟ್ಟಿರುವ ಸಂದರ್ಶನದಲ್ಲಿ ಸಬ್ಯಸಾಚಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.. ಈ ವಿಷಯ ಈ ವರ್ಷದ ಮೇ ತಿಂಗಳಲ್ಲಿ ಸಬ್ಯಸಾಚಿ ಬಹಿರಂಗ ಮಾಡಿದ್ದರು. ಇದೀಗ ಮತ್ತೆ ಹಳೆಯ ಟಾಪಿಕ್ ವೈರಲ್ ಆಗುತ್ತಿದೆ.
Discussion about this post