ಮೊನ್ನೆ ಮೊನ್ನೆ ಹೊರ ಬಿದ್ದಿ ಪಿಎಸ್ಐ ನೇಮಕಾತಿ ಹಗರಣವನ್ನೇ ಬಂಡವಾಳ ಮಾಡಿಕೊಂಡ ವ್ಯಕ್ತಿಯೊಬ್ಬ ಕಾಸು ಮಾಡಲು ಮುಂದಾಗಿದ್ದ – cheating police
ಬೆಂಗಳೂರು : ನಿವೃತ ಪೊಲೀಸ್ ಅಧಿಕಾರಿ ಎಂದು ನಂಬಿಸಿ ( cheating police ) ಯುವಕರಿಂದ ಕಾಸು ವಸೂಲಿ ಮಾಡಿದ ವ್ಯಕ್ತಿಯೊಬ್ಬನಿಗೆ ಜನರೇ ಧರ್ಮದೇಟು ಕೊಟ್ಟು ಅಸಲಿ ಪೊಲೀಸರಿಗೆ ಒಪ್ಪಿಸಿದ ಘಟನೆ ಆನೇಕಲ್ ನಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ನಿವಾಸಿಯಾಗಿದ್ದ ಜ್ಞಾನಮೂರ್ತಿ, ತಾನೊಬ್ಬ ನಿವೃತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಹೀಗೆ ಅನೇಕಲ್ ಥಳಿ ಮುಖ್ಯರಸ್ತೆಯ ಹೋಟೆಲ್ ಗೆ ಬಂದು, ನಾನೊಬ್ಬ ನಿವೃತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಂದು ಪರಿಚಯಿಸಿ ಡಿಸ್ಕೌಂಟ್ ನಲ್ಲಿ ರೂಮ್ ಕೇಳಿದ್ದ. ಇದನ್ನು ನಂಬಿದ ಹೋಟೆಲ್ ಸಿಬ್ಬಂದಿ ರೂಮ್ ಬೇರೆ ಕೊಟ್ಟಿದ್ದರು.
ಇದನ್ನೂ ಓದಿ : narendra modi :ಮೋದಿ ಕಚೇರಿ ತಲುಪಿದ ಗುಂಡಿ ಬಿದ್ದ ಟೋಲ್ ಗೇಟ್ ರಸ್ತೆಯ ಸುದ್ದಿ
ಆನೇಕಲ್ ಭಾಗದಲ್ಲಿ 80 ಲಕ್ಷ ರೂಪಾಯಿಗೆ ಜಮೀನು ಖರೀದಿಸಿದ್ದೇನೆ. ಆ ವ್ಯವಹಾರ ಮುಗಿಯೋ ತನಕ ನಾನು ಹೋಟೆಲ್ ಬರ್ತಾ ಹೋಗ್ತಾ ಇರ್ತೆನೆ ಎಂದು ಕಥೆ ಬೇರೆ ಹೇಳಿದ್ದ. ಹಾಗೇ ಬಂದು ಹೋಗುತ್ತಿದ್ದ ಜ್ಞಾನಮೂರ್ತಿ, ಬಾರ್ ಸಿಬ್ಬಂದಿ ಕಿಶೋರ್ ಮತ್ತು ಕ್ಯಾಶಿಯರ್ ಆನಂದ್ ಎಂಬವರನ್ನು ಪರಿಚಯಿಸಿಕೊಂಡಿದ್ದ. ಬಳಿಕ ಪೊಲೀಸ್ ಕೆಲಸ ಕೊಡಿಸುವ ಆಮಿಷ ಒಡ್ಡಿದ್ದಾನೆ. ಡಿಜಿಪಿ ಪಿಎ ನನ್ನ ಸ್ನೇಹಿತ ಅಪರಿಚಿತರ ಬಳಿಯಲ್ಲಿ ಫೋನ್ ಮಾತನಾಡಿಸಿ ನಂಬಿಸಿದ್ದ.
ಇದನ್ನೂ ಓದಿ : narendra modi :ಮೋದಿ ಕಚೇರಿ ತಲುಪಿದ ಗುಂಡಿ ಬಿದ್ದ ಟೋಲ್ ಗೇಟ್ ರಸ್ತೆಯ ಸುದ್ದಿ
ಇವನ ಮಾತು ನಂಬಿದ ಆನಂದ್ 30 ಸಾವಿರ ಹಾಗೂ ಕಿಶೋರ್ 45 ಸಾವಿರ ರೂಪಾಯಿ ಹಣ ಕೊಟ್ಟಿದ್ದರು. ಅಲ್ಲಿಗೆ ಇವನ ಆಟ ಮುಗಿದಿರಲಿಲ್ಲ.ಯುವಕರಿಗೆ ನಂಬಿಕೆ ಬರಿಸುವ ನಿಟ್ಟಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಯಾರದ್ದೋ ಬಿಲ್ಡಿಂಗ್ ತೋರಿಸಿದ್ದು, ಮೇಲ್ಗಡೆನೂ ನಂದೇ, ಕೆಳಗಡೆನೂ ನಂದೇ ಅಂದಿದ್ದ.
ಆದರೆ ಆದ್ಯಾಕೋ ಈತನ ಬಿಲ್ಡಪ್ ನೋಡಿದಾಗ ಯುವಕರಿಗೆ ಅನುಮಾನ ಬಂದಿದೆ. ಕಾಸಿನಾಸೆ ಹುಟ್ಟಿಸಿ ಕರೆಸಿಕೊಂಡು ಥಳಿಸಿದ ವೇಳೆ ನಾನು ಅಸಲಿಯಲ್ಲ ನಕಲಿ ಎಂದು ಬಾಯಿ ಬಿಟ್ಟಿದ್ದಾನೆ. ಇದೀಗ ದೂರು ದಾಖಲಿಸಿಕೊಂಡಿರುವ ಅನೇಕಲ್ ಪೊಲೀಸರು ಜ್ಞಾನಮೂರ್ತಿಯ ಹಿನ್ನಲೆ ವಿಚಾರಿಸಿದಾಗ ಸಾಕಷ್ಟು ಮಂದಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.
ಹಿಜಬ್ ಕಡ್ಡಾಯಗೊಳಿಸಿರುವುದನ್ನು ವಿರೋಧಿ ಬೀದಿಗಿಳಿದ ಇರಾನ್ ಮಹಿಳೆಯರು
ಇರಾನ್ ನಲ್ಲಿ ಹಿಜಬ್ ಕಡ್ಡಾಯ. ಆದರೆ ಈ ಆದೇಶದ ವಿರುದ್ಧ ಇರಾನ್ ಮಹಿಳೆಯರು ನಿಂತಿದ್ದಾರೆ. ಹಿಜಾಬ್ ಅನ್ನುವುದು ಇರಾನಿ ಸಂಸ್ಕೃತಿಯಲ್ಲ ಅದು ತಾಲಿಬಾನ್ ಸಂಸ್ಕೃತಿ ಅನ್ನುವುದು ಅವರ ವಾದ
ಕರ್ನಾಟಕದಲ್ಲಿ ಹಿಜಬ್ ಬೇಕು ಅನ್ನುವ ಹೋರಾಟ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸುಪ್ರೀಂಕೋರ್ಟ್ ನಲ್ಲಿ ಇದೇ ಪ್ರಕರಣ ಮುಂದಿನ ವಾರದಿಂದ ವಿಚಾರಣೆಗೆ ಬರಲಿದೆ. ಈ ನಡುವೆ ಇರಾನ್ ನಲ್ಲಿ ಹಿಜಬ್ ವಿರೋಧಿಸಿ ಹೋರಾಟ ತೀವ್ರಗೊಂಡಿದೆ.
ಹಿಜಬ್ ಕಡ್ಡಾಯಗೊಳಿಸಿದ ಸರ್ಕಾರದ ನಿರ್ಧಾರವನ್ನು ಖಂಡಿಸಿ ಇರಾನ್ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಟ್ವೀಟರ್ ನಲ್ಲಿ NO2Hijab ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದ್ದು, ಸಂಚಲನ ಮೂಡಿಸಿದೆ.
ಇರಾನ್ ನಲ್ಲಿ ಮೆಟ್ರೋ, ಸರ್ಕಾರಿ ಕಚೇರಿ, ಬ್ಯಾಂಕ್ ಪ್ರವೇಶ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಹಿಜಬ್ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಸಾರ್ವಜನಿಕ ಪ್ರದೇಶದಲ್ಲಿ ಹಿಜಬ್ ತೆಗೆದು ವಿಡಿಯೋ ಮಾಡಿದರೆ ದೊಡ್ಡ ಶಿಕ್ಷೆಯನ್ನೂ ನೀಡಲಾಗುತ್ತದೆ. ಹೀಗಾಗಿ ಹಿಜಬ್ ಕಡ್ಡಾಯಗೊಳಿಸಿರುವ ನಿಯಮದ ವಿರುದ್ಧ ಹೋರಾಟಗಳು ನಡೆಯುತ್ತಲೇ ಇದೆ.
ಮುಂದುವರಿದ ಭಾಗವಾಗಿ ಜುಲೈ 12 ರಂದು ಬೀದಿಗಿಳಿದ ಪ್ರತಿಭಟನಕಾರರು ಸರ್ಕಾರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಮಗೆ ಹಿಜಬ್ ಬೇಡ ಅಂದಿದ್ದಾರೆ.
Discussion about this post