ವಿವೋ ಮತ್ತು ಒಪ್ಪೋ ಭಾರತಕ್ಕೆ ಕಾಲಿಟ್ಟ ಸಂದರ್ಭದಲ್ಲೇ ಎಚ್ಚರಿಕೆ ನೀಡಲಾಗಿತ್ತು. ಒಂದಲ್ಲ ಒಂದು ದಿನ ಭಾರತಕ್ಕೆ ಈ ಕಂಪನಿಗಳು ಮೋಸ ಮಾಡಲಿದೆ. ಹೇಳಿ ಕೇಳಿ ಇದು ಚೈನಾ ಕಂಪನಿ ( vivo oppo ) ಎಚ್ಚರವಾಗಿರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು. ಹಾಗೇ ಆಗಿದೆ
ತೆರಿಗೆ ವಂಚನೆ ಮತ್ತು ಅಕ್ರಮ ಹಣದ ವರ್ಗಾವಣೆ ಆರೋಪದಲ್ಲಿ ಚೀನಾ ಮೂಲದ ವಿವೋ ( vivo oppo )ಕಂಪನಿಯ ಮೇಲೆ ಇಡಿ ದಾಳಿ ನಡೆಸಿತ್ತು. ಸಂಸ್ಥೆಗೆ ಸೇರಿದ 44 ಸ್ಥಳಗಳಲ್ಲಿ ದಾಳಿ ನಡೆದ ಬೆನ್ನಲ್ಲೇ ಅದರ ಇಬ್ಬರು ನಿರ್ದೇಶಕರು ಭಾರತದಿಂದ ಜಾಗ ಖಾಲಿ ಮಾಡಿದ್ದರು. ಇದೀಗ ಚೀನಾದ ಕಂಪನಿಯಾಗಿರುವ ಒಪ್ಪೋ ಇಂಡಿಯಾ ಕೂಡಾ ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಅದು ಕೂಡಾ ಸಣ್ಣ ಮೊತ್ತವಲ್ಲ ಬರೋಬ್ಬರಿ 4,389 ಕೋಟಿ ರೂಪಾಯಿ
ಈ ಬಗ್ಗೆ ಡಿ.ಆರ್.ಐ ( Directorate of Revenue Intelligence ) ಮಾಹಿತಿಯನ್ನು ಹಂಚಿಕೊಂಡಿದ್ದು, ಮೇ ತಿಂಗಳಲ್ಲಿ ಒಪ್ಪೋ ಸಂಸ್ಥೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ದೊಡ್ಡ ಮೊತ್ತದ ವಂಚನೆ ಬೆಳಕಿಗೆ ಬಂದಿದೆ ಅಂದಿದೆ. ಒಪ್ಪೋ ಇಂಡಿಯಾ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದ ಸಂಸ್ಥೆ ಭಾರತದಲ್ಲಿ ತೆರಿಗೆ ತಪ್ಪಿಸುವ ನಿಟ್ಟಿನಲ್ಲಿ 62,476 ಕೋಟಿ ಹಣವನ್ನು ಚೀನಾ ಸೇರಿದಂತೆ ಬ್ರೆ ಬೇರೆ ದೇಶಗಳಿಗೆ ರವಾನಿಸಿದೆ.
ಇದನ್ನೂ ಓದಿ : KRS Party : ಸಚಿವ ಸೋಮಣ್ಣ ಬೆಂಬಲಿಗರ ಗೂಂಡಾಗಿರಿ : ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ
ಒಪ್ಪೋ ಇಂಡಿಯಾ ಪರವಾನಿಗೆ ಶುಲ್ಕ, ಅಮದು ವ್ಯವಹಾರದ ಮೌಲ್ಯ ಸರಿಹೊಂದಿಲ್ಲ. ಹೀಗಾಗಿ ಚೀನಾದ ಕಂಪನಿಗಳು ಭಾರತಕ್ಕೆ ದೊಡ್ಡ ಮಟ್ಟದಲ್ಲಿ ಅಕ್ರಮ ಎಸಗಿರುವುದು ಗೊತ್ತಾಗಿದೆ. ಅಂದ ಹಾಗೇ ಒಪ್ಪೋ, ವಿವೋ, ರೀಲ್ ಮೀ ಅನ್ನುವುದು ಒಂದೇ ಕಂಪನಿಯ ಫೋನ್ ಗಳು. ಮಾರುಕಟ್ಟೆಯಲ್ಲಿ ಗ್ರಾಹಕರ ಕಣ್ಣಿಗೆ ಈ ಸ್ಪರ್ಧಿಗಳಂತೆ ಕಾಣಿಸುತ್ತದೆ. ಆದರೆ ಇವೆಲ್ಲವೂ ಚೀನಾದ ಬಿಬಿಕೆ ಎಲೆಕ್ಟ್ರಾನಿಕ್ ಕಂಪನಿಯ ಭಾಗವಾಗಿದೆ.
ಇದನ್ನೂ ಓದಿ : cheating police : ಡಿಜಿಪಿ ಪಿಎ ನನ್ನ ಫ್ರೆಂಡ್ : ಪೊಲೀಸ್ ಕೆಲಸ ಬೇಕಾದ್ರೆ ಹೇಳು : ನಕಲಿ ಪೊಲೀಸಪ್ಪನ ಅಸಲಿ ಕಥೆ
ಮೊದಲ ಬಹುಮಾನ 25 ಕೋಟಿ ರೂಪಾಯಿ : ಕಮ್ಯುನಿಸ್ಟ್ ಸರ್ಕಾರದಿಂದ ಲಾಟರಿ ಪ್ರಿಯರಿಗೆ ಬಂಪರ್
ಲಾಟರಿಯಿಂದ ಜನ ಸಾಮಾನ್ಯರು ಬೀದಿ ಪಾಲಾಗುತ್ತಾರೆ. ಅದರಲ್ಲಿ ಕಾರ್ಮಿಕರದ್ದು ಸಿಂಹ ಪಾಲು. ಆದರೆ ಕಾರ್ಮಿಕರ ಬಗ್ಗೆ ಮಾತನಾಡುವ ಕಮ್ಯುನಿಸ್ಟ್ ಸರ್ಕಾರ ಲಾಟರಿಯ ( kerala lottery ) ಬೆಂಬಲಕ್ಕೆ ನಿಂತಿದೆ.
ಕೇರಳ : ಈ ಬಾರಿ ಕೇರಳ ಸರ್ಕಾರ ಓಣಂ ಲಾಟರಿ ಭರ್ಜರಿಯಾಗಿ ಮಾರಾಟವಾಗುವುದರಲ್ಲಿ ಅನುಮಾನವಿಲ್ಲ. ಯಾಕಂದ್ರೆ ಪಿಣರಾಯಿ ಸರ್ಕಾರಿ ಕೋಟಿ ಕೋಟಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಅಷ್ಟೇ ಯಾಕೆ ಈ ಬಾರಿ ಓಣಂನಲ್ಲಿ ವಿಜೇತರೆಲ್ಲರೂ ಕೋಟ್ಯಧಿಪತಿಗಳಾಗಲಿದ್ದಾರೆ. ( kerala lottery ) ( ಕೋಟಿ ಆಸೆಗೆ ಬಿದ್ದು ರಾಶಿ ರಾಶಿ ಟಿಕೆಟ್ ಖರೀದಿಸಿ ಬಹುಮಾನ ಬಾರದಿದ್ರೆ ಅವರು ಯಾವುದರ ಅಧಿಪತಿ ಆಗಬಹುದು ಅನ್ನುವುದು ನಿಮ್ಮ ಊಹೆಗೆ ಬಿಟ್ಟ ವಿಚಾರ.)
ಕೇರಳ ರಾಜ್ಯ ಲಾಟರಿ ಇಲಾಖೆ ಓಣಂ 2022ರ ಬಂಪರ್ ಲಾಟರಿ ಯೋಜನೆಯೊಂದನ್ನು ಸರ್ಕಾರದ ಮುಂದಿಟ್ಟಿತ್ತು. ಇದೀಗ ಅದಕ್ಕೆ ಸರ್ಕಾರ ಅನುಮೋದನೆ ಕೊಟ್ಟಿದ್ದು, ಕೋಟಿ ಕೋಟಿ ಮೊತ್ತದ ಟಿಕೆಟ್ ಜುಲೈ 18 ರಿಂದ ಮಾರುಕಟ್ಟೆಯಲ್ಲಿ ಸಿಗಲಿದೆ.
ಈ ಬಾರಿ ಪ್ರಥಮ ಬಹುಮಾನ 25 ಕೋಟಿ ರೂಪಾಯಿ ನಿಗದಿಗೊಳಿಸಲಾಗಿದ್ದು, ದ್ವೀತಿಯ ಬಹುಮಾನ 5 ಕೋಟಿ, ಮತ್ತು ತಲಾ 1 ಕೋಟಿ 10 ತೃತೀಯ ಬಹುಮಾನ ನಿಗದಿಗೊಳಿಸಲಾಗಿದೆ. ಹೀಗಾಗಿ ಒಟ್ಟು 126 ಕೋಟಿ ರೂಪಾಯಿ ಬಹುಮಾನದ ಯೋಜನೆ ಇದಾಗಿದೆ. ಕಳೆದ 4 ವರ್ಷಗಳಿಂದ ಓಣಂ ಸಂದರ್ಭದ ಲಾಟರಿಯ ಮೊದಲ ಬಹುಮಾನವಾಗಿ 12 ಕೋಟಿ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ 25 ಕೋಟಿಗೆ ಏರಿಸಲಾಗಿದೆ. ಈ ಕಾರಣದಿಂದ ಕಳೆದ ವರ್ಷ 300 ರೂಪಾಯಿ ಇದ್ದ ಟಿಕೆಟ್ ಬೆಲೆ ಈ ಬಾರಿ 500 ರೂಪಾಯಿಗೆ ಏರಲಿದೆ. ಸಪ್ಟಂಬರ್ 18 ರಂದು ಈ ಟಿಕೆಟ್ ನ ಡ್ರಾ ನಡೆಯಲಿದೆ. 25 ಕೋಟಿ ರೂಪಾಯಿ ವಿಜೇತರು 15.75 ಕೋಟಿ ರೂಪಾಯಿ ಹಣವನ್ನು ಮನೆಗೆ ಒಯ್ಯಲಿದ್ದಾರೆ. ಅಷ್ಟು ಮಾತ್ರವಲ್ಲದೆ ಮೊದಲ ಬಹುಮಾನ ಪಡೆಯುವ ಟಿಕೆಟ್ ಮಾರಿದ ಎಜೆಂಟ್ ಗೆ 2.5 ಕೋಟಿ ರೂಪಾಯಿ ಕಮಿಷನ್ ಸಿಗಲಿದೆ.
Discussion about this post