ಕನ್ನಡ ಚಿತ್ರರಂಗದ ಖ್ಯಾತ ನಟಿ, ಪಂಚಭಾಷ ತಾರೆ ವಿನಯ ಪ್ರಸಾದ್ ಕನ್ನಡದಲ್ಲಿ ಸುಮಾರು 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಚಂದನವನದ ಈ ಸುಂದರ ನಟಿ ಪರಭಾಷೆಯಲ್ಲು ಮಿಂಚುತ್ತಿದ್ದಾರೆ. ಸಿನಿ ಜೀವನದ ಉತ್ತುಂಗಕ್ಕೆ ಏರಿರುವ ವಿನಯ ಪ್ರಸಾದ್ ವೈಯಕ್ತಿಕ ಜೀವನದ ಕಹಿ ಘಟನೆ ಸೈಡಿಗಿಟ್ಟು ದುಖವನ್ನು ಎಲ್ಲಿಯೂ ಹೇಳಿಕೊಳ್ಳದೆ ನಗುತ್ತಲೆ ಜೀವನ ನಡೆಸುತ್ತಿದ್ದಾರೆ.
ತಮ್ಮ ಜೀವನದ ಕಹಿ ಮತ್ತು ಸಿಹಿ ಘಟನೆಗಳನ್ನು ವಿಕೇಂಡ್ ವಿದ್ ರಮೇಶ್ ಕಾರ್ಯಕ್ರಮದಲ್ಲಿ ಮೆಲುಕು ಹಾಕಿರುವ ವಿನಯ ಪ್ರಸಾದ್, ಸಮಾಜದ ಹೆಣ್ಣು ಮಕ್ಕಳಿಗೆ ಲೈಫ್ ಸೂಪರ್ ಅನ್ನಿಸಿಕೊಳ್ಳುವುದು ಹೇಗೆ ಅನ್ನುವುದನ್ನು ತೋರಿಸಿಕೊಂಡಿದ್ದಾರೆ.
ಅದು ಮಧ್ವಾಚಾರ್ಯ ಸಿನಿಮಾ ಸಂದರ್ಭ. ಉಡುಪಿಯಲ್ಲಿದ್ದ ಜಿವಿ ಅಯ್ಯರ್ ಸಿನಿಮಾ ತಯಾರಿಯಲ್ಲಿದ್ದರು. ಆಗ ಮಧ್ವಚಾರ್ಯರನ್ನು ಸ್ವಾಗತಿಸಲು ನಾಲ್ಕೈದು ನಟಿಯರ ಅಗತ್ಯವಿತ್ತು. ಹೀಗಾಗಿ ಈ ಕೆಲಸವನ್ನು ವೀಣಾ ಬನ್ನಂಜೆಯವರಿಗೆ ಒಪ್ಪಿಸಿದಾಗ ಆಗ ಅವರಿಗೆ ಹೊಳೆದದ್ದು ವಿನಯ ಪ್ರಸಾದ್ ಹೆಸರು. ಈ ಮೂಲಕ ವಿನಯಾ ಭಟ್ ಸಿನಿಮಾ ರಂಗಕ್ಕೆ ಕಾಲಿಟ್ಟರು.
Discussion about this post